ಪಾಂಡ್ಯ ಬ್ರದರ್ಸ್ ಫ್ಲಾಪ್ ಶೋ

0
43

ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಇಬ್ಬರೂ ಸಹ ಟಿ ಟ್ವೆಂಟಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ಎಂದು ಖ್ಯಾತಿಯನ್ನು ಪಡೆದಿದ್ದರು. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸತತವಾಗಿ ಈ ಇಬ್ಬರೂ ಆಟಗಾರರಿಗೆ ಸ್ಥಾನವನ್ನು ಸಹ ನೀಡಲಾಗುತ್ತಿದೆ. ಆದರೆ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿ ಪಾಂಡ್ಯ ಬ್ರದರ್ಸ್‌ಗೆ ಇಷ್ಟು ವರ್ಷಗಳಲ್ಲಿ ಅತಿ ಕೆಟ್ಟ ಅನುಭವವನ್ನು ನೀಡುತ್ತಿರುವ ಐಪಿಎಲ್ ಟೂರ್ನಿಯಾಗಿದೆ.

ಕಳೆದ ಐಪಿಎಲ್ ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್‌ ಆಡುತ್ತಿದ್ದ ಈ ಜೋಡಿ ಈ ಬಾರಿ ಯಾರೂ ಊಹಿಸದಷ್ಟು ಮಟ್ಟದಲ್ಲಿ ಮುಗ್ಗರಿಸಿದೆ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಒಟ್ಟು 5 ಪಂದ್ಯಗಳನ್ನಾಡಿರುವ ಹಾರ್ದಿಕ್ ಪಾಂಡ್ಯ ಗಳಿಸಿರುವುದು ಕೇವಲ 36 ರನ್ ಮತ್ತು ಹಾರ್ದಿಕ್ ಪಾಂಡ್ಯ ಯಾವುದೇ ವಿಕೆಟ್ ಪಡೆಯದೇ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಮಂಕಾಗಿದ್ದಾರೆ. ಇತ್ತ ಕೃನಾಲ್ ಪಾಂಡ್ಯ ಸಹ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಕೆಟ್ಟ ಫಾರ್ಮ್‌ನಲ್ಲಿದ್ದಾರೆ, ಇದುವರೆಗೂ ಒಟ್ಟು 5 ಪಂದ್ಯಗಳನ್ನಾಡಿರುವ ಕೃನಾಲ್ ಗಳಿಸಿರುವುದು ಕೇವಲ 29 ರನ್ ಹಾಗೂ ಕೃನಾಲ್ ಪಾಂಡ್ಯ ಇದುವರೆಗೂ ಕೇವಲ 3 ವಿಕೆಟ್ ಪಡೆದು ನೀರಸ ಪ್ರದರ್ಶನವನ್ನು ನೀಡಿದ್ದಾರೆ.

ಪಾಂಡ್ಯ ಬ್ರದರ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸಾಧಿಸಿರುವ ಈ ಅಂಕಿ ಅಂಶಗಳನ್ನು ನೋಡಿದರೆ ಇಬ್ಬರೂ ಸಹ ಎಷ್ಟು ಕೆಟ್ಟ ಸ್ಥಾನದಲ್ಲಿದ್ದರೆ ಎಂಬುದು ತಿಳಿದುಬರುತ್ತದೆ. ಅದರಲ್ಲಿಯೂ ಹಾರ್ದಿಕ್ ಪಾಂಡ್ಯ ಇಷ್ಟು ಕೆಟ್ಟ ಪ್ರದರ್ಶನವನ್ನು ನೀಡುತ್ತಾರೆಂದು ಯಾರೊಬ್ಬರೂ ಊಹಿಸಿರಲಿಲ್ಲ. ಕೇವಲ ಇಷ್ಟು ಮಾತ್ರವಲ್ಲದೆ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 5 ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಎಲ್ಲಾ ಆಟಗಾರರ ಪೈಕಿ ಸಿಕ್ಸರ್ ಬಾರಿಸದೆ ವಿಫಲರಾಗಿರುವುದು ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಮಾತ್ರ. ಹೌದು ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಹೊರತುಪಡಿಸಿ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ 5 ಇನ್ನಿಂಗ್ಸ್‌ನಲ್ಲಿಯೂ ಬ್ಯಾಟಿಂಗ್ ಮಾಡಿರುವ ಎಲ್ಲಾ ಆಟಗಾರರು ಸಹ ಸಿಕ್ಸರ್ ಬಾರಿಸಿದ್ದಾರೆ.

 

 

ಹೀಗೆ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅತಿ ಕಳಪೆ ಪ್ರದರ್ಶನ ನೀಡುವ ಮೂಲಕ ಕೆಟ್ಟ ಸ್ಥಾನದಲ್ಲಿರುವ ಪಾಂಡ್ಯ ಬ್ರದರ್ಸ್ ಮುಂಬರುವ ಮುಂಬೈ ಇಂಡಿಯನ್ಸ್ ತಂಡದ ಪಂದ್ಯಗಳಲ್ಲಿ ಪುಟಿದೇಳುತ್ತಾರಾ ಕಾದು ನೋಡಬೇಕು. ಗುರುವಾರ ( ಏಪ್ರಿಲ್ 29 ) ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಸೆಣಸಾಡಲಿದೆ.

LEAVE A REPLY

Please enter your comment!
Please enter your name here