ವಿಜಯನಗರ:- ಪಾಕಿಸ್ತಾನ ಎಂದೆಂದಿಗೂ ನಮ್ಮ ಶತ್ರೂನೆ, ಯುದ್ದಕ್ಕೆ ಬೇಕಾದ್ರೂ ಸಿದ್ಧ ಎಂದು ವಸತಿ ಸಚಿವ ಜಮೀರ್ ಖಾನ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಎಂದಿಗೂ ನಮಗೆ ಸಂಬಂಧವಿಲ್ಲ. ಪಾಕಿಸ್ತಾನ ಯಾವತ್ತಿಗೂ ನಮ್ಮ ಶತ್ರು ದೇಶನೇ. ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಯುದ್ಧ ಸಾರಲಿ, ಮೋದಿ, ಅಮಿತ್ ಷಾ ಮತ್ತು ಕೇಂದ್ರ ಸರ್ಕಾರ ನನಗೆ ಅವಕಾಶ ಕೊಡಲಿ, ನಾನು ಯುದ್ಧ ಮಾಡೋದಕ್ಕೆ ಸಿದ್ಧ ಎಂದರು.
ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಕೊಲೆ ಪ್ರಕರಣವಾಗಿ ಮಾತನಾಡಿ, ಕೊಲೆಯಾಗಿದೆ, ಕೊಲೆಯಾಗಬಾರದಾಗಿತ್ತು ಸತ್ತಿರೋರು ರೌಡಿ ಶೀಟರ್ ಅಂತೆ. ಹಿಂದೆ ಕೊಲೆ ಕೇಸ್ ನಲ್ಲಿದ್ರಂತೆ, ಪೊಲೀಸರು ತನಿಖೆ ಮಾಡುತ್ತಾರೆ ಎಂದರು.