ಪೊಗರು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಿನ್ನೆಯಷ್ಟೇ ದಾವಣಗೆರೆಯಲ್ಲಿ ನಡೆದಿದೆ. ದೇಶದಾದ್ಯಂತ ಕರಾಳದಿನ ಆಚರಣೆ ಮಾಡ್ತಾ ಇದ್ರೆ ಪೊಗರು ಚಿತ್ರತಂಡಕ್ಕೆ ಮಾತ್ರ ಇದರ ಬಗ್ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ ಬಿಡಿ.
ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಕರೆಸಲಾಗಿತ್ತು. ಸಿದ್ದರಾಮಯ್ಯನವರು ಸ್ತ್ರೀಯರನ್ನು ಸದಾ ಗೌರವದಿಂದ ಕಾಣುವ ನಾಯಕ. ಮಹಿಳೆಯರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡಿರುವ ಸಿದ್ದರಾಮಯ್ಯನವರು ಮಹಿಳಾ ಸಬಲೀಕರಣ ಬೆಂಬಲದಲ್ಲಿ ಸದಾ ಮುಂದು.
ಇಂತಹ ಹಿನ್ನೆಲೆ ಹೊಂದಿರುವ ಸಿದ್ದರಾಮಯ್ಯನವರು ಇದೀಗ ಪೊಗರು ಚಿತ್ರದ ಆಡಿಯೋ ಬಿಡುಗಡೆಗೆ ಬಂದು ತಪ್ಪು ಮಾಡಿಬಿಟ್ಟರು ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೌದು ಪೊಗರು ಚಿತ್ರದ ಕರಾಬು ಹಾಡನ್ನು ನೀವೆಲ್ಲಾ ನೋಡಿರುತ್ತೀರ.. ಆ ಹಾಡಿನ ಡಾನ್ಸ್ ನಲ್ಲಿ ನಟಿ ರಶ್ಮಿಕಾರನ್ನು ಹೇಗೆಲ್ಲಾ ಬಳಸಿಕೊಳ್ಳಲಾಗಿದೆ ಎಂಬುದು ನಿಮಗೇ ತಿಳಿದಿದೆ.
ನಟಿ ರಶ್ಮಿಕಾ ಅವರಿಗೆ ಹಾಡಿನಲ್ಲಿ ಮನಬಂದಂತೆ ಬಳಸಿಕೊಳ್ಳಲಾಗಿದೆ.. ನಟಿಯನ್ನು ರೇಗಿಸಲು ಈ ಹಿಂದೆ ಸಾಕಷ್ಟು ಹಾಡುಗಳನ್ನು ಕನ್ನಡದಲ್ಲಿ ಮಾಡಲಾಗಿದೆ , ಆದರೆ ಇಷ್ಟು ಹಿಂಸಾತ್ಮಕವಾಗಿ ಯಾರೂ ಸಹ ಹಾಡನ್ನು ಮಾಡಿರಲಿಲ್ಲ. ಕೆಲವೊಮ್ಮೆ ಇದು ಹಾಡಾ? ಅಥವಾ ನಟ & ನಟಿ ನಡುವಿನ ಹೊಡೆದಾಟವ ಎನಿಸಿಬಿಡುತ್ತದೆ. ಅಷ್ಟರ ಮಟ್ಟಿಗಿದೆ ನಟಿಯ ಮೇಲಿನ ಹಿಂಸೆ..
ನಟಿಯ ದುಪ್ಪಟ್ಟವನ್ನು ಸೊಂಟದ ಕೆಳಗೆ ಸಿಕ್ಕಿಸಿಕೊಂಡು ಡಾನ್ಸ್ ಮಾಡೋದು , ಜಡೆ ಹಿಡಿದು ಎಳೆದಾಡೋದು , ಕಾಲಿನಿಂದ ಎಳೆದು ತಬ್ಬಿಕೊಳ್ಳೋದು… ಅಬ್ಬಬ್ಬಾ ಇದೇನು ಟಪ್ಪೋರಿ ಹಾಡಾ? ಅಥವಾ ಅತ್ಯಾಚಾರದ ದೃಶ್ಯಗಳಾ? ಅಂತ ಕೇಳ್ಬೇಡಿ… ಖಂಡಿತಾ ಇವು ಕರಾಬು ಹಾಡಿನಲ್ಲಿ ನಟಿ ರಶ್ಮಿಕಾರನ್ನು ಬಳಸಿಕೊಂಡಿರುವ ರೀತಿ..
ನಟಿ ಮಾತ್ರವಲ್ಲದೇ ಹಾಡಿನಲ್ಲಿ ಬರುವ ಸಹ ನೃತ್ಯಗಾರ್ತಿಯರಿಗೂ ಸಹ ಧೃವ ಸರ್ಜಾ ಅವರು ಕೈ ಮಾಡುವ & ಕುತ್ತಿಗೆ ಹಿಡಿದು ತಳ್ಳುವ ದೃಶ್ಯಗಳೂ ಇವೆ!! ನಟ ನಟಿಯನ್ನು ಚುಡಾಯಿಸುವ ಹಾಡಿನಲ್ಲಿ ಪಾಪ ನೃತ್ಯಗಾರ್ತಿಯರು ಒದೆ ತಿನ್ನುವುದು ಎಷ್ಟು ಸರಿ? ಇದೆಲ್ಲಾ ಮಹಿಳಾ ಸಂಘದವರ ಕಣ್ಣಿಗೆ ಕಾಣಿಸಿಲ್ಲವೇ? ಇಷ್ಟು ಹಿಂಸಾತ್ಮಕ ದೃಶ್ಯಗಳಿರುವ ಈ ಸಿನಿಮಾಗೆ ಯು/ಎ ಸರ್ಟಿಫಿಕೇಟನ್ನು ಸೆನ್ಸಾರ್ ಬೋರ್ಡಿನವರು ಹೇಗೆ ಕೊಟ್ರೋ ಏನೋ ಅಂತಿದ್ದಾರೆ ನೆಟ್ಟಿಗರು..
ಮಹಿಳೆಯರ ಮೇಲೆ ಇಷ್ಟೆಲ್ಲಾ ಹಿಂಸೆ ಕೊಟ್ಟು ಮಾಡಿರೋ ಹಾಡು ದೊಡ್ಡ ಹಿಟ್ ಆಗಿದೆ , ಅಂತಹ ಚಿತ್ರದ ಆಡಿಯೋ ಬಿಡುಗಡೆಗೆ ಸ್ತ್ರೀಯರನ್ನು ಗೌರವಿಸುವ ಸಿದ್ದರಾಮಯ್ಯನವರಿಗೆ ಬರುವುದಕ್ಕಾದರೂ ಹೇಗೆ ಮನಸ್ಸು ಬಂತು??
ನಿಜಕ್ಕೂ ಸಿದ್ದರಾಮಯ್ಯನವರು ಇಂತಹ ಆಲೋಚನೆ ಮಾಡಬೇಕಿತ್ತು , ಪೊಗರು ಚಿತ್ರದ ಆಡಿಯೋ ಲಾಂಚ್ ಗೆ ಬಂದು ತಪ್ಪು ಮಾಡಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತುಗಳು ಕೇಳಿಬರುತ್ತಿವೆ.