ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಬೆಂಬಲ ನೀಡಿದ್ದಾರೆ. ಈಗಾಗಲೇ ದರ್ಶನ್ ಪ್ರಚಾರ ಆರಂಭಿಸಿದ್ದಾರೆ.
ಇದು ಜೆಡಿಎಸ್ ನಾಯಕರ ನಿದ್ದೆಗೆಡಿಸಿದ್ದು, ಪಕ್ಷದ ಮುಖಂಡ, ಸಂಸದ ಶಿವರಾಮೇಗೌಡ, ನಟರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದರ್ಶನ್, ಸುದೀಪ್ ದೊಡ್ಡ ನಟರಲ್ಲ ಎಂದು ಶಿವರಾಮೇಗೌಡ ಹೇಳಿದ್ದಾರೆ. ಯಶ್ ಎಂದು ಹೇಳುವ ಬದಲಿಗೆ ಸುದೀಪ್ ಹೆಸರನ್ನು ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಅವರೇ ಸುಮ್ಮನಿದ್ದಾರೆ. ಅವರಿಗಿಂತ ದೊಡ್ಡ ನಟರಾ ಇವರು ಎಂದು ಪ್ರಶ್ನಿಸಿದ್ದಾರೆ.
ಸುಮಲತಾ ಯಾವ ದೊಡ್ಡ ಗೌಡ್ತಿ. ಮಂಡ್ಯದಲ್ಲಿ ಯಶ್, ದರ್ಶನ್ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಅಂಬರೀಶ್ ಅವರನ್ನು ಕೂಡ ಶಿವರಾಮೇಗೌಡ ಟೀಕಿಸಿದ್ದಾರೆ.ಅಂಬರೀಶ್ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ ಎಂದು ದೂರಿದ್ದಾರೆ