ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಗ ವಿನಿಶ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಾದಿಯಲ್ಲಿ ಹೆಜ್ಜೆ ಹಾಕಲಿದ್ದಾರೆ..!
ಹೌದು, ಪುನೀತ್ ರಾಜ್ ಕುಮಾರ್ ಅವರಂತೆ ವಿನಿಶ್ ಚಿಕ್ಕವಯಸ್ಸಲ್ಲೇ ಸಿನಿ ಜರ್ನಿ ಆರಂಭಿಸಲಿದ್ದಾರೆ. ವರನಟ ಡಾ. ರಾಜ್ ಕುಮಾರ್ ಅವರ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಕೂಡ ಸಿನಿ ಕ್ಷೇತ್ರದಲ್ಲಿ ಯಶಸ್ಸು ಕಂಡವರು. ಅಷ್ಟೇ ಅಲ್ಲದೆ ರಾಜ್ ಅವರ ಮೂರನೇ ತಲೆಮಾರು , ಅಂದ್ರೆ ಮೊಮ್ಮಕ್ಕಳೂ ಕೂಡ ಸಿನಿ ಜರ್ನಿ ಆರಂಭಿಸಿದ್ದಾರೆ.
ಇದೀಗ ಕನ್ನಡ ಚಿತ್ರರಂಗ ಕಂಡ ಖ್ಯಾತ ನಟರಲ್ಲಿ ಒಬ್ಬರಾದ ತೂಗದೀಪ ಶ್ರೀನಿವಾಸ್ ಅವರ ಕುಟುಂಬದ ಮೂರನೇ ತಲೆಮಾರಿನ ಸಿನಿರಂಗ ಪ್ರವೇಶವಾಗುತ್ತಿದೆ.
ತೂಗದೀಪ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ ದರ್ಶನ್ ಆರಾಮಾಗಿ ಸ್ಯಾಂಡಲ್ ವುಡ್ ನಲ್ಲಿ ನೆಲೆಯೂರಲು ಆಗಿರಲಿಲ್ಲ. ಆರಂಭದ ದಿನಗಳಲ್ಲಿ ದರ್ಶನ್ ಬಹಳ ಕಷ್ಟಪಟ್ಟಿದ್ದರು.
ಅದಿರಲಿ, ಈಗ ಅವರ ಮಗ ವಿನಿಶ್ ಯಾವಾಗ ಸಿನಿಮಾಯಾನ ಆರಂಭಿಸ್ತಾರೆ ಅನ್ನೋದು ಎಲ್ಲರ ಕುತೂಹಲ. ಇದೀಗ ಅದಕ್ಕೆ ಸ್ವತಃ ದರ್ಶನ್ ಅವರೇ ಉತ್ತರ ನೀಡಿದ್ದಾರೆ.
‘ನನ್ನ ಮಗನನ್ನೂ ಇಂಡಸ್ಟ್ರಿಗೆ ತರುತ್ತೇನೆ. ನಾವು ಹೋದ ಮೇಲೆ ನಮ್ಮದೊಂದು ಬ್ರಾಂಡ್ ಬೇಕಲ್ವಾ?’ ಎಂದಿದ್ದಾರೆ ‘ಯಜಮಾನ’.
ಅಂದಹಾಗೆ ದರ್ಶನ್ ಚಿಕ್ಕವಯಸ್ಸಿನಲ್ಲೇ ಮಗನನ್ನು ಇಂಡಸ್ಟ್ರಿಗೆ ಪರಿಚಯಿಸುತ್ತಿದ್ದಾರೆ. ಈ ಮೂಲಕ ಪುನೀತ್ ರಾಜ್ ಕುಮಾರ್ ಅವರು ಚಿಕ್ಕಂದಿನಲ್ಲೇ ಸಿನಿಯಾನ ಆರಂಭಿಸಿದ್ದಂತೆ ದರ್ಶನ್ ಪುತ್ರ ವಿನಿಶ್ ಕೂಡ ಚಿಕ್ಕಂದಿನಲ್ಲೇ ಸಿನಿ ಜರ್ನಿ ಶುರು ಮಾಡ್ತಾ ಇದ್ದಾರೆ.
ಪವರ್ ಸ್ಟಾರ್ ದಾರಿಯಲ್ಲಿ ದರ್ಶನ್ ಪುತ್ರ.!
Date: