ಪಾಕಿಸ್ತಾನ ಮತ್ತು ಆ ದೇಶದ ಪ್ರಧಾನಿ ಜಾಗತಿಕಮಟ್ಟದಲ್ಲಿ ಮುಜುಗರಕ್ಕೊಳಗಾಗುವುದು ಹೊಸದಲ್ಲ. ಮಾಜಿ ಕ್ರಿಕೆಟಿಗ , ಈಗಿನ ಪ್ರಧಾನಿ ಇಮ್ರಾನ್ ಖಾನ್ ಕೂಡ ಇದರಿಂದ ಹೊರತಲ್ಲ. ಇಮ್ರಾನ್ ಬೇರೆ ದೇಶಗಳಿಂದ ಅಥವಾ ವಿಶ್ವಸಂಸ್ಥೆಯಿಂದ ಅಥವಾ ಇನ್ಯಾರಿಂದಲೋ ಈ ಬಾರಿ ಅವಮಾನಕ್ಕೀಡಾಗಿಲ್ಲ…ಮಾಜಿ ಪತ್ನಿಯಿಂದಲೇ ಜಾಗತಿಕಮಟ್ಟದಲ್ಲಿ ಅವಮಾನಕ್ಕೀಡಾಗಿದ್ದಾರೆ ಇಮ್ರಾನ್.
ಹೌದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಯಾವಾಗಲೂ ಕಿಡಿಕಾರುವ ಮಾಜಿ ಪತ್ನಿ ರೆಹಂ ಖಾನ್ ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಇಮ್ರಾನ್ ಖಾನ್ ವಿದೇಶದಿಂದ ಅಕ್ರಮ ಹಣ ಪಡೆದಿರುವುದಾಗಿ ರೆಹಂ ಟ್ವಿಟರ್ ಮೂಲಕ ಇಮ್ರಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಇಮ್ರಾನ್ ಖಾನ್ ವಿದೇಶದಿಂದ ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ. ಇದಕ್ಕಾಗಿ ಆಸ್ಟ್ರೇಲಿಯಾ ಮತ್ತು ಅಮೆರಿಕಾಗಳಲ್ಲಿ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಅಮೆರಿಕಾದಲ್ಲಿ ಪಿಟಿಐ ಪಾರ್ಟಿಯ ಅಧ್ಯಕ್ಷ ಇಮ್ರಾನ್ ಖಾನ್ ಸಿಗ್ನೇಚರ್ ನಲ್ಲಿ ಎರಡು ಕಂಪನಿ ತೆರೆಯಲಾಗಿದೆ. ಆಸ್ಟ್ರೇಲಿಯಾದಲ್ಲಿ Insaf Australia Inc. ಎಂಬ ಕಂಪನಿ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಕಂಪನಿಗಳಿಂದ ಅಕ್ರಮವಾಗಿ ಹಣವನ್ನು ಪಡೆಯುತ್ತಿದ್ದಾರೆ ಎಂದು ಟ್ವಿಟರ್ ನಲ್ಲಿ ವಿಡಿಯೋ ಹಾಕಿರುವ ರೆಹಂ ಹೇಳಿದ್ದಾರೆ.