ಪುಣೆ ಬಸ್ಸಿನೊಳಗೆ ಅತ್ಯಾಚಾರ ಪ್ರಕರಣ: ಆರೋಪಿ ಅರೆಸ್ಟ್

Date:

ಪುಣೆ ಬಸ್ಸಿನೊಳಗೆ ಅತ್ಯಾಚಾರ ಪ್ರಕರಣ: ಆರೋಪಿ ಅರೆಸ್ಟ್

ಪುಣೆಯ ಜನನಿಬಿಡ ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಕೊನೆಗೂ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಪುಣೆಯ ಗುನಾತ್ ಗ್ರಾಮದ ದತ್ತಾತ್ರಯ ರಾಮದಾಸ್ ಗಡೆ (37) ಎಂದು ಗುರುತಿಸಲಾಗಿದೆ. ಮಧ್ಯರಾತ್ರಿ ಈತನನ್ನು ವಶಕ್ಕೆ ಪಡೆಯಲಾಗಿದೆ. ‌
ಈಗಾಗಲೇ ಹಲವು ಪ್ರಕರಣಗಳು ಈತನ ಮೇಲೆ ದಾಖಲಾಗಿದ್ದು, ಈತ ಹಿಸ್ಟರಿ ಶೀಟರ್ ಆಗಿದ್ದಾನೆ. ಪುಣೆ ಮತ್ತು ಅಹಿಲ್ಯಾನಗರ ಜಿಲ್ಲೆಯಲ್ಲಿ ಈತನ ವಿರುದ್ದ ಆರಕ್ಕೂ ಹೆಚ್ಚು ಕಳ್ಳತನ, ದರೋಡೆ, ಸರಗಳವು ಪ್ರಕರಣಗಳಿವೆ. 2019ರಿಂದ ಈತ ಒಂದು ಪ್ರಕಣದಲ್ಲಿ ಜಾಮೀನಿನ ಮೇಲೆ ಹೊರಗಡೆ ಇದ್ದಾನೆ.
ಪ್ರಕರಣದ ಆರೋಪಿ ಪತ್ತೆಗೆ 13 ಪೊಲೀಸರ ತಂಡಗಳನ್ನ ರಾಜ್ಯದ ವಿವಿಧ ಸ್ಥಳದಲ್ಲಿ ನಿಯೋಜಿಸಲಾಗಿತ್ತು, ಅಂತಿಮವಾಗಿ ಆರೋಪಿಯನ್ನು ಬಂಧಿಸಲಾಗಿದೆ . ಶಿರೂರು ತಾಲೂಕಿನ ಕಬ್ಬಿನ ಗದ್ದೆಗಳಲ್ಲಿ ಗುರುವಾರ ಶೋಧ ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ಸ್ನಿಫರ್ ಡಾಗ್ ಮತ್ತು ಡ್ರೋನ್‌ಗಳನ್ನು ಸಹ ನಿಯೋಜಿಸಿದ್ದರು.
ಪ್ರಕರಣದಲ್ಲಿ ಮಹಿಳೆಯ ದೂರು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರಿಗೆ ಆರೋಪಿಯ ಸುಳಿವು ಪತ್ತೆಯಾಗಿತ್ತು. ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗೆ ಬಲೆ ಬೀಸಿದ್ದ ಪೊಲೀಸರು ಈತನ ಸುಳಿವು ನೀಡಿದವರಿಗೆ 1 ಲಕ್ಷ ರೂ ಬಹುಮಾನವನ್ನು ಸಹ ಘೋಷಿಸಿದ್ದರು.

Share post:

Subscribe

spot_imgspot_img

Popular

More like this
Related

ಸುದೀರ್ಘ ಅವಧಿಗೆ ಸಿಎಂ ಎಂಬ ದಾಖಲೆ: ಜನರ ಆಶೀರ್ವಾದಿಂದ ಸಾಧ್ಯವಾಗಿದೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಸುದೀರ್ಘ ಅವಧಿಗೆ ಸಿಎಂ ಎಂಬ ದಾಖಲೆ: ಜನರ ಆಶೀರ್ವಾದಿಂದ ಸಾಧ್ಯವಾಗಿದೆ- ಮುಖ್ಯಮಂತ್ರಿ...

ದೆಹಲಿ ಗಲಭೆ: ಖಾಲಿದ್–ಇಮಾಮ್ ಜಾಮೀನು ಅರ್ಜಿ ವಜಾ, ಐವರಿಗೆ ಷರತ್ತುಬದ್ಧ ಜಾಮೀನು

ದೆಹಲಿ ಗಲಭೆ: ಖಾಲಿದ್–ಇಮಾಮ್ ಜಾಮೀನು ಅರ್ಜಿ ವಜಾ, ಐವರಿಗೆ ಷರತ್ತುಬದ್ಧ ಜಾಮೀನು ನವದೆಹಲಿ:...

ಕೋಗಿಲು ಲೇಔಟ್ ಅನಧಿಕೃತ ಮನೆ ನಿರ್ಮಾಣ ನಿಜ; ಬಿಬಿಎಂಪಿ ಜಾಗವೆಂದು ಕೃಷ್ಣ ಬೈರೇಗೌಡ ಸ್ಪಷ್ಟನೆ

ಕೋಗಿಲು ಲೇಔಟ್ ಅನಧಿಕೃತ ಮನೆ ನಿರ್ಮಾಣ ನಿಜ; ಬಿಬಿಎಂಪಿ ಜಾಗವೆಂದು ಕೃಷ್ಣ...

ಇಂದಿನಿಂದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ; ಮೂರು ಹಂತಗಳಲ್ಲಿ ಆಯೋಜನೆ

ಇಂದಿನಿಂದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ; ಮೂರು ಹಂತಗಳಲ್ಲಿ ಆಯೋಜನೆ ಬೆಂಗಳೂರು: 2025–26ನೇ...