ಪಾಸ್ ಪೋರ್ಟ್ ಪಡೆಯಲು ಸುಲಭ ವಿಧಾನ!

Date:

ಈಗೇನಿದ್ದರು ನಮಗೆ ಕೈಗೆಟಕುವಂತೆ ಸ್ಮಾರ್ಟ್ಫೋನ್ನಲ್ಲಿಯೇ ಎಲ್ಲ ಆಯ್ಕೆಗಳಿವೆ. ಜನರು ಪಾಸ್‌ಪೋರ್ಟ್‌ ಕಚೇರಿಗೆ ಹೋಗದೆಯೇ ಪಾಸ್‌ಪೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಬಹುದಾಗಿದೆ. ದೇಶದಲ್ಲಿ ಎಲ್ಲೇ ನೆಲಸಿದ್ದರೂ ಸಹ ಮೊಬೈಲ್‌ ಆ್ಯಪ್ ಮೂಲಕವೇ ತಮ್ಮ ಮೂಲ ನಿವಾಸದ ಪಾಸ್‌ಪೋರ್ಟ್‌ ಕಚೇರಿಯಲ್ಲಿ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಬಹುದು.

ಇದಕ್ಕಾಗಿ ನೀವು ‘ಎಂಪಾಸ್‌ಪೋರ್ಟ್ ಸೇವಾ’ (Mpassportseva) ಆ್ಯಪ್ ಅನ್ನು ಇನ್ಸ್ಟಾಲ್ ಮಾಡಬೇಕು. ಇದು ಕೇಂದ್ರ ಸರ್ಕಾರದ ಅಧಿಕೃತ ಆ್ಯಪ್ ಆಗದ್ದು, ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಸಹಕಾರಿ ಆಗಲಿದೆ.

‘ಎಂಪಾಸ್‌ಪೋರ್ಟ್ ಸೇವಾ’ (Mpassportseva) ಆ್ಯಪ್ ಅನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಂಡರೆ, ಈ ಆ್ಯಪ್ಗೆ ನೀವು ರಿಜಿಸ್ಟರ್ ಆಗುವುದಕ್ಕೆ ಕೇಳಿಕೊಳ್ಳುತ್ತದೆ. ಒಮ್ಮೆ ನೀವು ಪಾಸ್‌ಪೋರ್ಟ್ ಕಚೇರಿ, ಹೆಸರು, ಹುಟ್ಟಿದ ದಿನ, ಇಮೇಲ್‌ ವಿಳಾಸಗಳನ್ನು ನೀಡಿ ನಿಮ್ಮ ಗುರುತನ್ನು ದಾಖಲಿಸಿ ಯುಸರ್‌ನೇಮ್ ಮತ್ತು ಪಾಸ್‌ವರ್ಡ್ ಅನ್ನು ಪಡೆದುಕೊಳ್ಳಬಹುದು.

ಈ ಆ್ಯಪ್ನಲ್ಲಿ ನೀವು ಲಾಗಿನ್ ಆದ ನಂತರ ನೇರವಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಯೂಸರ್ ಅಪ್ಲಿಕೇಷನ್ ಆಯ್ಕೆಯನ್ನು ತೆರೆದು, ಹೊಸದಾಗಿ ಪಾರ್ಸ್‌ಪೋರ್ಟ್ ಅರ್ಜಿದಾರನೇ ಅಥವಾ ಮತ್ತೊಮ್ಮೆ ಪಾಸ್‌ಪೋರ್ಟ್‌ಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರ ಎಂಬ ಮಾಹಿತಿಯನ್ನು ತುಂಬಿ ಮುಂದುವರೆಯಬಹುದಾಗಿದೆ. ಹೊಸದಾಗಿ ಪಾರ್ಸ್‌ಪೋರ್ಟ್ ಅರ್ಜಿದಾರನೇ ಅಥವಾ ಮತ್ತೊಮ್ಮೆ ಪಾಸ್‌ಪೋರ್ಟ್‌ಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರ ಎಂಬ ಆಯ್ಕೆಯ ಕೆಳಗೆ ಮತ್ತೆರಡು ಆಯ್ಕೆಗಳನ್ನು ನೀಡಲಾಗಿದೆ. ಸಾಮಾನ್ಯ ಅಥವಾ ತತ್ಕಾಲ್ ಪಾಸ್‌ಪೋರ್ಟ್ ಬೇಕೆ ಮತ್ತು ಎಷ್ಟು ಪೇಜ್ ಹೊಂದಿರುವ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎಂಬ ಮಾಹಿತಿಯನ್ನು ಕೇಳುತ್ತದೆ.

ಸೂಕ್ತ ಮಾಹಿತಿಗಳನ್ನು ಅರ್ಜಿಯಲ್ಲಿ ತುಂಬಿದ ನಂತರ ಅರ್ಜಿದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ತುಂಬಲು ಅನುಮತಿ ನೀಡಲಾಗುತ್ತದೆ. ನಿಮ್ಮ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ಹಾಗೂ ಮೊಬೈಲ್‌ ಆ್ಯಪ್‌ನಲ್ಲಿ ಕೇಳಿರುವ ನಿಮ್ಮ ಎಲ್ಲಾ ಗುರುತು ವಿಳಾಸಗಳನ್ನು ತುಂಬಿ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿಯನ್ನು ಪೂರ್ಣಗೊಳಿಸಬಹುದು.

ಇನ್ನೂ ‘ಎಂಪಾಸ್‌ಪೋರ್ಟ್ ಸೇವಾ’ ಮೊಬೈಲ್ ಆ್ಯಪ್‌ ಮೂಲಕ ಪಾರ್ಸ್‌ಪೋರ್ಟ್‌ಗಾಗಿ ಅರ್ಜಿಯನ್ನು ಪೂರ್ಣಗೊಳಿಸಿದ ನಂತರ, ಪಾಸ್‌ಪೋರ್ಟ್ ಕಚೇರಿಯಿಂದ ನಿಮ್ಮ ಅರ್ಜಿ ವಿಲೇವಾರಿ ಬಗ್ಗೆ ನೀವು ಟ್ರ್ಯಾಕ್ ಮಾಡಬಹುದು, ನಿಮ್ಮ ಅರ್ಜಿ ಯಾವ ಹಂತದಲ್ಲಿದೆ? ಯಶಸ್ವಿ ವೆರಿಫಿಕೇಷನ್ ಆಗಿದೆಯಾ? ಡೆಲಿವರಿ ಯಾವಾಗ ಎಂಬ ಮಾಹಿತಿಗಳನ್ನು ನೀವು ಪಡೆಯಬಹುದು.

 

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...