ನಿನ್ನೆ ಪೊಗರು ಚಿತ್ರ ಕನ್ನಡದ ಜತೆಗೆ ತೆಲುಗಿನಲ್ಲಿ ಗೂ ಸಹ ಬಿಡುಗಡೆಯಾಗಿದೆ. ನಟಿ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ಅಭಿನಯಿಸಿರುವ ಕಾರಣ ಆಂಧ್ರ ಮತ್ತು ತೆಲಂಗಾಣದಲ್ಲಿ ರಶ್ಮಿಕಾ ಅವರಿಗೆ ಒಳ್ಳೆಯ ಕ್ರೇಜ್ ಇರುವುದರಿಂದ ಪೊಗರು ಚಿತ್ರ ಆಂಧ್ರ ಮತ್ತು ತೆಲಂಗಾಣದಲ್ಲಿ ಕೊಂಚ ದೊಡ್ಡ ಮಟ್ಟದಲ್ಲಿಯೇ ಬಿಡುಗಡೆಯಾಯಿತು.
ಇನ್ನೂ ಪೊಗರು ಚಿತ್ರವನ್ನು ವೀಕ್ಷಿಸಿದ ತೆಲುಗು ಪ್ರೇಕ್ಷಕರು ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಪೊಗರು ರೀತಿಯ ಕಮರ್ಷಿಯಲ್ ಚಿತ್ರಗಳು ತೆಲುಗಿನಲ್ಲಿ ಹೆಚ್ಚಾಗಿ ಬರುತ್ತವೆ ಹೀಗಾಗಿ ಪೊಗರು ಅಂತಹ ಮಹಾನ್ ಚಿತ್ರವೇನಲ್ಲ ಒಂದೊಮ್ಮೆ ನೋಡಬಹುದು ಅಷ್ಟೆ ಎಂದು ಕೆಲವೊಂದಷ್ಟು ಪ್ರೇಕ್ಷಕರು ಹೇಳಿದರೆ ಇನ್ನೂ ಕೆಲವರು ಒನ್ ಸ್ಟಾರ್ ರೇಟಿಂಗ್ ಕೊಟ್ಟಿದ್ದೂ ಉಂಟು..
ಧ್ರುವ ಸರ್ಜಾ ಅವರ ನಟನೆ , ಬಾಡಿ ಮತ್ತು ಡೆಡಿಕೇಷನ್ ಅನ್ನು ತೆಲುಗು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ ಆದರೆ ಚಿತ್ರ ಅಷ್ಟೇನೂ ಇಷ್ಟವಾಗಿಲ್ಲ ಎಂಬುದು ಹೆಚ್ಚಿನ ತೆಲುಗು ಪ್ರೇಕ್ಷಕರ ಅಭಿಪ್ರಾಯ. 3ವರ್ಷಗಳ ಕಾಲವನ್ನು ಇಂತಹ ಚಿತ್ರಕ್ಕೆ ಹಾಕುವ ಬದಲು ಒಂದೊಳ್ಳೆ ಕಂಟೆಂಟ್ ಇರುವ ಚಿತ್ರವನ್ನು ಮಾಡಿದರೆ ಉತ್ತಮ ಎಂಬುದು ತೆಲುಗು ಪ್ರೇಕ್ಷಕರ ಅಭಿಪ್ರಾಯವಾಗಿದೆ.