ಶುಕ್ರವಾರ (ಏಪ್ರಿಲ್ 23) ನಡೆದ ಜಿಂಬಾಬ್ವೆ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಜಿಂಬಾಬ್ವೆ ಪಾಕಿಸ್ತಾನದ ವಿರುದ್ಧ 19 ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿತು. 119 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ತಂಡ 19.5 ಓವರ್‌ಗಳಲ್ಲಿ 99 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ಜಿಂಬಾಬ್ವೆ ವಿರುದ್ಧ 19 ರನ್‌ಗಳ ಸೋಲನ್ನು ಕಂಡಿತು. ಟಿ ಟ್ವೆಂಟಿ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಪಂದ್ಯವೊಂದನ್ನು ಸೋತಿತು. ಈ ಗೆಲುವಿನ ಮೂಲಕ ಜಿಂಬಾಬ್ವೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸಮಬಲ ಸಾಧಿಸಿದೆ.
ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಈ ಪಂದ್ಯವನ್ನು ಸೋತ ನಂತರ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನ ತಂಡವನ್ನು ದೊಡ್ಡಮಟ್ಟದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಚಿಕ್ಕ ತಂಡವಾದ ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಕಂಡ ಪಾಕಿಸ್ತಾನ ವಿಶ್ವ ಕ್ರಿಕೆಟ್ ಅಭಿಮಾನಿಗಳೆದುರು ಅವಮಾನಕ್ಕೊಳಗಾಯಿತು. ಈ ಸೋಲಿನ ಕುರಿತು ಪಾಕಿಸ್ತಾನದ ಹಲವಾರು ಆಟಗಾರರು ಮತ್ತು ಮಾಜಿ ಆಟಗಾರರು ತಂಡದ ಸಮಸ್ಯೆ ಮತ್ತು ಲೋಪಗಳ ಬಗ್ಗೆ ಕಿಡಿಕಾರಿದ್ದಾರೆ.
ಪಾಕಿಸ್ತಾನದ ಆಟಗಾರ ಶೋಯೆಬ್ ಮಲಿಕ್ ಕೂಡ ಪಾಕಿಸ್ತಾನದ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿದ್ದು ತಂಡದ ಕೋಚ್ ವಿರುದ್ಧ ಹರಿಹಾಯ್ದಿದ್ದಾರೆ. ಪಾಕಿಸ್ತಾನ ತಂಡದ ಮಾಜಿ ಆಟಗಾರ ಮಿಸ್ಬಾ ಉಲ್ ಹಕ್ ಸದ್ಯ ಪಾಕಿಸ್ತಾನ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೋಯೆಬ್ ಮಲಿಕ್ ಅವರು ಪಾಕಿಸ್ತಾನದ ಸೋಲಿನ ಬೆನ್ನಲ್ಲೇ ಕೋಚ್ ಮಿಸ್ಬಾ ಉಲ್ ಹಕ್ ನಿರ್ಧಾರಗಳನ್ನು ಟೀಕಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂಡಕ್ಕೆ ಕ್ರಿಕೆಟ್‌ನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಂತಹ ಕೋಚ್‌ನ ಅಗತ್ಯವಿದೆ, ತಮಗನ್ನಿಸಿದ ರೀತಿ ವೈಯಕ್ತಿಕವಾಗಿ ತಂಡದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಜನರು ತಂಡದಿಂದ ಸ್ವಲ್ಪ ಹಿಂದೆ ಉಳಿಯಬೇಕಿದೆ. ಕ್ರಿಕೆಟ್‌ನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಹಾಗೂ ತಂಡವನ್ನು ಸರಿಯಾದ ರೀತಿ ಬಳಸುವ ಕೋಚ್‌ನ ಅಗತ್ಯತೆ ಪಾಕಿಸ್ತಾನ ತಂಡಕ್ಕಿದೆ ಎಂದು ಮಿಸ್ಬಾ ಉಲ್ ಹಕ್ ವಿರುದ್ಧ ಶೋಯೆಬ್ ಮಲಿಕ್ ಕಿಡಿಕಾರಿದ್ದಾರೆ.