ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪೂಜಾ ಗಾಂಧಿ ಅವರ ವಿರುದ್ಧ ಕಂಪ್ಲೇಂಟ್ ದಾಖಲಾಗಿದೆ. ಕಾರಣ ಏನ್ ಗೊತ್ತಾ? ಪೂಜಾ ಗಾಂಧಿ ಅವರು ಹೋಟೆಲ್ ಬಿಲ್ ಕಟ್ಟದೇ ಪರಾರಿ ಆಗಿರುವುದು.
ಬೆಂಗಳೂರಿನ ಹೋಟೆಲ್ ಒಂದಕ್ಕೆ ಹೋದ ಪೂಜಾಗಾಂಧಿ ಒಂದಲ್ಲ , ಎರಡಲ್ಲ ಬರೋಬ್ಬರಿ 4.5ಲಕ್ಷ ರೂ ಬಿಲ್ ಮಾಡಿ..ಬಿಲ್ ಮೊತ್ತ ಪಾವತಿಸದೇ ಹೇಳದೇ ಕೇಳದೇ ಅಲ್ಲಿಂದ ಜೂಟ್ ಆಗಿದ್ದಾರೆ.
ಹೋಟೆಲ್ ನವರು ಸುಮ್ನೆ ಇರ್ತಾರಾ? ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾರೆ. ಪೊಲೀಸರು ಪೂಜಾ ಅವರನ್ನು ಸ್ಟೇಷನ್ ಗೆ ಕರೆಸಿಕೊಂಡು ವಿಚಾರ ಕೂಡ ಮಾಡಿದ್ದಾರೆ. ಬಳಿಕ ಪೂಜಾ ಪೊಲೀಸರ ಸಮ್ಮುಖದಲ್ಲಿ 2 ಲಕ್ಷ ರೂ ನೀಡಿ ಉಳಿದ ಹಣ ಪಾವತಿಸೋಕೆ ಟೈಮ್ ಕೋರಿದ್ದಾರೆ. ಒಟ್ನಲ್ಲಿ ಮಳೆ ಹುಡುಗಿ ಹೋಟೆಲ್ ಬಿಲ್ ಕಟ್ಟದೇ ಎಸ್ಕೇಪ್ ಆಗಿ ಪೊಲೀಸ್ ಠಾಣೆ ಮೆಟ್ಟಿಲೇರಿ ಮುಜುಗರಕ್ಕೆ ಒಳಗಾಗಿದ್ದಾರೆ.
ಪೂಜಾ ಗಾಂಧಿ ವಿರುದ್ಧ ದಾಖಲಾಯ್ತು ಕಂಪ್ಲೇಂಟ್…ಕಾರಣ ಕೇಳಿದ್ರೆ ಶಾಕ್ ಆಗ್ತೀರಿ..!
Date: