ಪುನೀತ್ & ರಶ್ಮಿಕಾ ನಡುವೆ ವಾರ್!

admin
1 Min Read

ಪುನೀತ್ ಅಭಿನಯದ ಯುವರತ್ನ ಚಿತ್ರ ಏಪ್ರಿಲ್ 1 ನೇ ತಾರೀಕು ಬಿಡುಗಡೆಯಾಗುವ ವಿಷಯ ನಿಮಗೆಲ್ಲರಿಗೂ ತಿಳಿದ ಇದೆ. ಕೊರೋನಾವೈರಸ್ ಹಾವಳಿಯ ನಂತರ ಬಿಡುಗಡೆಯ ದಿನಾಂಕವನ್ನ ಘೋಷಣೆ ಮಾಡಿದ ಮೊದಲ ಚಿತ್ರ ಇದು. ಏಪ್ರಿಲ್ ಒಂದನೇ ತಾರೀಕು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಯುವರತ್ನ ಚಿತ್ರ ಏಕಕಾಲಕ್ಕೆ ತೆರೆಕಾಣಲಿದೆ.

 

 

ಕನ್ನಡದಲ್ಲಿ ಯುವರತ್ನ ಚಿತ್ರಕ್ಕೆ ಯಾವುದೇ ರೀತಿಯ ಪೈಪೋಟಿ ಇಲ್ಲ , ಯುವರತ್ನ ಏಪ್ರಿಲ್ ಒಂದನೇ ತಾರೀಕು ಬಿಡುಗಡೆಯ ಘೋಷಣೆ ಮಾಡಿರುವ ಕಾರಣ ಆ ಒಂದು ವಾರ ಯಾವುದೇ ಚಿತ್ರ ಬಿಡುಗಡೆಗೆ ಮುಂದಾಗಿಲ್ಲ. ತೆಲುಗಿನಲ್ಲಿಯೂ ಸಹ ಆ ವಾರ ಯಾವುದೇ ಚಿತ್ರ ಬಿಡುಗಡೆಯಾಗುತ್ತಿರಲಿಲ್ಲ. ಆದರೆ ಇದೀಗ ರಶ್ಮಿಕಾ ಮಂದಣ್ಣ ಮತ್ತು ಕಾರ್ತಿ ಅಭಿನಯದ ಸುಲ್ತಾನ್ ಚಿತ್ರ ತೆಲುಗಿನಲ್ಲಿಯೂ ಡಬ್ ಆಗುತ್ತಿದ್ದು ಏಪ್ರಿಲ್ ಎರಡನೇ ತಾರೀಕಿನಂದು ಬಿಡುಗಡೆಯಾಗಲಿದೆ.

 

 

 

ಹೀಗಾಗಿ ಯುವರತ್ನ ಚಿತ್ರ ಬಿಡುಗಡೆಯಾದ ಮರುದಿನವೇ ಸುಲ್ತಾನ್ ಬಿಡುಗಡೆಯಾಗಲಿದ್ದು ಯುವರತ್ನ ಮತ್ತು ಸುಲ್ತಾನ್ ನಡುವೆ ಭರ್ಜರಿ ಪೈಪೋಟಿ ಏರ್ಪಡಲಿದೆ. ಒಂದೆಡೆ ಪುನೀತ್ ಅಭಿನಯದ ಯುವರತ್ನ ಚಿತ್ರ ಇದ್ದರೆ ಮತ್ತೊಂದೆಡೆ ರಶ್ಮಿಕಾ ಅಭಿನಯದ ಸುಲ್ತಾನ್ ಚಿತ್ರ ಇರಲಿದ್ದು ತೆಲುಗು ಬಾಕ್ಸ್ ಆಫೀಸ್ ನಲ್ಲಿ ಯಾವ ಚಿತ್ರ ಗೆಲ್ಲಲಿಲ್ಲ ಎಂಬುದನ್ನ ಕಾದು ನೋಡಬೇಕು.

Share This Article
Leave a Comment