ಪೈಲ್ವಾನ್ ಚಿತ್ರತಂಡಕ್ಕೆ ಬೈದ ದರ್ಶನ್!

Date:

ನಿನ್ನೆಯಷ್ಟೇ ರಾಬರ್ಟ್ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಬರ್ಟ್ ಚಿತ್ರ ಗೆದ್ದ ಖುಷಿಯಲ್ಲಿ ಚಿತ್ರತಂಡ ಸಂಭ್ರಮಿಸಿತು. ಇದೇ ವೇಳೆ ಮಾತನಾಡಿದ ದರ್ಶನ್ ಅವರು ರಾಬರ್ಟ್ ಸಿನಿಮಾ ಪೈರಸಿ ಆಗಿರುವುದರ ಕುರಿತು ಮಾತನಾಡಿದರು.

 

 

ನಮ್ಮ ಚಿತ್ರವನ್ನು ಸಹ ಪೈರಸಿ ಮಾಡಿ ಬಿಡಲಾಗಿದೆ. ಈ ಹಿಂದೆ ಒಂದು ಚಿತ್ರವನ್ನು ಪೈರಸಿ ಮಾಡಲಾಗಿದೆ ಎಂದು ನನ್ನ ಅಭಿಮಾನಿಯೊಬ್ಬನನ್ನು ಕರೆದುಕೊಂಡು ಹೋಗಿ ಆತನ ಜೀವನವನ್ನೇ ಹಾಳು ಮಾಡಿದರು. ಪೈರಸಿ ಮಾಡಿದರೆ ಆತನನ್ನು ಕರೆದು ಬುದ್ಧಿ ಹೇಳಲಿ ಅದನ್ನು ಬಿಟ್ಟು ಜೈಲಿಗೆ ಕಳಿಸುವುದು ಒಳ್ಳೆಯದಲ್ಲ.

 

 

ನಮ್ಮ ಚಿತ್ರವನ್ನು ಸಹ ಒಬ್ಬ ನಟನ ಅಭಿಮಾನಿ ಪೈರಸಿ ಮಾಡಿ ಅಪ್ಲೋಡ್ ಮಾಡಿದ್ದಾನೆ. ಆತನನ್ನು ಜೈಲಿಗೆ ಕಳಿಸುವುದು ನಮಗೆ ದೊಡ್ಡ ವಿಷಯವಲ್ಲ ಆದರೆ ನಾವು ಆ ರೀತಿ ಮಾಡುವುದಿಲ್ಲ , ಆತನಿಗೆ ಬುದ್ಧಿ ಹೇಳಿ ಕಳುಹಿಸಲಾಗಿದೆ ಎಂದು ದರ್ಶನ್ ಅವರು ಹೇಳಿದರು. ಚಿತ್ರ ಚೆನ್ನಾಗಿದ್ದರೆ ಎಷ್ಟೇ ಪೈರಸಿ ಮಾಡಿದರೂ ಸಹ ಚಿತ್ರಮಂದಿರದಲ್ಲಿ ಓಡುತ್ತವೆ ಚಿತ್ರದಲ್ಲಿ ಧಮ್ ಇಲ್ಲದಿದ್ದರೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ನಮ್ಮ ಅನ್ನವನ್ನು ಕಿತ್ತುಕೊಂಡ್ರು ಅಂತ ಗೋಳಾಡುತ್ತಾರೆ ಎಂದು ದರ್ಶನ್ ಅವರು ಪರೋಕ್ಷವಾಗಿ ಪೈಲ್ವಾನ್ ಚಿತ್ರದ ನಿರ್ಮಾಪಕ ಮತ್ತು ಚಿತ್ರತಂಡಕ್ಕೆ ಟಾಂಗ್ ನೀಡಿದ್ದಾರೆ.

 

 

 

ಪೈಲ್ವಾನ್ ಚಿತ್ರ ಪೈರಸಿ ಯಾದ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಸಂದರ್ಶನವೊಂದರಲ್ಲಿ ಪೈರಸಿ ಮಾಡಿ ನಮ್ಮ ಚಿತ್ರವನ್ನ ಸೋಲಿಸಿದರು , ಈ ನಮ್ಮ ಸಿನಿಮಾಗೆ ನಷ್ಟವಾಯಿತು, ನಮ್ಮ ತಟ್ಟೆಯ ಅನ್ನವನ್ನು ಕಿತ್ತುಕೊಂಡರು ಎಂದು ಕಣ್ಣೀರು ಹಾಕಿದ್ದರು. ಇದೀಗ ದರ್ಶನ್ ಅವರು ಹೇಳಿರುವ ಹೇಳಿಕೆ ಪೈಲ್ವಾನ್ ಚಿತ್ರತಂಡಕ್ಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳಾಗುತ್ತಿವೆ.

 

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...