ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈಗ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್ , ಬಾಲಿವುಡ್ನಲ್ಲೂ ಬಹು ಬೇಡಿಕೆಯ ನಟ..! ಹಾಲಿವುಡ್ಗೂ ಕನ್ನಡದ ಮಾಣಿಕ್ಯನ ಎಂಟ್ರಿಯಾಗಿದೆ. ಪೈಲ್ವಾನ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಕಿಚ್ಚ ಅಭಿನಯದ ಮೆಗಾಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಈ ಸಂತಸದ ಸುದ್ದಿಗಳ ನಡುವೆ ಪೈಲ್ವಾನ್ ಅಸಲಿ ದರ್ಶನವಾಗಿದೆ..!
ಹೌದು ಸುದೀಪ್ ಅಭಿನಯದ ಕನ್ನಡದ ಬಹು ನಿರೀಕ್ಷಿತ ಸಿನಿಮಾ ಪೈಲ್ವಾನ್ ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಟೀಸರ್, ಪೋಸ್ಟರ್ , ಸ್ಟಾರ್ ಕಾಸ್ಟಿಂಗ್ನಿಂದ ಈಗಾಗಲೇ ಗಮನ ಸೆಳೆದಿರುವ ಪೈಲ್ವಾನ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಅಂದ್ರೆ ಇದಪ್ಪಾ ಅಂತ ಕಿಚ್ಚನ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ..!
ಹೆಬ್ಬುಲಿ ಖ್ಯಾತಿಯ ಡೈರೆಕ್ಟರ್ ಕೃಷ್ಣ ಮತ್ತು ಸುದೀಪ್ ಕಾಂಬಿನೇಷನ್ನ ಎರಡನೇ ಸಿನಿಮಾ ಪೈಲ್ವಾನ್. ಸುನೀಲ್ ಶೆಟ್ಟಿ ಸೇರಿದಂತೆ ಪರ ಭಾಷಾ ಸ್ಟಾರ್ ಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಟ್ರೇಲರ್ ನೋಡಿದರೆ ಖಂಡಿತಾ ನೀವು ಕಳೆದು ಹೋಗುತ್ತೀರಿ. ಸುದೀಪ್ ಲುಕ್ ಅಂತು ನಿಮ್ಮ ಮನಸೂರೆಗೊಳಿಸುತ್ತದೆ. ಟ್ರೇಲರ್ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.
ಇನ್ನು ಪ್ರಮುಖವಾಗಿ ಸುದೀಪ್ ಈ ಸಿನಿಮಾದಲ್ಲಿ ಕಿಚ್ಚ. ಹುಚ್ಚ, ಕಿಚ್ಚ ಹಾಗೂ ಕಿಚ್ಚ-ಹುಚ್ಚ ಸಿನಿಮಾದಲ್ಲಿ ಕಿಚ್ಚನ ಪಾತ್ರದಲ್ಲಿ ಮಿಂಚಿದ್ದ ಸ್ಯಾಂಡಲ್ವುಡ್ ಬಾದ್ ಷಾ ಸುದೀಪ್ ಪೈಲ್ವಾನ್ನಲ್ಲೂ ಕಿಚ್ಚ ಎಂಬುದು ಟ್ರೇಲರ್ ನಲ್ಲಿ ಬಹಿರಂಗವಾಗಿದೆ. ಟ್ರೇಲರ್ ಒಮ್ಮೆ ನೋಡಿದ್ರೆ ಮತ್ತೆ ಮತ್ತೆ ನೋಡಬೇಕೆನ್ನಿಸುವಂತಿದೆ ಎನ್ನುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ.
ಯೂಟ್ಯೂಬ್ನಲ್ಲಿ ರಿಲೀಸ್ ಆದ ಕೆಲವೇ ಕೆಲವು ಗಂಟೆಗಳಲ್ಲಿ 5 ಲಕ್ಷ ವೀವ್ಸ್ ಆಗಿದೆ…
ಸುದೀಪ್ ಈ ಸಿನಿಮಾದಿಂದ ಮತ್ತಷ್ಟು ಅಭಿಮಾನಿಗಳನ್ನು ಸಂಪಾದಿಸುವುದರಲ್ಲಿ ಡೌಟಿಲ್ಲ. ಸುದೀಪ್ ಅಭಿನಯವೂ ಮನೋಜ್ಞವಾಗಿದೆ. ಸುದೀಪ್ ಅಲ್ಲದೆ ಸುನೀಲ್ ಶೆಟ್ಟಿ ಕೂಡ ಇಷ್ಟವಾಗುತ್ತಾರೆ.
ಸೆಪ್ಟೆಂಬರ್ 12 ಕ್ಕೆ ಸಿನಿಮಾ ರಿಲೀಸ್ ಆಗಲಿದೆ.
ಪೈಲ್ವಾನ್ ಅಬ್ಬರ ಶುರುವಾಗಿಯೇ ಬಿಡ್ತು… ಕಿಚ್ಚನಾಗಿ ಪೈಲ್ವಾನ್ ಸುದೀಪ್ ಗರ್ಜನೆ..!
Date: