ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಉಪಾಧ್ಯಕ್ಷರೂ ಆಗಿರುವ ಟಾಲಿವುಡ್ ನಟ ನಾಗಾರ್ಜುನ ಅವರು ಸಿಂಧುಗೆ, ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ ಚಾಮುಂಡೇಶ್ವರಿನಾಥ್ ನೀಡಿರುವ ಐಷಾರಾಮಿ ಬಿಎಂಡಬ್ಲೂ ಎಕ್ಸ್5 ಕಾರನ್ನು ಹಸ್ತಾಂತರಿಸಿದ್ದಾರೆ.ಹೈದ್ರಾಬಾದ್ ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಸಿಂಧುಗೆ ಕಾರನ್ನು ನಾಗಾರ್ಜುನ ನೀಡಿದ್ದಾರೆ.
ಈ ವೇಳೆ ಮಾತನಾಡಿದ ನಾಗಾರ್ಜುನ, ಸಿಂಧು ಅವರದು ಮೇರು ಸಾಧನೆಯಾಗಿದೆ. ಇಂತಹ ಇನ್ನೂ ಹಲವಾರು ಕ್ರೀಡಾಪಟುಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರುವಂತಾಗಲಿ. ಸಿಂಧು ಅವರ ಈ ಸಾಧನೆಯ ಹಿಂದೆ ಶ್ರಮಿಸಿರುವ ತರಬೇತುದಾರ ಪುಲ್ಲೇಲ ಗೋಪಿಚಂದ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.