ಪೈಲ್ವಾನ್ ರಿಲೀಸ್ ಡೇಟ್ ಪಕ್ಕಾ ಆಯ್ತು…ಇಲ್ಲಿದೆ ಸುದೀಪ್ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್..!

Date:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕನ್ನಡದ ಬಹು ನಿರೀಕ್ಷಿತ ಸಿನಿಮಾ ಅಂದರೆ ಅದು ಪೈಲ್ವಾನ್. ಕಿಚ್ಚ- ಕಿಟ್ಟಪ್ಪ ಕಾಂಬಿನೇಷನ್​ನ ಎರಡನೇ ಮೂವಿ ಈ ಪೈಲ್ವಾನ್. ಯಾವಾಗ ಸೆಟ್ಟೇರಿತೋ ಅಂದಿನಿಂದ ಸೌಂಡ್ ಮಾಡುತ್ತಲೇ ಇದೆ.
ಪೋಸ್ಟರ್, ಟೀಸರ್ ಗಳಿಂದ ಸದ್ದು ಮಾಡಿದ್ದ ಸಿನಿಮಾ ರಿಲೀಸ್​ಗೆ ಅಭಿಮಾನಿಗಳು ಬಹುಕಾಲದಿಂದ ಕಾಯುತ್ತಿದ್ದರು. ಹೆಬ್ಬುಲಿ ಸಿನಿಮಾದ ಬಳಿಕ ಅಭಿನಯ ಚಕ್ರವರ್ತಿ ಸೋಲೋ ಹೀರೋ ಆಗಿ ನಟಿಸುತ್ತಿರುವ ಒಂದೇ ಒಂದು ಸಿನಿಮಾ ಸಹ ಬಂದಿಲ್ಲ. ಹೀಗಾಗಿ ಪೈಲ್ವಾನ್​ಗೆ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.
ದಿನೇ ದಿನೇ ಪೈಲ್ವಾನ್ ತೆರೆಗೆ ಎಂಟ್ರಿ ಕೊಡುವ ಡೇಟ್ ಮುಂದೆ ಹೋಗುತ್ತಲೇ ಇದೆ. ದಿನಾಂಕ ಪಕ್ಕಾ ಆಗಿಲ್ಲ. ಆದರೆ. ಈಗ ಖಚಿತ ಮಾಹಿತಿಯೊಂದು ಹೊರಬಿದ್ದಿದೆ. ಇನ್ನು 5 ತಿಂಗಳು ಪೈಲ್ವಾನ್​ ಗೆ ಕಾಯ ಬೇಕು. ಪೈಲ್ವಾನ್ ಅವತಾರದಲ್ಲಿ ಬಾದ್​ ಶಾ ಸುದೀಪ್ ಆಗಸ್ಟ್ 9ಕ್ಕೆ ನಿಮ್ಮ ಮುಂದೆ ಬರಲಿದ್ದಾರೆ.
ಕನ್ನಡ ಮಾತ್ರವಲ್ಲದೆ ಹಿಂದಿ, ಭೋಜಪುರಿ, ಮರಾಠಿ, ತಮಿಳು, ತೆಲುಗು, ಮಲೆಯಾಳಂ ನಲ್ಲೂ ಪೈಲ್ವಾನ್ ಅಬ್ಬರಿಸಲಿದ್ದಾನೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...