No menu items!
11.2 C
Munich
Friday, April 17, 2026

ನಾಳೆ ಬೆಳಗ್ಗೆಯೇ ಪುನೀತ್ ಅಂತ್ಯಕ್ರಿಯೆ

Must read

ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಂತ ನಟ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ನಾಳೆ ಬೆಳಿಗ್ಗೆ 10.30ಕ್ಕೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಲಿದೆ.

 

ಈ ಕುರಿತಂತೆ ಡಾ.ರಾಜ್ ಕುಮಾರ್ ಕುಟಂಬಸ್ಥರ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ನಾಳೆ ಬೆಳಿಗ್ಗೆ 6 ಗಂಟೆಯಿಂದ ಪಾರ್ಥೀವ ಶರೀರದ ಮೆರವಣಿಗೆ ಆರಂಭವಾಗಲಿದೆ.

ಕೆಆರ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್ ಮೂಲಕ, ಯಶವಂತಪುರ, ಆರ್ ಎಂ ಸಿ ಯಾರ್ಡ್, ಗೋರಗುಂಟೆಪಾಳ್ಯದ ಮೂಲಕ ಕಂಠೀರವ ಸ್ಟುಡಿಯೋವನ್ನು ತಲುಪಲಿದೆ.

ಬೆಳಿಗ್ಗೆ 10.30ಕ್ಕೆ ಕಂಠೀರವ ಸ್ಟುಡೀಯೋದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರದ ಅಂತ್ಯಸಂಸ್ಕಾರ ನೆರವೇರಿಲಿದೆ ಎಂಬುದಾಗಿ ತಿಳಿದು ಬಂದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article