ಪುನೀತ್ ಒಂದು ಸಿನಿಮಾ ಮಾಡಿದ್ರೆ ಒಂದು ಲಕ್ಷ ಮನೆಲಿ ಊಟ ತಿಂತಿದ್ರು

Date:

ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್ ಒಂದು ಸಿನಿಮಾ ಮಾಡ್ತಿದ್ದಾರೆ ಅಂದ್ರೆ ಬರೋಬ್ಬರಿ ಒಂದು ಲಕ್ಷ ಮನೆಯ ಒಲೆ ಉರಿಯುತ್ತಿತ್ತು ಅಂತಾ ನಿರ್ದೇಶಕ ಎಸ್​.ನಾರಾಯಣ್ ನೆನೆದಿದ್ದಾರೆ.

ಪುನೀತ್ ರಾಜ್​ಕುಮಾರ್ ಬಣ್ಣ ಹಚ್ಚುತ್ತಾರೆ ಎಂದರೆ ಕನಿಷ್ಟ ಒಂದು ಲಕ್ಷ ಮಂದಿ ಮನೆಯಲ್ಲಿ ಕುಳಿತು ಊಟ ಮಾಡುತ್ತಿದ್ದರು. ಮನುಷ್ಯನಿಗೆ ಸಾವು ಅನ್ನೋದು ಅಂತಿಮವಾದದ್ದು. ಹೌದು, ಆದರೆ ಅದು ಬರುವ ರೀತಿ ಸರಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಾಲ್ಯದಲ್ಲಿ ರಾಷ್ಟ್ರಪತಿ ಪಡೆದು ಇಂದು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಆಧಾರ ಸ್ಥಂಬವಾಗಿ ನಿಂತಿದ್ದರು. ಅವರ ಜೊತೆ ಅದೆಷ್ಟೋ ಮಂದಿ ಸಿನಿಮಾ ಮಾಡಬೇಕು ಎಂದು ಕನಸು ಕಂಡಿದ್ದರು. ಸಿನಿಮಾ ಮಾಡಲು ಆಗುತ್ತೋ? ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಅವರಿಗೆ ಅದೆಷ್ಟೋ ಸ್ಕ್ರಿಪ್ಟ್​ಗಳು ಇಂದು ರೆಡಿಯಾಗಿ ಕಾಯುತ್ತಿದ್ದವು.
ಪುನೀತ್​ ಅವರು ನಿಧನರಾಗಿದ್ದಾರೆ ಎಂದು ಹೇಳಿದಾಗ, ನಾನು ನಂಬಲಿಲ್ಲ. ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅಂದ್ಕೊಂಡೆ. ಅಷ್ಟಕ್ಕೂ ಸಮಾಧಾನ ಆಗಲಿಲ್ಲ. ಆಸ್ಪತ್ರೆಗೆ ಹೋದೆ, ಅಲ್ಲಿ ಮಲಗಿದ್ದರು. ನನಗೆ ಅವರು ಮೃತಪಟ್ಟಿದ್ದಾರೆ ಎಂದು ಅನಿಸಲಿಲ್ಲ. ನಿದ್ರೆ ಮಾಡುತ್ತಿದ್ದಾರೆ ಅಂದ್ಕೊಂಡೆ. ಯಾಕಂದ್ರೆ 24 ಗಂಟೆಗಳ ಹಿಂದೆ ನಾನು ಅವರ ಜೊತೆ ಮಾತನಾಡಿದ್ದೆ. ಈ ಶಾಕ್​ನಿಂದ ಹೊರ ಬರೋದು ತುಂಬಾ ಕಷ್ಟವಾಗುತ್ತಿದೆ ಎಂದು ಭಾವುಕರಾದರು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...