ಪೊಲೀಸ್ ಇಲಾಖೆಗೆ ಸರ್ಕಾರದಿಂದ ಭಾರಿ ಬದಲಾವಣೆ: ಡಿಐಜಿಪಿ ಹುದ್ದೆಗೆ 23 ಐಪಿಎಸ್ ಬಡ್ತಿ, 20 ಮಂದಿಗೆ ವರ್ಗಾವಣೆ

Date:

ಪೊಲೀಸ್ ಇಲಾಖೆಗೆ ಸರ್ಕಾರದಿಂದ ಭಾರಿ ಬದಲಾವಣೆ: ಡಿಐಜಿಪಿ ಹುದ್ದೆಗೆ 23 ಐಪಿಎಸ್ ಬಡ್ತಿ, 20 ಮಂದಿಗೆ ವರ್ಗಾವಣೆ

ಬೆಂಗಳೂರು:  ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಮಟ್ಟದ ಆಡಳಿತಾತ್ಮಕ ಬದಲಾವಣೆಗಳನ್ನು ಜಾರಿಗೆ ತಂದಿದೆ. 23 ಮಂದಿ ಐಪಿಎಸ್ ಅಧಿಕಾರಿಗಳನ್ನು ಡಿಐಜಿಪಿ ಹುದ್ದೆಗೆ ಬಡ್ತಿ ನೀಡಿ, 20 ಮಂದಿಯನ್ನು ವಿವಿಧ ಜಿಲ್ಲೆಗಳು ಹಾಗೂ ವಿಭಾಗಗಳಿಗೆ ವರ್ಗಾವಣೆಗೊಳಿಸಲಾಗಿದೆ.

ಗುಪ್ತಚರ, ಸೈಬರ್ ಕಮಾಂಡ್, ಕಾರಾಗೃಹ, ರೈಲ್ವೆ, ಸಿಐಡಿ ಸೇರಿದಂತೆ ಪ್ರಮುಖ ವಿಭಾಗಗಳಿಗೆ ಅನುಭವಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಬೆಂಗಳೂರು ನಗರ ಮತ್ತು ಜಿಲ್ಲಾ ಮಟ್ಟದಲ್ಲೂ ಹೊಸ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಕ್ರಮದಿಂದ ಪೊಲೀಸ್ ವ್ಯವಸ್ಥೆಯ ಕಾರ್ಯಕ್ಷಮತೆ ಮತ್ತು ಆಡಳಿತ ಬಲವರ್ಧನೆ ಆಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಐಜಿಪಿಯಾಗಿ ಮುಂಬಡ್ತಿ ಪಡೆದವರು:

ಡಾ. ಎಂ.ಬಿ. ಬೋರಲಿಂಗಯ್ಯ (ದಕ್ಷಿಣ ವಲಯ), ರಾಮ್ ನಿವಾಸ್ ಸೆಪಟ್ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ), ಅನುಪಮಾ ಅಗರ್‌ವಾಲ್ (ಸಿಆರ್‌ಪಿಎಫ್), ಅಜಯ್ ಹಿಲೋರಿ (ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ, ಬೆಂಗಳೂರು), ಡಾ. ರೋಹಿಣಿ ಕಟೋಚ್ ಸೆಪಟ್ (ಹೈದರಾಬಾದ್, ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ).

ಡಿಐಜಿಯಾಗಿ ಮುಂಬಡ್ತಿ ಪಡೆದವರು:

