ಸ್ಯಾಂಡಲ್ವುಡ್ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೀವನಾಧಾರಿತ ಕಥೆಯನ್ನೊಳಗೊಂಡು ಶಾರ್ಟ್ ಫಿಲ್ಮ್ ರೆಡಿಯಾಗ್ತಿದೆ.ನಿರ್ದೇಶಕ ತೇಜಸ್ ರಂಗನಾಥ್ ಅಪ್ಪು ಅವರ ಜೀವನ ಹಾಗೂ ಉತ್ತಮ ಕಾರ್ಯಗಳ ಕುರಿತಾಗಿ ಕಿರುಚಿತ್ರ ಮಾಡುತ್ತಿದ್ದು, ಅವರ ಜೊತೆ ಮನೋಜ್ ಕುಮಾರ್, ವಿಶ್ವನಾಥ್ ಗೌಡ, ಶರತ್ ಕುಮಾರ್, ಪೃಥ್ವಿರಾಜ್, ತಿಲಕ್ ಗೌಡ, ಸಮಂಜು ಮಣಿ ಸೇರಿದಂತೆ ಪುನೀತ್ ರಾಜಕುಮಾರ್ ಅವರ ಒಂದಷ್ಟು ಕಟ್ಟಾ ಅಭಿಮಾನಿಗಳು ‘ಅಜಾತಶತ್ರು’ ಎಂಬ ಹೆಸರಿನಲ್ಲಿ ಕಿರುಚಿತ್ರವನ್ನು ತಯಾರು ಮಾಡುತ್ತಿದ್ದಾರೆ. ಇನ್ನು ಈ ಬಗ್ಗೆ ಪುನೀತ್ ಅವರ ಸೋದರಳಿಯ ನಟ ಧೀರೇನ್ ರಾಮ್ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪೋಸ್ಟ್ ಮಾಡಿ, ಅಜಾತಶತ್ರು ಕಿರುಚಿತ್ರಕ್ಕೆ ಹಾಗೂ ಚಿತ್ರ ತಂಡಕ್ಕೆ ಒಳ್ಳೆಯ ಯಶಸ್ಸು ಸಿಗಲಿ ಎಂದು ಹೇಳಿದ್ದಾರೆ.ಮಾರ್ಚ್ 17 ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದು ಈ ಅಜಾತಶತ್ರು ಕಿರುಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪೋಸ್ಟರ್ನಲ್ಲಿ ಹಂಚಿಕೊಂಡಿದೆ.
https://www.instagram.com/p/B7qRlstFN9X/?igshid=1142nj8qeeuw4