ಹೌದು, 2019 ರ ಶಕ್ತಿಶಾಲಿ ನಾಯಕ ಯಾರು ಎಂಬ ಬಗ್ಗೆ ಇತ್ತೀಚೆಗೆ ಬ್ರಿಟಿಷ್ ಹೆರಾಲ್ಡ್ ಓದುಗರ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ರಷ್ಯಾ ಪ್ರಧಾನಿ ವಾಡ್ಲಿಮೀರ್ ಪುಟೀನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಆಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಕೂಡ ಇದ್ದರು. ಆದರೆ, ಮೋದಿ ಎಲ್ಲ ರಾಜಕೀಯ ನಾಯಕರನ್ನು ಹಿಂದಿಕ್ಕುವ ಮೂಲಕ ವಿಶ್ವದ ಶಕ್ತಿಶಾಲಿ ನಾಯಕರಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದ್ದಾರೆ.
30.9 ರಷ್ಟು ಮತ ಪಡೆದರೆ, ಪುಟೀನ್ ಶೇ. 29 ರಷ್ಟು, ಟ್ರಂಪ್ 21.9 ರಷ್ಟು ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಶೇ. 18. 1 ರಷ್ಟು ಮತ ಪಡೆಯುವ ಮೂಲಕ ನಂತರದ ಸ್ಥಾನ ಪಡೆದಿದ್ದಾರೆ. ವಿಶ್ವದ 25 ಜನಪ್ರಿಯ ರಾಜಕೀಯ ನಾಯಕರಲ್ಲಿ ಅಂತಿಮವಾಗಿ ನಾಲ್ಕು ನಾಯಕರು ಈ ಪ್ರತಿಷ್ಠಿತ ಬಿರುದು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬ್ರಿಟಿಷ್ ಹೆರಾಲ್ಡ್ ನಿಯತಕಾಲಿಕೆಯ ಜುಲೈ ಸಂಚಿಕೆಯ ಮುಖಪುಟದಲ್ಲಿ ಮೋದಿ ವಿಶ್ವದ ಪ್ರಭಾವಿ ನಾಯಕನಾಗಿ ಹೊರ ಹೊಮ್ಮಿರುವ ಬಗ್ಗೆ ವರದಿ ಪ್ರಕಟಿಸಲಾಗಿದೆ.