ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುತ್ತಿದ್ದರೆ ಸಾಕು ಗಾಡಿ ತಡೆಯುವ ಪೊಲೀಸರು ದಾಡಿ ಸೈಡಿಗೆ ಹಾಕಪ್ಪಾ ಹೆಲ್ಮೆಟ್ ಇಲ್ಲದಿದ್ದಕ್ಕೆ ಫೈನ್ ಕಟ್ಟು ಎಂದು ಸಾವಿರಗಟ್ಟಲೆ ವಸೂಲಿ ಮಾಡುತ್ತಾರೆ. ಆದರೆ ಇಲ್ಲೊಬ್ಬ ಇದ್ದಾನೆ ಈತನ ವಿಚಾರದಲ್ಲಿ ಮಾತ್ರ ಪೊಲೀಸರು ಹೆಲ್ಮೆಟ್ ಇಲ್ಲದೇ ಇದ್ದರೂ ಸಹ ಆತ ಗಾಡಿ ಓಡಿಸುತ್ತಿದ್ದರೆ ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತಾರೆ. ಹೌದು ಈ ವ್ಯಕ್ತಿ ಪೊಲೀಸರ ಮಂದಿಗೆ ಹೆಲ್ಮೆಟ್ ಇಲ್ಲದೆ ಗಾಡಿಯನ್ನು ರಾಜಾರೋಷವಾಗಿಯೇ ಓಡಿಸಿಕೊಂಡು ಹೋಗುತ್ತಾರೆ ಆದರೂ ಪೊಲೀಸರು ಫೈನ್ ಹಾಕದಿರಲು ಕಾರಣ ಆತನ ತಲೆಯ ಗಾತ್ರ.
ಅಹ್ಮದಾಬಾದ್ ನ ಉದಯಪುರ ಜಿಲ್ಲೆಯ ಬೊಡೆಲಿ ನಗರದ ಜಾಕೀರ್ ಮೆಮನ್ ಎಂಬಾತನ ತಲೆಯ ಗಾತ್ರ ತೀರಾ ದೊಡ್ಡದಾಗಿದ್ದು ಯಾವ ಹೆಲ್ಮೆಟ್ ಹಾಕಿದ್ದರೂ ಸಹ ಸರಿಹೋಗುತ್ತಿಲ್ಲ ಹೀಗಾದ ಕಾರಣ ಆತ ಹೆಲ್ಮೆಟ್ ಹಾಕದೇ ಗಾಡಿ ಓಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಕಾರಣದಿಂದಾಗಿ ಪೊಲೀಸರು ಈತನಿಗೆ ಫೈನ್ ಹಾಕಲು ಆಗದೆ ತಮ್ಮ ಪಾಡಿಗೆ ತಾವು ಇದ್ದುಬಿಟ್ಟಿದ್ದಾರೆ.