ಅಭಿನಯ ಚಕ್ರವರ್ತಿ, ಚಂದನವನದ ಮಾಣಿಕ್ಯ, ಅಭಿಮಾನಿಗಳ ಪ್ರೀತಿಯ ರನ್ನ. ಬಾದ್ ಷಾ… ಪೈಲ್ವಾನ್…. ಹೀಗೆ ಅನೇಕ ಬಿರುದುಗಳಿಂದ ಕರೆಸಿಕೊಳ್ಳುವ ಸುದೀಪ್ ಅವರಿಂದು ಸ್ಯಾಂಡಲ್ವುಡ್ ಸ್ಟಾರ್ ಮಾತ್ರವಲ್ಲ… ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ನಲ್ಲೂ ಸ್ಟಾರೇ..! ಸುದೀಪ್ ಪೈಲ್ವಾನ್ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಪೈಲ್ವಾನ್ ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. ಪಂಚ ಭಾಷೆಗಳಲ್ಲಿ ನಾಳೆಯಿಂದ ಪೈಲ್ವಾನ್ ಅಬ್ಬರ ಶುರುವಾಗಲಿದೆ.
ಈ ಹಿಂದೆ ಸುದೀಪ್ ಅವರಿಗೆ ಹೆಬ್ಬುಲಿ ಸಿನಿಮಾ ನಿರ್ದೇಶನ ಮಾಡಿದ್ದ ಕೃಷ್ಣ ಅವರು ಪೈಲ್ವಾನ್ಗೂ ಡೈರೆಕ್ಷನ್ ಮಾಡಿದ್ದಾರೆ. ಸುದೀಪ್ ಮತ್ತು ಕೃಷ್ಣ ಕಾಂಬಿನೇಷನ್ನ ಎರಡನೇ ಸಿನಿಮಾ ಪೈಲ್ವಾನ್ ನಲ್ಲಿ ಆಕಾಂಕ್ಷ ಸಿಂಗ್ ಸುದೀಪ್ ಗೆ ನಾಯಕಿ..! ಸುನೀಲ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಪೋಸ್ಟರ್, ಟೀಸರ್, ಟ್ರೈಲರ್, ಹಾಡುಗಳಿಂದ ಪೈಲ್ವಾನ್ ಈಗಾಗಲೇ ಸೌಂಡು ಮಾಡ್ತಿದ್ದಾನೆ.. ಇನ್ನು ನಾಳೆಯಿಂದ ಥಿಯೇಟರ್ ಗಳಲ್ಲಿ ಅವನದ್ದೇ ಹವಾ ಬಿಡಿ..!
ಇದೇ ಖುಷಿಯಲ್ಲಿ ಅಭಿಮಾನಿಗಳಿಗೆ ಸುದೀಪ್ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಪೈಲ್ವಾನ್ ಆಗಿ ತೊಡೆ ತಟ್ಟಿರುವ ಅವರು ಕ್ರಿಕೆಟರ್ ಆಗಿ ಮಿಂಚಲಿದ್ದಾರೆ. ರಿಯಲ್ ಆಗಿ ಕ್ರಿಕೆಟ್ ಆಡಿ ಗಮನ ಸೆಳೆದಿರುವ ಸುದೀಪ್ ಪರದೆಯನ್ನು ಕ್ರಿಕೆಟರ್ ಆಗಿ ಕಮಾಲ್ ಮಾಡುವ ನಿರೀಕ್ಷೆ ಇದೆ. ಸುದೀಪ್ ಅವರಿಗೆ ಪೈಲ್ವಾನ್ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಿಮ್ಮನ್ನು ಕ್ರಿಕೆಟರ್ ಆಗಿ ಸಿನಿಮಾದಲ್ಲಿ ಕಾಣಲು ಸಾಧ್ಯವೇ ಎಂಬ ಪ್ರಶ್ನೆ ಎದುರಾದಾಗ ಸುದೀಪ್. ತಮ್ಮ ಪಕ್ಕದಲ್ಲೇ ಇದ್ದ ಕಾರ್ತಿಕ್ ಗೌಡರನ್ನು ತೋರಿಸಿ ಅವರು 200ರಿಂದ 300 ಕೋಟಿಯ ಬಿಗ್ ಬಜೆಟ್ ಮೂವಿ ಮಾಡಲಿದ್ದಾರೆ. ಅವರನ್ನು ಕೇಳಿ ಮಾಡ್ಬಹುದಾ ಅಂತ ಎಂದಿದ್ದಾರೆ. ಅದಕ್ಕೆ ಹೌದು ಎನ್ನುವಂತೆ ಕಾರ್ತಿಕ್ ತಲೆಯಾಡಿಸಿದ್ದಾರೆ. ಆದ್ದರಿಂದ ಸುದೀಪ್ ಕ್ರಿಕೆಟರ್ ಆಗಿ ಸಿನಿಮಾದಲ್ಲಿ ಮಿಂಚೋದು ಗ್ಯಾರೆಂಟಿಯಾಗಿದೆ.