ಕೆಜಿಎಫ್ ನಂತರ ಈ ಆ್ಯಕ್ಷನ್ ಥ್ರಿಲ್ಲರ್ ನಲ್ಲಿ ಯಶ್!

0
298

ಕೆಜಿಎಫ್ ನಂತರ ರಾಕಿಂಗ್ ಸ್ಟಾರ್ ಯಶ್ ಅವರು ಯಾವ ಚಿತ್ರ ಮಾಡಲಿದ್ದಾರೆ ಎಂಬ ಚರ್ಚೆಗಳು ಈಗಾಗಲೇ ಆರಂಭವಾಗಿವೆ. ಕೆಜಿಎಫ್ ಚಿತ್ರದ ನಂತರ ಯಶ್ ಅವರು ಈ ನಿರ್ದೇಶಕರ ಜೊತೆ ಕೆಲಸ ಮಾಡಲಿದ್ದಾರೆ ಎಂದು ಹಲವಾರು ನಿರ್ದೇಶಕರುಗಳ ಹೆಸರುಗಳನ್ನು ಯಶ್ ಅವರ ಹೆಸರಿನ ಜೊತೆ ತಳುಕು ಹಾಕಲಾಗುತ್ತಿದೆ.

 

 

ಆದರೆ ಯಶ್ ಅವರು ಮಾತ್ರ ಕೆಜಿಎಫ್ ನಂತರ ತಮ್ಮ ಮುಂದಿನ ಚಿತ್ರ ಯಾವುದು ಎಂಬುದನ್ನು ಇದುವರೆಗೂ ಸಹ ಬಿಟ್ಟುಕೊಟ್ಟಿಲ್ಲ. ಇನ್ನೂ ಇದೀಗ ಬಂದಿರುವ ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮುಂದಿನ ಚಿತ್ರವನ್ನ ಮಫ್ತಿ ಖ್ಯಾತಿಯ ನರ್ತನ್ ಅವರ ಜೊತೆ ಮಾಡಲಿದ್ದಾರೆ.

 

 

ಹೌದು ಮಫ್ತಿ ಖ್ಯಾತಿಯ ನರ್ತನ್ ಅವರ ಜೊತೆ ರಾಕಿಂಗ್*ಯಶ್ ಅವರು ಆ್ಯಕ್ಷನ್ ಥ್ರಿಲ್ಲರ್ ಚಿತ್ರವೊಂದನ್ನು ಮಾಡಲಿದ್ದಾರೆ. ನರ್ತನ್ ಅವರ ಕಥೆ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಖತ್ ಇಷ್ಟವಾಗಿದ್ದು ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆ ಎಂಬ ಮಾಹಿತಿ ಇದೆ.