ಇಂಥಾ ವಿಚಿತ್ರ ಮದುವೆಗಳನ್ನು ಎಲ್ಲಾದ್ರು ಕಂಡಿರಾ..?

0
448

ಇಂಥಾ ವಿಚಿತ್ರ ಮದುವೆಗಳನ್ನು ಎಲ್ಲಾದ್ರು ಕಂಡಿರಾ..?

ಹುಡುಗ ಹುಡುಗಿ ಜೊತೆ ಮದುವೆಯಾಗುವುದು ಸಾಮಾನ್ಯ. ಇನ್ನೂ ಕೆಲವೆಡೆ ಹುಡುಗ ಹುಡುಗನನ್ನು, ಹುಡುಗಿ ಹುಡುಗಿಯನ್ನು ಮದುವೆಯಾಗಿದ್ದನ್ನು ಕಂಡಿದ್ದೇವೆ. ಕೇಳಿದ್ದೇವೆ. ಆದರೆ ಇಲ್ಲಿರುವ ಕೆಲವು ವಿಚಿತ್ರ ಜನರು ವಿಭಿನ್ನ ರೀತಿಯಲ್ಲಿ ಮದುವೆಯಾಗಿದ್ದಾರೆ. ಅರೇ ಅದೇಂಥಾ ವಿಚಿತ್ರ ಮದುವೆ ಅಂತೀರಾ ನೀವೇ ನೋಡಿ..

1. ತನ್ನನ್ನು ತಾನೇ ಮದುವೆಯಾದ ಭೂಪ..!

W-11

ಚೀನಾದ ಲಿಯು ಯೇ ಎಂಬಾತ ತನ್ನನ್ನು ತಾನೇ ಮದುವೆಯಾಗಿದ್ದಾನೆ. ಏಕೆಂದರೆ ಆತ ತನ್ನನ್ನು ತಾನು ಒಂಟಿಯಾಗಿರಲು ಬಯಸಿದ್ದನಂತೆ. ಆದ್ದರಿಂದ ತನ್ನದೇ ಒಂದು ಕಟೌಟ್ ಜೊತೆಗೆ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಇದೀಗ ಲಿಯು ಒಂಟೀ ಜೀವನ ನಡೆಸುತ್ತಿದ್ದಾನಂತೆ.

2. ಐಫಿಲ್ ಟವರ್ ಜೊತೆ ಎರಿಕಾ ಮ್ಯಾರೇಜ್..!

W-21

ಆಕೆಯ ಹೆಸರು ಎರಿಕಾ ಲಾ ಅಂತ. ನೋಡಲು ಚೆನ್ನಾಗಿಯೇ ಇದ್ದಾಳೆ. ಆದರೆ ಏಕೆಯದ್ದು ಏನು ಹುಚ್ಚು ಸ್ವಭಾವವೋ ಗೊತ್ತಿಲ್ಲ. ಹೋಗಿ ಹೋಗಿ ಫ್ರಾನ್ಸ್ ನ ಐಫಿಲ್ ಟವರ್ ಜೊತೆ ಮದುವೆಯಾಗಿದ್ದಾಳೆ. ಇದಕ್ಕೂ ಮುನ್ನ ಆಕೆ ಮದುವೆಯಾಗಿದ್ದಳು. ಆದರೆ ಐಫಿಲ್ ಟವರ್ ಮೇಲೆ ಆಕೆಗೆ ಇದ್ದಕ್ಕಿದ್ದಂತೆ ಪ್ರೀತಿ ಉಕ್ಕಿ ಹರಿದಿದ್ದು ಅದನ್ನೇ ಮದುವೆಯಾಗಿದ್ದಾಳೆ. ಅಲ್ಲದೇ ತನ್ನ ಹೆಸರಿನ ಮುಂದೆ ಐಫಿಲ್ ಹೆಸರನ್ನು ಸೇರಿಸಿದ್ದಾಳೆ. ಈಗ ಆಕೆಯ ಹೆಸರು `ಎರಿಕಾ ಲಾ ಟೂರ್ ಐಫಿಲ್’ ಅಂತ ಆಗಿದೆ..!

3. ವಿಡಿಯೋ ಗೇಮ್ ಜೊತೆ ಮದುವೆ..!

