ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯಾವುದೇ ವಿವಾದಗಳನ್ನೂ ಸಹ ಮಾಡಿಕೊಳ್ಳದ ನಟ. ಯಾವುದೇ ಕಪ್ಪುಚುಕ್ಕೆ ಇಲ್ಲದೇ ಸಿನಿಮಾ ಆಯ್ತು ತಾವಾಯ್ತು ಅಂತ ಇದ್ದ ಅಪ್ಪು ಅವರು ಇದ್ದಕ್ಕಿದ್ದಂತೆ ಪೊಲೀಸರನ್ನು ಕ್ಷಮೆಯಾಚಿಸಿದ್ದಾರೆ. ಹೌದು ಪುನೀತ್ ಅವರು ಪೊಲೀಸರ ಬಳಿ ಕ್ಷಮೆಯಾಚಿಸಿದ್ದು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ವೇದಿಕೆಯಲ್ಲಿ.
ಈ ಬಾರಿಯ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಇನ್ನೇನು ಮುಗಿಯುವ ಹಂತ ತಲುಪಿದೆ. ಹೀಗಾಗಿ ಕಾರ್ಯಕ್ರಮದ ಕೊನೆಯ ಹಂತದಲ್ಲಿ ಕಳೆದ ವಾರ ಪೊಲೀಸ್ ಅಧಿಕಾರಗಳನ್ನು ಹಾಟ್ ಸೀಟ್ ಮೇಲೆ ಕೂರಿಸಲಾಗಿತ್ತು. ಇದೇ ವೇಳೆ ಪುನೀತ್ ಅವರು ಪೊಲೀಸರ ಬಳಿ ಕ್ಷಮೆ ಕೇಳಿದ್ದರೆ. ಹೌದು ಹಾಟ್ ಸೀಟ್ ನಲ್ಲಿದ್ದ ಪೊಲೀಸರ ಜೊತೆ ಮಾತನಾಡುತ್ತಿದ್ದ ಅಪ್ಪು ಇದ್ದಕ್ಕಿದ್ದಂತೆ ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು. 20-25 ವರ್ಷಗಳ ಹಿಂದೆ ನಾನು ಕಾರನ್ನು ತುಂಬಾ ವೇಗವಾಗಿ ಓಡಿಸುತ್ತಿದ್ದೆ , ಇದರಿಂದ ಗಲಾಟೆಗಳೂ ಸಹ ಆಗಿವೆ , ಆ ವಯಸ್ಸಿನಲ್ಲಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸುತ್ತೇನೆ ದಯವಿಟ್ಟು ಕ್ಷಮಿಸಿ ಎಂದು ಕೇಳಿದರು.