ಪಾಕ್ ವಿರುದ್ಧ ಸೋಲು; ಶಮಿಗೆ ಬೈಗುಳ

admin
0 Min Read

ಟಿ20 ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಹೀನಾಯವಾಗಿ ಸೋತ ಬೆನ್ನಲ್ಲೇ ವೇಗಿ ಮೊಹಮ್ಮದ್ ಶಮಿಗೆ ಇನ್ ಸ್ಟಾಗ್ರಾಂನಲ್ಲಿ ನೆಟ್ಟಿಗರಿಂದ ನಿಂದನೆ ಶುರುವಾಗಿದೆ.

ಬೌಲರ್ ಗಳು ಪಾಕ್ ತಂಡದ ಏಕೈಕ ವಿಕೆಟ್ ಕೀಳಲು ವಿಫಲರಾಗಿದ್ದರು. ಈ ಹಿನ್ನಲೆಯಲ್ಲಿ ಹಲವರು ಮೊಹಮ್ಮದ್ ಶಮಿಯನ್ನು ಇನ್ನಿಲ್ಲದಂತೆ ಟೀಕೆ ಮಾಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.

ಇದರ ಬೆನ್ನಲ್ಲೇ ಕೆಲವರು ಶಮಿ ಬೆಂಬಲಕ್ಕೆ ಬಂದಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಲೇ ಶಮಿ ಪರವಾಗಿ ಹೇಳಿಕೆ ಕೊಡಬೇಕು. ಇದು ಆಟವಷ್ಟೇ. ಶಮಿ ಧರ್ಮವನ್ನು ಉಲ್ಲೇಖಿಸಿ ಟೀಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

TAGGED:
Share This Article
Leave a Comment