ಬೆಂಗಳೂರು: ”ವಿದೇಶಾಂಗ ಇಲಾಖೆ ಪಾಸ್ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ವಿದೇಶದಲ್ಲಿ ಇರಲು ಆಗಲ್ಲ. ವಾಪಸ್ ಬರಲೇಬೇಕಾಗುತ್ತೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ”ವಿದೇಶಾಂಗ ಇಲಾಖೆ ಪಾಸ್ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ವಿದೇಶದಲ್ಲಿ ಇರಲು ಆಗಲ್ಲ. ವಾಪಸ್ ಬರಲೇಬೇಕಾಗುತ್ತೆ. ಆದ್ರೆ, ನಮಗೆ ಬಹಳ ಕೆಲಸ ಇದ್ದು, ಬರ ನಿರ್ವಹಣೆ, ಆಡಳಿತದ ಜವಾಬ್ದಾರಿ ನಮ್ಮ ಮೇಲಿದೆ.
ಕಾಂಗ್ರೆಸ್ಗೆ ಬೇರೆ ಕೆಲಸ ಇದೆ ಎಂದು ಹೆಚ್ಡಿಕೆ ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ” ಎಂದು ತಿಳಿಸಿದರು. ”ಬರ ಪರಿಹಾರ ಕೊಟ್ಟಿದ್ದು, ಕೋರ್ಟ್ ಸೂಚನೆ ನಂತರ ಇನ್ನೂ ಬರ ಪರಿಹಾರ ಕೇಂದ್ರದಿಂದ ಬರಬೇಕು. ಆ ಸಹಕಾರವನ್ನು ಅವರು ಮೊದಲು ಕೊಡಲಿ. ನಮ್ಮ ಸಾಧನೆ, ಗ್ಯಾರಂಟಿ ನೋಡಿ ಬಿಜೆಪಿಗೆ ಹೊಟ್ಟೆ ಉರಿ” ಎಂದು ಇದೇ ವೇಳೆ ಟೀಕಿಸಿದರು.
ಪಾಸ್’ಪೋರ್ಟ್ ರದ್ದು ಮಾಡಿದರೆ ಪ್ರಜ್ವಲ್ ವಿದೇಶದಲ್ಲಿ ಇರಲು ಆಗಲ್ಲ !
Date:






