ಪಲಾವ್ ಎಲೆ ರುಚಿಯ ಜೊತೆಗೆ ಆರೋಗ್ಯಕ್ಕೆ ವರದಾನ: ಹಲವು ರೋಗಗಳಿಗೆ ರಾಮಬಾಣ
ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ನಮಗೆ ಒಣಗಿದ ರೀತಿಯಲ್ಲಿ ಸಿಗುವ ಪಲಾವ್ ಎಲೆ ತನ್ನ ಪರಿಮಳದಲ್ಲಿ ಮಾತ್ರ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಹಲವಾರು ರೈಸ್ ಬಾತ್ ತಯಾರಿಕೆಯಲ್ಲಿ ಇಂದು ಪಲಾವ್ ಎಲೆಗಳಿಗೆ ಅವುಗಳದ್ದೇ ಆದ ರಾಜಮರ್ಯಾದೆ ಇದ್ದೇ ಇದೆ.
ನಾವು ಆಗಾಗ್ಗೆ ವಿವಿಧ ಆಹಾರ ಪದಾರ್ಥಗಳಲ್ಲಿ ಹಾಕುವ ಪಲಾವ್ ಎಲೆಗಳು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎನ್ನುವ ಬಗ್ಗೆ ನಿಮಗೆ ತಿಳಿದಿದೆಯೇ? ಹಾಗಾದರೆ ಪಲಾವ್ ಎಲೆಯಲ್ಲಿರುವ ಆರೋಗ್ಯ ಪ್ರಯೋಜಗಳ ಬಗ್ಗೆ ನೋಡೋಣ..
• ಪಲಾವ್ ಎಲೆಯಲ್ಲಿನ ಲಿನೂಲ್ ಅಂಶವು ನಮ್ಮ ದೇಹದಲ್ಲಿನ ಒತ್ತಡದ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ಕೆಫೀನ್ ಆಮ್ಲ ಮತ್ತು ರುಟಿನ್ ಎರಡೂ ಪ್ರಮುಖ ಸಾವಯವ ಸಂಯುಕ್ತಗಳಾಗಿವೆ, ಇದು ಪಲಾವ್ ಎಲೆಗಳಲ್ಲಿ ಕಂಡುಬರುತ್ತವೆ. ಇದು ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
• ಬೇ ಎಲೆಗಳು ವಿಟಮಿನ್ ಎ ಯ ಅತ್ಯುತ್ತಮ ಮೂಲವಾಗಿದೆ, ಇದು ಕಣ್ಣಿನ ಆರೋಗ್ಯಕ್ಕೆ ಮತ್ತು ಚರ್ಮದ ಆರೋಗ್ಯಕ್ಕೆ ಮುಖ್ಯವಾಗಿದೆ.
• ಪಲಾವ್ ಎಲೆಗಳು ಮಾತ್ರವಲ್ಲದೆ ಹಸಿ ಅರಶಿನ ಕೂಡಾ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ವಿಶೇಷವಾಗಿ ಚಳಿಗಾಲದಲ್ಲಿ ಎಂದು ಲೋವ್ನಿತ್ ಬಾತ್ರಾ ಅವರು ಹೇಳುತ್ತಾರೆ.
• ಪಲಾವ್ ಎಲೆಗಳು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಅದನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.