ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಡುವ ಪ್ರತಿಯೊಂದು ಪಂದ್ಯದಲ್ಲೂ ಒಂದಲ್ಲ ಒಂದು ದಾಖಲೆಯನ್ನು ಬರೆಯುತ್ತಲೇ ಇದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಗಳೂ ಸೇರಿದಂತೆ ಅನೇಕ ದಿಗ್ಗಜರ ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ. ಸಾಲು ಸಾಲು ದಾಖಲೆಗಳನ್ನು ವಿರಾಟ್ ತಮ್ಮ ಹೆಸ್ರಿಗೆ ಬರೆಸಿಕೊಳ್ಳುತ್ತಿದ್ದಾರೆ.
229 ಏಕದಿನ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 221 ಇನ್ನಿಂಗ್ಸ್ಗಳಿಂದ 10, 943ರನ್ ಗಳಿಸಿದ್ದಾರೆ. 11 ಸಾವಿರ ರನ್ ಗಡಿ ದಾಟಲು ಕೊಹ್ಲಿಗೆ ಬೇಕಾಗಿರುವುದು ಕೇವಲ 57ರನ್ ಮಾತ್ರ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲೇ ಕೊಹ್ಲಿ ಈ ದಾಖಲೆ ನಿರ್ಮಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆ ಸಾಧ್ಯತೆಯೂ ಕೊಹ್ಲಿ ಅವರಿಗಿತ್ತು. ಆದರೆ, ಆ ಪಂದ್ಯ ಮಳೆಯಿಂದಾಗಿ ರದ್ದಾಯಿತು.
ಇಂದು ಭಾರತ ಪಾಕಿಸ್ತಾನದ ವಿರುದ್ಧ ಆಡಲಿದ್ದು, ಈ ಪಂದ್ಯದಲ್ಲಿ ಕೊಹ್ಲಿ 11 ಸಾವಿರ ರನ್ ಗಡಿ ದಾಟುವ ಸಾಧ್ಯತೆ ಇದೆ. ವಿರಾಟ್ ಇಂದು 11 ಸಾವಿರ ರನ್ ಗಡಿ ದಾಟಿದರೆ ಅತೀ ವೇಗವಾಗಿ 11 ಸಾವಿರ ರನ್ ಮಾಡಿದ ಕೀರ್ತಿ ಟೀಮ್ ಇಂಡಿಯಾದ ನಾಯಕನ ಪಾಲಾಗಲಿದೆ. ಸಚಿನ್ ತೆಂಡೂಲ್ಕರ್ 276 ಇನ್ನಿಂಗ್ಸ್ ಗಳಿಂದ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿಪಾಂಟಿಂಗ್ 288 ಇನ್ನಿಂಗ್ಸ್ಗಳಿಂದ 11 ಸಾವಿರ ಮೈಲುಗಲ್ಲು ತಲುಪಿದ್ದರು. ಕೊಹ್ಲಿ ವೇಗವಾಗಿ ಈ ಸಾಧನೆ ಮಾಡಲಿದ್ದಾರೆ. 10 ಸಾವಿರ ರನ್ ಗಳನ್ನು ಕೂಡ ಕೊಹ್ಲಿ ವೇಗವಾಗಿ ದಾಖಲಿಸಿದ ಕೀರ್ತಿ ಪಡೆದಿದ್ದರು.
ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲೇ ನೂತನ ದಾಖಲೆ ನಿರ್ಮಿಸಲಿ ಎನ್ನುವುದು ಅಭಿಮಾನಿಗಳ ಆಶಯ.
ಪಾಕ್ ವಿರುದ್ಧದ ಪಂದ್ಯದಲ್ಲೇ ಈ ದಾಖಲೆ ಬರೆಯುತ್ತಾರಾ ರನ್ ಮಷಿನ್ ಕೊಹ್ಲಿ?
Date:






