ಪಿಯುಸಿ ಫೇಲ್ ಆದ್ಮೇಲೆ ಆಟೋ ಚಾಲಕ, ಈಗ ಬರೀ ಮಾಲೀಕನಲ್ಲ ನಾಯಕ…!
ಸತ್ಯಶಂಕರ್, ಮಂಗಳೂರಿನ ಪುತ್ತೂರಿನವರು. ದೊಡ್ಡ ಉದ್ಯಮಿ. ಪಾನೀಯ ‘ಬಿಂದು’ ರೂವಾರಿಗಳು. ವಾರ್ಷಿಕ ನೂರಾರು ಕೋಟಿ ವಹಿವಾಟು ನಡೆಸುತ್ತಿದ್ದಾರೆ. ಅನೇಕ ದುಡಿಯುವ ಕೈಗಳಿಗೆ ಕೆಲಸ ಕೊಟ್ಟಿದ್ದಾರೆ. ಅವರ ಕುಟುಂಬಗಳಿಗೆ ನೆಲೆಯಾಗಿದ್ದಾರೆ.
ಇನ್ನು ಇವರದು ಒಂದು ಸಾಮಾನ್ಯ ಬಡ ಕುಟುಂಬ. ಆ ಕುಟುಂಬದಲ್ಲಿ ಮೂರು ಜನ ಅಣ್ಣ-ತಮ್ಮಂದಿರು. ಅದರಲ್ಲಿ ಸಣ್ಣವರೇ ಸತ್ಯ ಶಂಕರ್. ಅಣ್ಣಂದಿರಿಬ್ರು ಚೆನ್ನಾಗಿ ಒಂದ್ಕೊಂಡು ಒಳ್ಳೆ ಕೆಲಸ ಗಿಟ್ಟಿಸಿಕೊಂಡಿದ್ದರು. ಆದರೆ, ಸತ್ಯ ಶಂಕರ್ ಸೆಕೆಂಡ್ ಪಿಯುಸಿಯಲ್ಲಿ ಫೇಲ್ ಆಗ್ರಾರೆ. ಸಾಮಾನ್ಯವಾಗಿ ಫೇಲ್ ಆದ ತಕ್ಷಣ ಈಗಿನ ಕೆಲ ಹುಡುಗರಿಗೆ ಅನ್ಸೋದು ಇನ್ನು ಜೀವನವೇ ಇಲ್ಲ ಅಂತ ದುಡುಕಿನ ನಿರ್ಧಾರ ತೆಗೆದುಕೊಂಡು ಬಿಡ್ತಾರೆ. ಆದ್ರೆ ಸತ್ಯಶಂಕರ್ ಇವೆಲ್ಲರಿಗಿಂತ ವಿಭಿನ್ನವಾಗಿ ನಿಲ್ತಾರೆ.
ಸತ್ಯಶಂಕರ್ ಒಳಗೆ ಇದ್ದ ದೂರಾಲೋಚಿಸುವ ಕ್ರಿಯೇಟಿವ್ ಆಗಿ ಯೋಚನೆ ಮಾಡುವ ಸಾಹಸಕ್ಕೆ ಕೈ ಹಾಕುವ ವ್ಯಕ್ತಿಯಿದ್ದರು. ಪಿಯುಸಿ ಫೇಲ್ ಅದೇ ಎಂದು ಚಿಂತಿಸುತ್ತಾ ಕೂರುವ ಬದಲು ಆಟೋ ಓಡಿಸಿ ಸ್ವ-ಉದ್ಯೋಗ ಮಾಡಲು ನಿರ್ಧರಿಸುತ್ತಾರೆ.
ಹಗಲು-ಇರಳು ಎನ್ನದೇ ದುಡಿದ ಶಂಕರ್ ಅವರು ಒಂದು ವರ್ಷದ ಒಳಗಡೆಯೇ ತನ್ನ ಆಟೋದ ಸಂಪೂರ್ಣ ಸಾಲವನ್ನು ತೀರಿಸಿ ಒಂದು ಅಂಬಾಸಿಡರ್ ಕಾರು ತೆಗೆದುಕೊಳ್ಳುತ್ತಾರೆ. ಅದರೊಂದಿಗೆ ವಾಹನಗಳು ಬಿಡಿಭಾಗಗಳ ಅಂಗಡಿಯನ್ನು ಆರಂಭ ಮಾಡುತ್ತಾರೆ. ಇದರಲ್ಲಿ ಯಶಸ್ಸಿಯಾದ ಅವರು ಟೈರ್ ಡೀಲರ್ ಶೀಫ್ಗೆ ಕೈ ಹಾಕುತ್ತಾರೆ.
