ಪಾಕಿಸ್ತಾನ್ ಸೂಪರ್ ಲೀಗ್ ಟಾಪ್ ಎಂದ ಆ್ಯಂಡ್ರೆ ರಸೆಲ್!

1
60

ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿ ಕೊರೊನಾವೈರಸ್ ಕಾರಣದಿಂದ ಮುಂದೂಡಲ್ಪಟ್ಟಿದ್ದ 6ನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್ ಜೂನ್ 9ರಿಂದ ಯುಎಇಯಲ್ಲಿ ಪುನರಾರಂಭವಾಗಲಿದೆ. ಟೂರ್ನಿಯಲ್ಲಿ ಉಳಿದಿರುವ 20 ಪಂದ್ಯಗಳನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಯುಎಇಯಲ್ಲಿ ಆಯೋಜನೆ ಮಾಡಿದೆ.


ಜೂನ್ 9ರಿಂದ ಪಾಕಿಸ್ತಾನ್ ಸೂಪರ್ ಲೀಗ್ ಮುಂದುವರಿಯುವ ಕಾರಣ ಈಗಾಗಲೇ ಆಟಗಾರರು ಅಬುಧಾಬಿಯನ್ನು ತಲುಪಿದ್ದಾರೆ. ಇದೇ ವೇಳೆ ಕ್ವೆಟ್ಟಾ ಗ್ಲೇಡಿಯೇಟರ್ಸ್ ತಂಡದ ಆಟಗಾರ ಆ್ಯಂಡ್ರೆ ರಸೆಲ್ ಪಿಎಸ್ಎಲ್ ಟೂರ್ನಿಯ ಕುರಿತು ಮಾತನಾಡಿದ್ದು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವುದರ ಮೂಲಕ ಚರ್ಚೆಗೀಡಾಗಿದ್ದಾರೆ.


‘ನಾನು ಐಪಿಎಲ್ ಆಡುತ್ತೇನೆ, ಬಿಗ್ ಬ್ಯಾಶ್ ಲೀಗ್‌ನಲ್ಲಿ ಆಡುತ್ತೇನೆ, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡುತ್ತೇನೆ ಹಾಗೂ ವಿಶ್ವದ ಇತರ ಕ್ರಿಕೆಟ್ ಲೀಗ್‌ಗಳಲ್ಲಿಯೂ ಆಡುತ್ತೇನೆ. ಅದೇ ರೀತಿ ಪಾಕಿಸ್ತಾನ್ ಕ್ರಿಕೆಟ್ ಲೀಗ್‌ನಲ್ಲಿ ಕೂಡ ನಾನು ಆಡಿದ್ದು ವಿಶ್ವದ ಟಾಪ್ ಕ್ರಿಕೆಟ್ ಲೀಗ್‌ಗಳ ಮುಂದೆ ಪಿಎಸ್ಎಲ್ ಕಡಿಮೆಯೇನಲ್ಲ ಎಂದು ಹೇಳಲು ಇಷ್ಟಪಡುತ್ತೇನೆ. ಪಾಕಿಸ್ತಾನ್ ಕ್ರಿಕೆಟ್ ಲೀಗ್‌ನಲ್ಲಿನ ಕ್ರಿಕೆಟ್ ಗುಣಮಟ್ಟ ಹಾಗೂ ಕಷ್ಟಕರವೆನಿಸುವ ಬೌಲಿಂಗ್ ಟೂರ್ನಿಯನ್ನು ಉನ್ನತ ಮಟ್ಟಕ್ಕೇರಿಸಿವೆ’ ಎಂದು ಆ್ಯಂಡ್ರೆ ರಸೆಲ್ ಹೇಳಿದ್ದಾರೆ.

1 COMMENT

LEAVE A REPLY

Please enter your comment!
Please enter your name here