ಪಾಕ್ ನ ಈ ಆಟಗಾರನಿಗೆ ಐಪಿಎಲ್ ಅವಕಾಶ!

0
49

ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ 2020ರ ಡಿಸೆಂಬರ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವುದರ ಮೂಲಕ ಎಲ್ಲರಲ್ಲಿಯೂ ಅಚ್ಚರಿಯನ್ನುಂಟುಮಾಡಿದ್ದರು. ಮೊಹಮ್ಮದ್ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದಾಗ ಅವರಿಗೆ ಕೇವಲ 28ರ ಹರೆಯ. ಅಂತಾರಾಷ್ಟ್ರೀಯ ನಿವೃತ್ತಿಯ ಬಳಿಕ ಇದೀಗ ಇಂಗ್ಲೆಂಡ್‌ನಲ್ಲಿ ಕುಟುಂಬ ಸಮೇತರಾಗಿ ಮೊಹಮ್ಮದ್ ಅಮೀರ್ ನೆಲೆಸಿದ್ದಾರೆ.

 

 

ಇತ್ತೀಚೆಗಷ್ಟೆ ನಿವೃತ್ತಿ ಘೋಷಿಸಿದ್ದ ಕಾರಣದ ಕುರಿತು ಮಾತನಾಡಿದ್ದ ಮೊಹಮ್ಮದ್ ಅಮೀರ್ ಇದೀಗ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವುದರ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಪಾಕಿಸ್ತಾನ ಬಿಟ್ಟು ಇಂಗ್ಲೆಂಡ್‌ನಲ್ಲಿ ನೆಲೆಸುವವರು ಇಂಗ್ಲೆಂಡ್ ದೇಶದ ಪೌರತ್ವವನ್ನು ಪಡೆದುಕೊಳ್ಳಬಹುದು. ಹೀಗೆ ಇಂಗ್ಲೆಂಡ್ ದೇಶದ ಪೌರತ್ವವನ್ನು ಪಡೆದುಕೊಂಡ ನಂತರ ಮೊಹಮ್ಮದ್ ಅಮೀರ್ ಇಂಗ್ಲೆಂಡ್ ಆಟಗಾರನಾಗಿ ಐಪಿಎಲ್‌ನಲ್ಲಿ ಭಾಗವಹಿಸಲು ಅವಕಾಶವಿದೆ. ಹೀಗಾಗಿ ಇತ್ತೀಚಿನ ಸಂದರ್ಶನದಲ್ಲಿ ‘ಇಂಗ್ಲೆಂಡ್ ಪೌರತ್ವ ಪಡೆದ ನಂತರ ಟೂರ್ನಿಗಳಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ಆಲೋಚನೆಯನ್ನು ನಡೆಸಿಲ್ಲ, ಆದರೆ ಖಂಡಿತವಾಗಿಯೂ ನಾನು ಮುಂದಿನ 6-7 ವರ್ಷಗಳ ಕಾಲ ಕ್ರಿಕೆಟ್ ಆಡುತ್ತೇನೆ’ ಎಂದು ಮೊಹಮ್ಮದ್ ಅಮೀರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 

 

ನಿಮಗೆಲ್ಲಾ ತಿಳಿದಿರುವ ಹಾಗೆ ಐಪಿಎಲ್ ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರಿಗೆ ಭಾಗವಹಿಸುವ ಅವಕಾಶವಿಲ್ಲ. ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಮಾತ್ರ ಪಾಕಿಸ್ತಾನ ಆಟಗಾರರಿಗೆ ಐಪಿಎಲ್ ಆಡುವ ಅವಕಾಶವಿತ್ತು ತದನಂತರ ಪಾಕ್ ಆಟಗಾರರನ್ನು ನಿರ್ಬಂಧಿಸಲಾಯಿತು. ಆದರೆ ಅಜರ್ ಮಹ್ಮೂದ್ ಎಂಬ ಪಾಕ್ ಆಟಗಾರ ಬ್ರಿಟಿಷ್ ಪೌರತ್ವ ಪಡೆದು ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಿ ಪಂಜಾಬ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಟವಾಡಿದ್ದ.

LEAVE A REPLY

Please enter your comment!
Please enter your name here