ನೋಡಿ, ಸತ್ಯಶಂಕರ್ ಅವರು ತಮ್ಮ ಅಗಾಧ ಪರಿಶ್ರಮದಿಂದ ಈ ಎಲ್ಲಾ ವ್ಯವಹಾರಗಳಲ್ಲಿ ಯಶಸ್ಸಿಯಾಗುತ್ತಾರೆ. ಇಷ್ಟೆಲ್ಲಾ ಸಾಧಿಸಿದರೂ ಸತ್ಯಶಂಕರ್ ಅವರಿಗೆ ತನ್ನವರಿಗಾಗಿ ಏನ್ನಾದರೂ ಮಾಡಬೇಕೆಂಬ ತುಡಿತದಿಂದ ನಿರುದ್ಯೋಗಿ ಯುವಕರು ಸುಲಭ ರೀತಿಯಲ್ಲಿ ಕಡಿಮೆ ಬಡ್ಡಿದರದಲ್ಲಿ ಆಟೋ ಕೊಳ್ಳಲು ಪ್ರವೀಣ್ ಕ್ಯಾಪಿಟಲ್ ಎಂಬ ಪೈನಾಲ್ಸ್ ಒಂದನ್ನು ಆರಂಭಿಸುತ್ತಾರೆ. ಈಗ ಅದು ಕರ್ನಾಟಕದಾದ್ಯಂತ 9 ಶಾಖೆಗಳನ್ನ ಹೊಂದಿದೆ.
ಆರಂಭದಲ್ಲಿ ಸಣ್ಣದಾರಿ ಆರಂಭವಾದ ಕಂಪನಿ ಬರುಬರುತ್ತಾ ಬೃಹತ್ ಆಕಾರವಾಗಿ ಬೆಳೆದು ನಿಂತಿತ್ತು. ದೇಶಾದ್ಯಂತ ಹೆಸರುಗಳಿಸಲು ಆರಂಭಿಸಿತು. ಇದನ್ನೆಲ್ಲಾ ನೋಡಿದ ಅಂತಾರಾಷ್ಟ್ರೀಯ ಕೋಕಾ-ಕೋಲಾ ಕೊಟ್ಟ ಆಫರ್ ನ್ನು ಸಾರ-ಸಗಟಾಗಿ ತಿರಸ್ಕರಿಸುತ್ತಾರೆ. ಅಂದು ಸತ್ಯ ಶಂಕರ್ ಅವರು ತೆಗೆದುಕೊಂಡ ದಿಟ್ಟ ನಿಧಾರದಿಂದ ಇಂದು ಬಿಂದು ಕಂಪನಿ 100 ಕೋಟಿಗಿಂತಲೂ ಹೆಚ್ಚು ವ್ಯವಹಾರ ಮಾಡುತ್ತಿದೆ.
ಬಿಂದು’ ಇದು ಇರೋದು ಎಲ್ಲೋ ದೊಡ್ಡ ನಗರ ಪ್ರದೇಶಗಳಲ್ಲಿ ಅಲ್ಲ. ಸತ್ಯಶಂಕರ್ ಹುಟ್ಟೂರಾದ ಪುತ್ತೂರಿನಲ್ಲಿ. ಅಂದು ಹನಿ-ಹನಿಯಾಗಿ ಬಿಂದು ಬಿಂದುವಾಗಿ ಆರಂಭವಾಗಿದ್ದ ಉದ್ಯಮ ಇಂದು ಸಾಗರದಷ್ಟು ದೊಡ್ಡದಾಗಿ ಬೆಳೆದು ನಿಂತಿದೆ. ಸಾಧನೆಗೆ ಬೇಕಿರುವುದು ಸಾಧಿಸುವ ಕನಸು ಬೇಕಷ್ಟೆ ಅಲ್ಲವೇ?? ನೋಡಿ ಸತ್ಯ ಪ್ರಕಾಶ್ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದ್ದಾರೆ ಅಲ್ಲವೇ??
ನೊಂದವರ ಪಾಲಿಗೆ ಇವರೇ ಆಶಾ ‘ಕರುಣಾ’? ಅಷ್ಟಕ್ಕೂ ಇವರ ಮಹತ್ಕಾರ್ಯ ಎಂತಹದ್ದು ಗೊತ್ತಾ?