ಪೊಗರು ಪ್ರದರ್ಶನ ನಿಲ್ಲಿಸಿ : ಶೋಭಾ ಕರಂದ್ಲಾಜೆ

Date:

ಬೆಂಗಳೂರು: ಬ್ರಾಹ್ಮಣ ಸಮುದಾಯಕ್ಕೆ ನೋವುಂಟು ಮಾಡಿರುವುದರಿಂದಾಗಿ ಪೊಗರು ಸಿನಿಮಾ ಪ್ರದರ್ಶನವನ್ನು ನಿಲ್ಲಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಚಿತ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಖಾಸಗಿ ಚಾನಲ್ ಜೊತೆ ಮಾತನಾಡಿರುವ ಅವರು, ಕೆಲವರಿಗೆ ಯಾವುದೋ ಸಮಾಜಕ್ಕೆ ಅಪಮಾನ ಮಾಡುವ ಮೂಲಕ ತಮಗೆ ಪ್ರಚಾರ ಮತ್ತು ಹಣ ಸಂಪಾದನೆ ಮಾಡಬಹುದು ಎಂದು ಅಂದು ಕೊಂಡಿದ್ದಾರೆ. ಇದು ವಿಕೃತ ಮಾನಸಿಕತೆ. ಸಿನಿಮಾ ನಿರ್ಮಾಣ ಮಾಡುವಾಗಲೇ ಈ ರೀತಿಯ ದೃಶ್ಯಗಳಿಂದ ಹೆಚ್ಚು ಪ್ರಚಾರ ಪಡೆಯಬಹುದು ಎಂಬುದು ಅವರ ಮನಸ್ಸಿನಲ್ಲಿದೆ ಇದನ್ನು ಮೊದಲು ಹೊಗಲಾಡಿಸಬೇಕು. ಚಿತ್ರದ ಕೆಲವು ವಿವಾದಾತ್ಮಕ ದೃಶ್ಯಗಳನ್ನು ಮೊದಲು ಸೆನ್ಸಾರ್ ಮಾಡಿ ನಂತರ ಸಿನಿಮಾ ಪ್ರದರ್ಶನ ಮಾಡಲಿ ಎಂದು ಗುಡುಗಿದ್ದಾರೆ.

ಹಿಂದೂ ಧರ್ಮದಲ್ಲಿ ಯಾವುದೇ ಜಾತಿಯನ್ನು ಟೀಕಿಸಿದರೂ ನಾವು ಏನೂ ಮಾಡುವುದಿಲ್ಲ. ಹಿಂದೂಗಳು ಶಾಂತಿ ಪ್ರಿಯರು ಎಂಬ ಭಾವನೆ ಇದೆ ಇದು ನಮ್ಮ ದೌರ್ಬಲ್ಯವಲ್ಲ. ವಿಕೃತ ಮನಸ್ಸಿನವರು ಕೂಡಲೇ ಹಿಂದೂ ಧರ್ಮಕ್ಕೆ ಮಾಡಿರುವ ಅಪಮಾನದಿಂದ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ಕೊಟ್ಟರು.

ಧರ್ಮದ ವಿಚಾರ ಬಂದಾಗ ರಾಜಕೀಯ ಬಿಟ್ಟು ಮಾತನಾಡುತ್ತಿದ್ದೇನೆ. ಹಿಂದೂ ಧರ್ಮವನ್ನು ಹೊರತು ಪಡಿಸಿ ಬೇರೆ ಧರ್ಮದ ಕುರಿತು ಸಿನಿಮಾಗಳಲ್ಲಿ ಅಪಮಾನ ಮಾಡಿದ್ದರು ನಾನು ಪ್ರಶ್ನಿಸುತ್ತಿದ್ದೆ ಎಂದು ಹೇಳಿದರು.

 

Share post:

Subscribe

spot_imgspot_img

Popular

More like this
Related

ಇಂದು ರಾಜ್ಯಕ್ಕೆ ರಾಷ್ಟ್ರಪತಿ: ಮಳವಳ್ಳಿ ಕಾರ್ಯಕ್ರಮದಲ್ಲಿ ಭಾಗಿ

ಇಂದು ರಾಜ್ಯಕ್ಕೆ ರಾಷ್ಟ್ರಪತಿ: ಮಳವಳ್ಳಿ ಕಾರ್ಯಕ್ರಮದಲ್ಲಿ ಭಾಗಿ ಮಂಡ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು...

ಅಪ್ಪಿತಪ್ಪಿಯೂ ಚಳಿಗಾಲದಲ್ಲಿ ಗರ್ಭಿಣಿಯರು ಈ ತಪ್ಪುಗಳನ್ನು ಮಾಡಬೇಡಿ!

ಅಪ್ಪಿತಪ್ಪಿಯೂ ಚಳಿಗಾಲದಲ್ಲಿ ಗರ್ಭಿಣಿಯರು ಈ ತಪ್ಪುಗಳನ್ನು ಮಾಡಬೇಡಿ! ಇತ್ತೀಚಿನ ದಿನಗಳಲ್ಲಿ ಚಳಿ ದಿನದಿಂದ...

ಇಂದು ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ: ಸಂಜೆ ಪತ್ನಿ ಸಮಾಧಿ ಬಳಿ ಅಂತ್ಯಕ್ರಿಯೆ 

ಇಂದು ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನ: ಸಂಜೆ ಪತ್ನಿ ಸಮಾಧಿ ಬಳಿ...

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಕಾಂಗ್ರೆಸ್​​​​​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ...