ಪೊಗರು ಡಮಾರ್..!

Date:

3 ವರ್ಷಗಳ ಕಾಲ ಚಿತ್ರೀಕರಣ ಮಾಡಿದ್ದೇವೆ ಚಿತ್ರ ಹಾಗಿರುತ್ತದೆ ಚಿತ್ರ ಹೀಗಿರುತ್ತದೆ.. ನೆಕ್ಸ್ಟ್ ಲೆವೆಲ್ ಆ್ಯಕ್ಷನ್ ದೃಶ್ಯಗಳಂತೂ ಚಿತ್ರದಲ್ಲಿ ತುಂಬಿ ತುಳುಕುತ್ತವೆ, ವಿದೇಶಗಳಿಂದ ವಿಲನ್ ಗಳನ್ನ ಕರೆದುಕೊಂಡು ಬಂದಿದ್ದೇವೆ ಅಷ್ಟು ಅದ್ದೂರಿಯಾಗಿ ಸಿನಿಮಾ ಮಾಡಿದ್ದೇವೆ ಎಂದು ಸಿನಿಮಾ ಬಿಡುಗಡೆಗೂ ಮುನ್ನ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು.. ಪೊಗರುವಿನಲ್ಲಿ ಖದರ್ ಸ್ವಲ್ಪ ಕಡಿಮೆ ಇತ್ತು ಅಂತ ಕಾಣುತ್ತೆ ಸಿನಿ ಪ್ರೇಕ್ಷಕ ಪೊಗರು ವನ್ನು ನಿರಾಕರಿಸಿ ಬಿಟ್ಟ.

 

 

ಚಿತ್ರ ಶತದಿನೋತ್ಸವ ಗ್ಯಾರಂಟಿ ಗುರು ಎಂದು ಬಿಡುಗಡೆಯ ದಿನ ಹೇಳಿದ್ದೆ ಹೇಳಿದ್ದು ಆದರೆ ಇಪ್ಪತ್ತೈದು ದಿನ ಮುಟ್ಟುವ ಮೊದಲೇ ಪೊಗರು ರಾಜ್ಯದಾದ್ಯಂತ ಟುಸ್ ಪಟಾಕಿ ಆಗಿಬಿಟ್ಟಿದೆ. ಹೌದು ಕರ್ನಾಟಕದ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಪೊಗರು ಚಿತ್ರ ಪ್ರದರ್ಶನಗೊಳ್ಳುತ್ತಿದೆ ಅದು ಸಹ ಕೆಲವೊಂದಷ್ಟು ಮಂದಿಯ ಜತೆಗೆ..!

 

 

ಇನ್ನು ಇಂದು ಭಾನುವಾರ ಆದರೂ ಸಹ ಪೊಗರು ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ವೀಕ್ಷಿಸುವ ಜನರ ಸಂಖ್ಯೆಯಲ್ಲಿ ಹೆಚ್ಚಳವೇನೂ ಕಂಡುಬಂದಿಲ್ಲ ವಾರದ ದಿನಗಳಲ್ಲಿ ಇರುವ ರೀತಿಯೇ ಇಂದು ಸಹ ಚಿತ್ರ ಸಾಧಾರಣ ಪ್ರದರ್ಶನ ಕಂಡಿತು. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಗಳಲ್ಲಿ ಪೊಗರು ವಾಷ್ ಔಟ್ ಆಗಿದ್ದು ನಾಳೆ ಅಂದರೆ ಸೋಮವಾರ ಬೆಂಗಳೂರಿನಲ್ಲಿ ಪೊಗರು ಚಿತ್ರ ಪಡೆದುಕೊಂಡಿರುವ ಮಲ್ಟಿಫ್ಲೆಕ್ಸ್ ಶೋಗಳ ಸಂಖ್ಯೆ ಕೇವಲ 2..!!

 

 

ಹೌದು ಇಡೀ ಬೆಂಗಳೂರಿನಲ್ಲಿ ಕೇವಲ ಎರಡೇ 2ಮಲ್ಟಿಪ್ಲೆಕ್ಸ್ ಶೋಗಳನ್ನ ಪೊಗರು ಚಿತ್ರಕ್ಕೆ ನಾಳೆ ನೀಡಲಾಗಿದ್ದು ಒರಾಯನ್ ಮಾಲ್ ಮತ್ತು ಕಾರ್ನಿವಾಲ್ ಮಾಲ್ ಗಳಲ್ಲಿ ಮಾತ್ರ ಪೊಗರು ಚಿತ್ರ ತಲಾ ಒಂದು ಶೋ ಅನ್ನು ಪಡೆದುಕೊಂಡಿದೆ.

 

Share post:

Subscribe

spot_imgspot_img

Popular

More like this
Related

ರಾಜು ತಾಳಿಕೋಟಿ ಇನ್ನಿಲ್ಲ

ಖ್ಯಾತ ರಂಗ ಕಲಾವಿದ, ನಟ, ರಂಗನಿರ್ದೇಶಕ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ....

RSS ಬ್ಯಾನ್ ಕೇಳಿರೋದು ನಿಮ್ಮ ಕಲ್ಪನೆ, ನಿಜವಲ್ಲ – ಖರ್ಗೆ ಸ್ಪಷ್ಟನೆ”

RSS ಬ್ಯಾನ್ ಕೇಳಿರೋದು ನಿಮ್ಮ ಕಲ್ಪನೆ, ನಿಜವಲ್ಲ – ಖರ್ಗೆ ಸ್ಪಷ್ಟನೆ" ಬೆಂಗಳೂರು:-...

ಚಿಕ್ಕಬಳ್ಳಾಪುರ: ಯುವತಿಯ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಬಂಧನ

ಚಿಕ್ಕಬಳ್ಳಾಪುರ: ಯುವತಿಯ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಬಂಧನ ಚಿಕ್ಕಬಳ್ಳಾಪುರ: ಉದ್ಯೋಗಕ್ಕಾಗಿ...

Gold Price Today: ಚಿನ್ನ, ಬೆಳ್ಳಿ ದರ ಏರಿಕೆ: ಮಾರುಕಟ್ಟೆಯಲ್ಲಿ ಹೀಗಿದೆ ಇಂದಿನ ರೇಟ್!

Gold Price Today: ಚಿನ್ನ, ಬೆಳ್ಳಿ ದರ ಏರಿಕೆ: ಮಾರುಕಟ್ಟೆಯಲ್ಲಿ ಹೀಗಿದೆ...