ಪೃಥ್ವಿ, ಧವನ್ ಆಟಕ್ಕೆ ಸಿಎಸ್ ಕೆ ತಬ್ಬಿಬ್ಬು!

1
33

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವ ದಿಟ್ಟ ಸಂದೇಶ ರವಾನಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ನೀಡಿದ ಬೃಹತ್‌ ಮೊತ್ತವನ್ನೇ ಸುಲಭದ ಗುರಿಯಂತೆ ಚೇಸ್‌ ಮಾಡಿ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಶುಭಾರಂಭ ಮಾಡಿದೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್‌‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್, ತನ್ನ ಪಾಲಿನ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟದಲ್ಲಿ‌ 188 ರನ್‌ಗಳ ದೊಡ್ಡ ಮೊತ್ತ ಪೇರಿಸಿತು.

ಬಳಿಕ ಗುರಿ ಬೆನ್ನತ್ತಿದ ಡೆಲ್ಲಿ ಪಡೆಗೆ ಓಪನರ್‌ಗಳು ಶತಕದ ಜೊತೆಯಾಟ ಒದಗಿಸಿ ಸ್ಫೋಟಕ ಆರಂಭಕೊಟ್ಟರು. ಶಿಖರ್‌ ಧವನ್ ಮತ್ತು ರಿಷಭ್ ಪಂತ್ ಇಬ್ಬರೂ ಅರ್ಧಶತಕ ಬಾರಿಸಿದ ಪರಿಣಾಮ 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 190 ರನ್‌ ಚೆಚ್ಚಿ ಭರ್ಜರಿ ಜಯ ದಾಖಲಿಸಿತು.

ಇತ್ತೀಚೆಗೆ ನಡೆದ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ 800ಕ್ಕೂ ಹೆಚ್ಚು ರನ್‌ಗಳಿಸಿ ಅಮೋಘ ಲಯ ಕಂಡುಕೊಂಡಿದ್ದ ಯುವ ಓಪನರ್‌ ಪೃಥ್ವಿ ಶಾ, ಐಪಿಎಲ್‌ 2021 ಟೂರ್ನಿಯಲ್ಲಿ ಸಿಎಸ್‌ಕೆ ಎದುರು ಅದೇ ಆತ್ಮವಿಶ್ವಾಸದೊಂದಿಗೆ ಬ್ಯಾಟ್‌ ಬೀಸಿದರು. ಶಿಖರ್‌ ಧವನ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿ ಮೊದಲ ವಿಕೆಟ್‌ಗೆ 69 ಎಸೆತಗಳಲ್ಲಿ 138 ರನ್‌ಗಳ ಭರ್ಜರಿ ಜೊತೆಯಾಟ ಆಡಿದರು.

ಪೃಥ್ವಿ ಕೇವಲ 38 ಎಸೆತಗಳಲ್ಲಿ 9 ಫೋರ್‌ ಮತ್ತು 3 ಸಿಕ್ಸರ್‌ಗಳೊಂದಿಗೆ 72 ರನ್‌ ಚೆಚ್ಚಿದರೆ, ಅನುಭವದ ಆಟವಾಡಿದ ‘ಗಬ್ಬರ್‌’ ಖ್ಯಾತಿಯ ಶಿಖರ್‌ ಧವನ್‌ 54 ಎಸೆತಗಳಲ್ಲಿ 10 ಪೋರ್‌ ಮತ್ತು 2 ಸಿಕ್ಸರ್‌ಗಳೊಂದಿಗೆ 85 ರನ್‌ ಬಾರಿಸಿ ತಂಡದ ಜಯದ ಹಾದಿಯನ್ನು ಸುಲಭವನ್ನಾಗಿಸಿದರು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಸೂಪರ್‌ ಕಿಂಗ್ಸ್‌ 5 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿ ಕೇವಲ 30 ರನ್ ಮಾತ್ರ‌ ಗಳಿಸಿತ್ತು. ಆದರೆ, ಸುರೇಶ್‌ ರೈನಾ (54), ಮೊಯೀನ್‌ ಅಲಿ (36) ಮತ್ತು ಸ್ಯಾಮ್‌ ಕರ್ರನ್ (34) ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 188 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.

ಇಂಗ್ಲೆಂಡ್‌ ಸ್ಟಾರ್‌ ಆಟಗಾರರಾದ ಕ್ರಿಸ್‌ ವೋಕ್ಸ್‌ ಮತ್ತು ಟಾಮ್‌ ಕರ್ರನ್ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಮಾರ್ಕಸ್‌ ಸ್ಟೋಯ್ನಿಸ್‌ ಮತ್ತು ಶಿಮ್ರಾನ್‌ ಹೆಟ್ಮಾಯೆರ್‌ ಆಡುವ ಹನ್ನೊಂದರ ಬಳಗದಲ್ಲಿ ಇರುವ ಮತ್ತಿಬ್ಬರು ವಿದೇಶಿ ಆಟಗಾರರಾಗಿದ್ದಾರೆ. ಸ್ಟೀವ್‌ ಸ್ಮಿತ್‌ ಅವಕಾಶ ಪಡೆಯದೇ ಇರುವುದು ಅಚ್ಚರಿ ಮೂಡಿಸಿದೆ.

 

1 COMMENT

LEAVE A REPLY

Please enter your comment!
Please enter your name here