W-31

ಯೆಸ್.. ಜಗತ್ತಿನ ಮೇಲೆ ಇಂಥಾ ಜನರೂ ಇದ್ದಾರೆ ಮಾರಾಯ್ರೆ. ಜಪಾನಿನ ನೇನೇ ಅನೆಗಸಾಕಿ ಎಂಬಾತ ತನ್ನ ನೆಚ್ಚಿನ `ಲವ್ ಪ್ಲಸ್’ ಎಂಬ ವಿಡಿಯೋ ಗೇಮ್ ಜೊತೆ ಮದುವೆಯಾಗಿದ್ದಾನೆ. ಅಲ್ಲದೇ ಅದಕ್ಕಾಗಿ ಅದ್ದೂರಿ ಸಮಾರಂಭ ನಡೆಸಿ ತನ್ನ ಮದುವೆ(!) ವಿಚಾರವನ್ನು ಜಗತ್ತಿನ ಮುಂದೆ ಪ್ರಚಾರ ಮಾಡಿದ್ದಾನೆ..!

4. ಗೋಡೆಗೆ ಸಿಕ್ಕಿತು ಶಾದಿ ಯೋಗ

W-41

ಆಕೆಯ ಹೆಸರು ಐಜಾ ರಿಟ್ಟಾ ಅಂತ. ಆಕೆ ಕೇವಲ 7 ವರ್ಷದವಳಿದ್ದಾಗಲೇ ಪ್ರೇಮದ ಬಲೆಯಲ್ಲಿ ಬಿದ್ದಿದ್ದಾಳೆ. ಇಷ್ಟಕ್ಕೂ ಆಕೆ ಲವ್ ಮಾಡಿದ್ದು, ಜರ್ಮನಿಯ ಪ್ರಸಿದ್ದ ಬರ್ಲಿನ್ ಗೋಡೆಯನ್ನು..! ಯೆಸ್.. ಗೋಡೆಯನ್ನೇ..! ಆದ್ದರಿಂದ ಅಂದೇ ಆಕೆ ಬರ್ಲಿನ್ ಗೋಡೆಯನ್ನು ಮದುವೆಯಾದಳಂತೆ..! ಇಷ್ಟಕ್ಕೂ ಈಕೆಯ ಮದುವೆ ಆಗಿ ಬರೋಬ್ಬರಿ 30 ವರ್ಷಗಳೇ ಆಗಿವೆ..!

5. ಎಂಥಾ ದರಿದ್ರ ಮದುವೆ ಕಣ್ರೀ ಇದು..!?

W-51

ಚಪ್ಪಟೆ ಮೂಗಿನ ಜಪಾನಿಗನೋರ್ವ ಮಲಗಲು ಬಳಸುವ ಪಿಲ್ಲೋ(ದಿಂಬು)ವನ್ನೇ ಮದುವೆಯಾಗಿದ್ದಾನೆ. ಲೀ ಜಿನ್ ಎಂಬ ಹೆಸರಿನ ವ್ಯಕ್ತಿಯೋರ್ವ ಜಪಾನಿನ ಅತಿ ದೊಡ್ಡ ತಬ್ಬಿಕೊಳ್ಳುವ ದಿಂಬಿನೊಂದಿಗೆ ಮದುವೆಯಾಗಿದ್ದಾನೆ. ಅಲ್ಲದೇ ಮದುವೆ ರಿಸೆಪ್ಶನ್ ವೇಳೆಯಲ್ಲಿ ಆ ದಿಂಬಿಗೆ ಅಲಂಕಾರ ಮಾಡಿದ್ದರಂತೆ..! ಇಷ್ಟಕ್ಕೂ ಅವನು ದಿಂಬಿನ ಜೊತೆ ಏಕೆ ಮದುವೆಯಾದ ಎಂಬುದು `ಲೀ’ಗೆ ಮಾತ್ರ ಗೊತ್ತು.

6. ಇಂಥಾ ಹುಚ್ಚು ಪ್ರೇಮಿ ಜಗತ್ತಿನಲ್ಲೆಲ್ಲೂ ಇಲ್ಲ ಬಿಡಿ..!

W-61

ಆ ಮಹಾನುಭಾವನ ಹೆಸರು ಆ್ಯಮೇ ವೋಲ್ಫೆ ಅಂತ. ಆ್ಯಸ್ಪೆರ್ಗರ್ ಸಿಂಡ್ರೋಮ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾನೆ. ಈ ಖಾಯಿಲೆಯಿಂದ ಬಳಲುವವರು ಯಾವುದನ್ನು ಇಷ್ಟಪಡುತ್ತಾರೋ ಗೊತ್ತಿಲ್ಲ. ಆದ್ದರಿಂದ ಈತ ಬೃಹತ್ ಕಟ್ಟಡಗಳು, ಚರ್ಚ್ ಗಳನ್ನೂ ಪ್ರೀತಿಸಿಬಿಡುತ್ತಾನಂತೆ. ಆದರೆ ಈಗ ಈತನ ಪ್ರೀತಿಯಾಗಿರುವುದು ಪೆನ್ಸಿಲ್ವೇನಿಯಾ ಅಮ್ಯೂಸ್ ಮೆಂಟ್ ಪಾರ್ಕ್ 1001 ನಾಚ್ ಎಂಬ ರೈಲಿನ ಮೇಲಂತೆ..!

7. ಡಾಲ್ಫಿನ್ ಜೊತೆ ಮದುವೆಯಾದ ಚೆಲುವೆ..!

W-71

ಆಕೆಯ ಹೆಸರು ಸಿಂಡಿ ಅಂತ. ಕಳೆದ 15 ವರ್ಷದ ಹಿಂದೆ ಲವ್ ಅಟ್ ಫಸ್ಟ್ ಸೈಟ್ ಎಂಬಂತೆ ಆಕೆಗೆ ಪ್ರೀತಿ ಹುಟ್ಟಿಕೊಂಡಿತಂತೆ. ಆದ್ದರಿಂದ ಆಕೆ ತಡ ಮಾಡದೇ ತಾನು ಪ್ರೀತಿಸುತ್ತಿವವನಿಗೆ ಮುತ್ತು ಕೊಟ್ಟು ಮದುವೆಯಾದಳಂತೆ. ಇದೆಲ್ಲಾ ನಡೆದಿದ್ದು ಇಸ್ರೇಲ್ ನಲ್ಲಿ. ಇಷ್ಟಕ್ಕೂ ಆಕೆಯ ಮದುವೆ ನಡೆದಿದ್ದು ಸಮುದ್ರ ಜೀವಿ ಡಾಲ್ಫಿನ್ ಜೊತೆಗೆ..!

8. ಬೆಕ್ಕನ್ನು ಮದುವೆಯಾದ ಯಜಮಾನ..!

W-81

ಆ ಬೆಕ್ಕು ಇನ್ನೂ ಕೆಲವು ದಿನಗಳಲ್ಲಿ ಸಾಯುವುದರಲ್ಲಿತ್ತು. ಅದರ ಪ್ರೀತಿಯ ಯಜಮಾನ ಎನಿಸಿಕೊಂಡವ ತನ್ನ ಬೆಕ್ಕು ಸಾಯುವುದಕ್ಕೂ ಮುನ್ನ ಮದುವೆಯಾಗಬೇಕು ಎಂದು ಬಯಸಿದ. ಆದ್ದರಿಂದ ಬೆಕ್ಕಿನೊಂದಿಗೆ ತಾನೇ ಮದುವೆಯಾಗಲು ನಿರ್ಧರಿಸಿದ. ವಿಶೇಷವೆಂದರೆ ಆ ಮದುವೆ ಸಮಾರಂಭದಲ್ಲಿ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರಂತೆ.

9. ಗೊಂಬೆಯ ಜೊತೆಗೆ ಮದುವೆಯಾದ..!

W-91

ಡೇವ್ ಕ್ಯಾಟ್ ಎಂಬುವವನ ಹುಚ್ಚುತನಕ್ಕೆ ಏನೆಂದು ಕರೆಯಬೇಕೋ ಗೊತ್ತಿಲ್ಲ. ಆತ ಮಾಡಿದ ಹುಚ್ಚುತನವನ್ನು ಎಲ್ಲರೂ ಅಚ್ಚರಿಯಿಂದ ನೋಡಿದ್ದಾರೆ. ಏಕೆಂದರೆ ತಾನು ಇಷ್ಟಪಡುವ ಗೊಂಬೆಯೊಂದಿಗೆ ಆತ ಮದುವೆಯಾಗಿದ್ದಾನೆ. ಇದನ್ನು ಕಂಡು ಕೆಲವರು, ಗೊಂಬೆ ಜೊತೆ ಮದುವೆಯಾಗುವ ದರ್ದ್ ಏನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಡೇವ್ ಕ್ಯಾಟ್ ಮಾತ್ರ ತನ್ನ ಮುದ್ದಿನ ಗೊಂಬೆಯನ್ನು ಮುದ್ದಿಸುತ್ತಾ ಚೆನ್ನಾಗಿದ್ದಾನೆ.

10. ಹಣ್ಣಣ್ಣು ಅಜ್ಜಿಯ ಮದುವೆ ಕಥೆ ಕೇಳಿ..!

W-101

ಇದು ಪಕ್ಕಾ ಇಂಡಿಯನ್ ಸ್ಟೋರಿ. ಆಕೆ ಹಣ್ಣಣ್ಣು ಮುದುಕಿ. ಅಂಥಾ ವಯಸ್ಸಿನಲ್ಲಿ ಆಕೆಗೆ ಪ್ರೀತಿ ಮೂಡಿಬಿಟ್ಟಿದೆ. ಮದುವೆಯಾಗುವ ಮನಸ್ಸಾಗಿಬಿಟ್ಟಿದೆ. ಆದ್ದರಿಂದ ಕುಟುಂಬಸ್ಥರಿಗೆಲ್ಲರಿಗೂ ತಿಳಿಸಿ ಮದುವೆಯಾಗಿದ್ದಾಳೆ. ಆ ಮದುವೆಯಲ್ಲಿ ಸುಮಾರು 2.000ಕ್ಕೂ ಹೆಚ್ಚು ಜನರು ಭಾಗವಹಿಸಿ ಆಕೆಗೆ ಶುಭಕೋರಿದರಂತೆ. ಇಷ್ಟಕ್ಕೂ ಮದುವೆ ಗಂಡು ಯಾರು ಎಂದು ಹೇಳಿದರೆ ನೀವೆಲ್ಲಾ ಬೆಚ್ಚಿ ಬೀಳುತ್ತೀರಿ. ಏಕೆಂದರೆ ಆಕೆ ಮದುವೆಯಾಗಿದ್ದು ನಾಗರಹಾವಿನ ಜೊತೆಗೆ..!

11. ಅವನದೆಂಥಾ ಕಥೆ ನೋಡ್ರೀ..?

W-111

ಆಫ್ರಿಕಾ ರಾಷ್ಟ್ರ ಸೂಡಾನ್ ನಲ್ಲಿ ಒಂದು ನಿಯಮವಿದೆ. ಒಂದು ವೇಳೆ ಯಾವುದೇ ಹುಡುಗ ಹುಡುಗಿಯನ್ನು ಚುಡಾಯಿಸುವುದಾಗಲಿ, ಆಕೆಯ ಮೇಲೆ ದೌರ್ಜನ್ಯ ಎಸಗುವುದಾಗಲೀ ಮಾಡಿದರೆ ಆ ಹುಡುಗಿಯನ್ನು ಅದೇ ಹುಡುಗನಿಗೆ ಕೊಟ್ಟು ಮದುವೆ ಮಾಡುಲಾಗುತ್ತದೆ. ಆದರೆ ಇಲ್ಲೊಂದು ಚಿಕ್ಕ ಟ್ವಿಸ್ಟ್ ಇದೆ(!). ಅದೇನಪ್ಪಾ ಅಂದ್ರೆ ಚಾರ್ಲ್ಸ್ ತೋಂಬೆ ಎಂಬುವವನು ಮೇಕೆಯೊಂದರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನಂತೆ..! ಇಷ್ಟಕ್ಕೂ ಇದನ್ನು ಹೇಳಿದ ಮೇಲೆ ತೋಂಬೆಯ ಮದುವೆ ಯಾರ ಜೊತೆ ಆಗಿದೆ ಎಂದು ಅರ್ಥವಾಯಿತಲ್ಲವೇ..? ಯೆಸ್.. ತೋಂಬೆಯ ಮದುವೆ ಮೇಕೆಯ ಜೊತೆ ಮಾಡಿ ಮುಗಿಸಿದ್ದಾರೆ ಸೂಡಾನ್ ಜನರು..!

LEAVE A REPLY

Please enter your comment!
Please enter your name here