ಪಿಎಸ್ಎಲ್ ನಿಂದ ಹೊರಬಿದ್ದ ಅಫ್ರಿದಿ

1
45

2021ರ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿ ಫೆಬ್ರವರಿ 20ರಂದು ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಆರಂಭವಾಗಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿಯೇ ಪಿಎಸ್ಎಲ್ ಟೂರ್ನಿಯ ಬಯೋ ಬಬಲ್ ಒಳಗೆ ಕೊರೊನಾವೈರಸ್ ಪ್ರವೇಶಿಸಿ ಕೆಲ ಆಟಗಾರರು ಸೋಂಕಿಗೆ ಒಳಗಾದ ಕಾರಣ ಪಿಎಸ್ಎಲ್ ಟೂರ್ನಿಯನ್ನು ಮುಂದೂಡಲಾಯಿತು.


ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಉಳಿದಿರುವ 20 ಪಿಎಸ್ಎಲ್ ಪಂದ್ಯಗಳನ್ನು ಜೂನ್ ತಿಂಗಳಿನಲ್ಲಿ ಅಬುದಾಬಿಯಲ್ಲಿ ನಡೆಸಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತೀರ್ಮಾನಿಸಿದೆ ಎನ್ನಲಾಗುತ್ತಿದೆ. ಜೂನ್ ತಿಂಗಳಿನಲ್ಲಿ ಈ ಬಾರಿಯ ಪಿಎಸ್ಎಲ್ ಅಬುದಾಬಿಯಲ್ಲಿ ಮುಂದುವರಿಯಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಪಿಎಸ್ಎಲ್‌ನ 6 ಫ್ರಾಂಚೈಸಿಗಳು ಟೂರ್ನಿಗೆ ಬೇಕಾದ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿವೆ.


ಆದರೆ ಮುಲ್ತಾನ್ ಸುಲ್ತಾನ್ಸ್ ತಂಡಕ್ಕೆ ಹಿನ್ನಡೆಯಾಗುವಂತಹ ಸುದ್ದಿಯೊಂದು ಇದೇ ವೇಳೆ ಹೊರಬಿದ್ದಿದೆ, ತಂಡದ ಪ್ರಮುಖ ಆಟಗಾರ ಶಾಹಿದ್ ಅಫ್ರಿದಿ ಕೆಳಬೆನ್ನಿನ ಗಾಯದಿಂದ ಬಳಲುತ್ತಿದ್ದು ಮುಂದುವರಿಯಲಿರುವ ಪಿಎಸ್ಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮುಂದುವರಿಯಲಿರುವ ಪಿಎಸ್ಎಲ್ ಟೂರ್ನಿಗಾಗಿ ಕರಾಚಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆಯಲ್ಲಿ ಅಫ್ರಿದಿ ಕೆಳಬೆನ್ನಿನ ನೋವಿನಿಂದ ಬಳಲಿದ್ದು, ಚಿಕಿತ್ಸೆ ನೀಡಿದ ವೈದ್ಯರು ಶಾಹಿದ್ ಅಫ್ರಿದಿ ಈ ಬಾರಿಯ ಪಿಎಸ್ಎಲ್ ಟೂರ್ನಿಯಲ್ಲಿ ಭಾಗವಹಿಸಬಾರದು ಎಂಬ ಸಲಹೆಯನ್ನು ನೀಡಿದ್ದಾರೆ. ಹೀಗಾಗಿ ವೈದ್ಯರ ಸಲಹೆಯ ಮೇರೆಗೆ ಶಾಹಿದ್ ಅಫ್ರಿದಿ ಈ ಬಾರಿಯ ಪಿಎಸ್ಎಲ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.

 

1 COMMENT

LEAVE A REPLY

Please enter your comment!
Please enter your name here