ಪಾಕ್ ಪತ್ರಕರ್ತನಿಗೆ ಮುಟ್ಟಿನೋಡುಕೊಳ್ಳುವಂತ ಉತ್ತರ ಕೊಟ್ಟ ಕೊಹ್ಲಿ

Date:

ಟಿ20 ವಿಶ್ವಕಪ್ ಸೂಪರ್ 12ರ ಘಟ್ಟದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಮೊದಲ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಕೊಹ್ಲಿ ನೇತೃತ್ವದ ಭಾರತ ತಂಡ ಹೀನಾಯ ಸೋಲುಂಡಿದೆ. ದುಬೈನ ಮೊದಲ ಪಂದ್ಯದಲ್ಲಿ ಸೋತ ಬಳಿಕ, ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯರು ಸೇರಿದಂತೆ ಪಾಕಿಸ್ತಾನದ ಪತ್ರಕರ್ತರು ಇದ್ದರು. ಈ ವೇಳೆ ಪಾಕ್ ಪತ್ರಕರ್ತ, ಭಾರತದ ಆಟಗಾರರ ಆಯ್ಕೆ ಬಗ್ಗೆ ಅನೇಕರು ಪ್ರಶ್ನೆ ಎತ್ತಿದ್ದಾರೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಸ್ಥಾನದಲ್ಲಿ ಇಶಾನ್ ಕಿಶನ್ 11ರ ತಂಡದಲ್ಲಿ ಸೇರ್ಪಡೆಯಾಗುತ್ತಾರೆಯೇ ಅಂತಾ ಪ್ರಶ್ನೆ ಮಾಡಿದರು.

ನೀವು ಬಹದ್ದೂರ್ ಪ್ರಶ್ನೆಯನ್ನೇ ಕೇಳಿದ್ದೀರಿ. ನಾನು ಅತ್ಯುತ್ತಮ ತಂಡದೊಂದಿಗೆ ಆಡಿದ್ದೇನೆ. ನೀವೇನು ಮಾಡುತ್ತೀರಿ.? ರೋಹಿತ್ ಶರ್ಮಾ ಅವರನ್ನು ಟಿ-20 ತಂಡದಿಂದ ಕೈಬಿಡಬೇಕಾ? ಕಳೆದ ಪಂದ್ಯದಲ್ಲಿ ಅವರು ಏನು ಮಾಡಿದ್ದಾರೆ ನಿಮ್ಗೆ ಗೊತ್ತಾ? ನಿಮಗೆ ಯಾವುದೇ ವಿವಾದ ಬೇಕಾಗಿದ್ದಲ್ಲಿ ನೇರವಾಗಿ ಹೇಳಿ. ನಾನು ಅದೇ ದಾಟಿಯಲ್ಲಿ ನಿಮ್ಗೆ ಉತ್ತರ ಕೊಡುತ್ತೇನೆ ಅಂತಾ ವಿರಾಟ್ ಕೊಹ್ಲಿ ಪಾಕಿಸ್ತಾನ ಪತ್ರಕರ್ತನಿಗೆ ಹೇಳಿದರು. ವಿರಾಟ್ ಕೊಹ್ಲಿಯ ಉತ್ತರ ಕೇಳಿ ಪಾಕಿಸ್ತಾನ ಪತ್ರಕರ್ತರನ ಮೈ ಚಳಿ ಬಿಟ್ಟಿತ್ತು.

 

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ ಬೆಳಗಾವಿ: ರಾಜ್ಯದ ವಿವಿಧ ಅಗ್ನಿಶಾಮಕ...

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್ ಫಿಲ್ಮ್

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್...

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್. ವೈದ್ಯ

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್....

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ ಮಾಡಲು ಪ್ರಸ್ತಾವನೆ: ಡಿ.ಕೆ.ಶಿವಕುಮಾರ್

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ...