ವಿಶ್ವಕಪ್ ಸಡಗರ ಜೋರಾಗಿದ್ದರೂ ಮಳೆಯ ಆರ್ಭಟಕ್ಕೆ 4 ಪಂದ್ಯಗಳು ಕೊಚ್ಚಿ ಹೋಗಿವೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯ ಕೂಡ ಮಳೆಯಿಂದಾಗಿ ರದ್ದಾಗಿದೆ.
ಸೂಪರ್ ಸಂಡೆಯಾದ ನಾಳೆ ಇಡೀ ವಿಶ್ವವೇ ಎದುರು ನೋಡುತ್ತಿರುವ ಪಂದ್ಯ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೋರಾಟ ನಾಳೆ ನಡೆಯಲಿದೆ.
ಭಾರತ ಮತ್ತು ಪಾಕಿಸ್ತಾನ್ ನಡೆವಿನ ಪಂದ್ಯ ಎಂದರೆ ಯಾವಾಗಲೂ ಕುತೂಹಲ ಜಾಸ್ತಿ. ಅಂತೆಯೇ ನಾಳೆ ನಡೆಯುವ ಪಂದ್ಯದ ಮೇಲೂ ನಿರೀಕ್ಷೆ ಹೆಚ್ಚಿದೆ.
ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದಿದೆ. ನ್ಯೂಜಿಲೆಂಡ್ ವಿರುದ್ಧವೂ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ , ಮಳೆಯಿಂದ ಆ ಪಂದ್ಯ ರದ್ದಾಯಿತು. ಪಾಕ್ ವಿರುದ್ಧ ಭರ್ಜರಿ ಜಯ ದಾಖಲಿಸುವ ನಿರೀಕ್ಷೆ ಇದೆ.
ಪುಲ್ವಾಮಾ ದಾಳಿಯ ಬಳಿಕ ಭಾರತ ಪಾಕ್ ವಿರುದ್ಧ ವಿಶ್ವಕಪ್ ನಲ್ಲಿ ಆಡ ಬಾರದು ಎಂಬ ಕೂಗು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಭಾರತ – ಪಾಕಿಸ್ತಾನ ವಿರುದ್ಧ ಆಡುತ್ತಿದೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಶತಕ ಸಿಡಿಸಿದ್ದ ಶಿಖರ್ ಧವನ್ ಅದೇ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. ಅವರು ಈ ಪಂದ್ಯಕ್ಕೆ ಅಲಭ್ಯರು. ಆದ್ದರಿಂದ ಕನ್ನಡಿಗ ಕೆ.ಎಲ್ ರಾಹುಲ್ ಅವರು ಆರಂಭಿಕರಾಗಿ ಆಡುವುದು ಕನ್ಫರ್ಮ್. 4 ನೇ ಕ್ರಮಾಂಕಕ್ಕೆ ದಿನೇಶ್ ಕಾರ್ತಿಕ್ ಬರ್ತಾರಾ ಅಥವಾ ವಿಜಯ್ ಶಂಕರ್ ಗೆ ಅವಕಾಶ ಸಿಗುತ್ತಾ ಎಂಬುದನ್ನು ಕಾದು ನೋಡಬೇಕು. ಇಲ್ಲವೇ ರವೀಂದ್ರ ಜಡೇಜಾ ಅವರಿಗೆ ಮಣೆ ಹಾಕಿದರೂ ಆಶ್ಚರ್ಯವಿಲ್ಲ.
ಈ ಮಹಾ ಕದನದಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸೆಂಚುರಿ ಬಾರಿಸುತ್ತಾರೆ ಎಂಬ ನಿರೀಕ್ಷೆ ಹೆಚ್ಚಿದೆ. ವಿರಾಟ್ ಶತಕ ಪಕ್ಕಾ ಎಂತಿದ್ದಾರೆ ಫ್ಯಾನ್ಸ್.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಓಪನರ್ ರೋಹಿತ್ ಶರ್ಮಾ ಶತಕ ಸಿಡಿಸಿದ್ದರು. 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮತ್ತೊಬ್ಬ ಆರಂಭಿಕ ಆಟಗಾರ ಶಿಖರ್ ಧವನ್ ಶತಕ ಸಿಡಿಸಿ ಅಬ್ಬರಿಸಿದ್ದರು. ಹೀಗೆ ಸತತ ಎರಡು ಪಂದ್ಯಗಳಲ್ಲಿ ಆರಂಭಿಕರು ಶತಕಗಳಿಸಿದ್ದು, ಮೂರನೇ ಶತಕ ಒನ್ ಡೌನ್ ಅಂದರೆ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಆಟಗಾರ ನಾಯಕ ವಿರಾಟ್ ಕೊಹ್ಲಿಯದ್ದೇ ಎಂದು ಒಂದಿಷ್ಟು ಮಂದಿ ಭವಿಷ್ಯ ನುಡಿಯುತ್ತಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಪಂದ್ಯ ನಡೆದಿದ್ದರೆ ಅದು 3ನೇ ಪಂದ್ಯ ಆಗಿರುತ್ತಿತ್ತು. ಆ ಪಂದ್ಯ ಮಳೆಯಿಂದಾಗಿ ರದ್ದಾಗಿರುವುದರಿಂದೇ ಅಂದು ವಿರಾಟ್ ಸೆಂಚುರಿ ಮಿಸ್ ಆಗಿದೆ..! ಇನ್ನು ಇದು 4ನೇ ಪಂದ್ಯವಾಗಿರುವುದರಿಂದ 4ನೇಕ್ರಮಾಂಕ್ಕೆ ಫಿಕ್ಸ್ ಆಗಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಸೆಂಚುರಿ ಬಾರಿಸುತ್ತಾರೆ ಎಂಬ ಚರ್ಚೆಯೂ ಅಭಿಮಾನಿಗಳಲ್ಲಿದೆ. ರಾಹುಲ್ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದು, ಈಗಾಗಲೇ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ಧವನ್ ಹಾಗೂ ರೋಹಿತ್ ಶತಕ ಸಿಡಿಸಿದ್ದರಿಂದ ಈಗ ಓಪನರ್ ಆಗಿ ಕಣಕ್ಕಿಳಿಯಲಿರುವ ರಾಹುಲ್ ಸೆಂಚುರಿ ಸಿಡಿಸುತ್ತಾರೆ ಎಂಬ ನಿರೀಕ್ಷೆ ಸಹ ಇದೆ.