ಡಾ. ಭೀಮಾಶಂಕರ್ ಎಸ್. ಗುಳೇದ್ (ಸಿಐಡಿ – ಆರ್ಥಿಕ ಅಪರಾಧ ವಿಭಾಗ), ನಿಕಂ ಪ್ರಕಾಶ್ ಅಮ್ರಿತ್ (ಕೇಂದ್ರ ಸೇವೆ), ಜಿ. ರಾಧಿಕಾ (ರಾಷ್ಟ್ರೀಯ ಪೊಲೀಸ್ ತರಬೇತಿ ಶಾಲೆ, ಹೈದರಾಬಾದ್), ರಾಹುಲ್ ಕುಮಾರ್ ಶಹಪುರ್‌ವಾದ್ (ಎನ್‌ಐಎ, ದೆಹಲಿ), ಧರ್ಮೇಂದ್ರ ಕುಮಾರ್ ಮೀನಾ (ಕೇಂದ್ರ ಸೇವೆ), ಇಲಾಕಿಯಾ ಕರುಣಾಕರನ್ (ನಿಸ್ತಂತು ವಿಭಾಗ), ಡಾ. ಸಿ.ಬಿ. ವೇದಮೂರ್ತಿ (ಗುಪ್ತಚರ ವಿಭಾಗ), ಕೆ.ಎಂ. ಶಾಂತರಾಜು (ಐಎಸ್‌ಡಿ, ಬೆಂಗಳೂರು), ಹನುಮಂತರಾಯ (ಮಾನವ ಹಕ್ಕುಗಳ ಆಯೋಗ), ಡಿ. ದೇವರಾಜ್ (ಪೊಲೀಸ್ ತರಬೇತಿ), ಡಾ. ಡಿ.ಆರ್. ಸಿರಿಗೌರಿ (ಕರ್ನಾಟಕ ಲೋಕಾಯುಕ್ತ), ಡಾ. ಕೆ. ಧರಣಿದೇವಿ (ಗುಪ್ತಚರ ವಿಭಾಗ), ಎಸ್. ಸವಿತಾ (ಹೋಮ್ ಗಾರ್ಡ್), ಸಿ.ಕೆ. ಬಾಬಾ (ಕೆಎಸ್‌ಆರ್‌ಪಿ), ಅಬ್ದುಲ್ ಅಹದ್ (ಬಿಎಂಟಿಸಿ ವಿಚಕ್ಷಣ ದಳ), ಎಸ್. ಗಿರೀಶ್ (ಮಾದಕ ವಸ್ತು ನಿಗ್ರಹ ಪಡೆ), ಎಂ. ಪುಟ್ಟಮಾದಯ್ಯ (ಪೊಲೀಸ್ ತರಬೇತಿ ಶಾಲೆ, ಕಲಬುರಗಿ), ಟಿ. ಶ್ರೀಧರ್ (ಪೊಲೀಸ್ ಪ್ರಧಾನ ಕಚೇರಿ), ಎಂ. ಅಶ್ವಿನಿ (ಯುಎನ್ಎಂಐಎಸ್‌ಎಸ್), ಎ.ಎನ್. ಪ್ರಕಾಶ್ ಗೌಡ (ವಿಶೇಷ ಕಾರ್ಯಪಡೆ).

ಇತರೆ ಮುಂಬಡ್ತಿಗಳು:

ಡಾ. ಅನೂಪ್ ಶೆಟ್ಟಿ, ಹರೀಶ್ ಪಾಂಡೆ, ಸುಮನಾ ಡಿ. ಪನ್ನೇಕರ್, ದಿವ್ಯಾ ಸಾರಾ ಥಾಮಸ್, ಡಿಕಾ ಕಿಶೋರ್ ಬಾಬು, ಸಿ.ಬಿ. ರಿಷ್ಯಂತ್, ನಿಶಾ ಜೇಮ್ಸ್, ಮಧುರ ವೀಣಾ, ಎಂ.ವಿ. ಚಂದ್ರಕಾಂತ್ (ಎಸ್ಪಿ, ಬೆಂಗಳೂರು ಗ್ರಾಮಾಂತರ).

ಎಸ್ಪಿಗಳ ವರ್ಗಾವಣೆ:

ಮೊಹಮ್ಮದ್ ಸುಜೀತಾ, ಎಂ. ಮುತ್ತುರಾಜ್, ಸಾರಾ ಫಾತೀಮಾ, ಅರುಣಾಂಗಶು ಗಿರಿ, ಮಿಥುನ್ ಕುಮಾರ್, ಎನ್. ಯತೀಶ್, ಸೈದುಲ್ಲಾ ಅಡಾವತ್, ಮಲ್ಲಿಕಾರ್ಜುನ್ ಬಾಲದಂಡಿ, ಪವನ್ ನಿಜ್ಜೂರು, ಡಾ. ವಿ.ಜೆ. ಶೋಭಾರಾಣಿ, ಡಾ. ಬಿ.ಟಿ. ಕವಿತಾ, ನಿಖಿಲ್, ಹರಿರಾಮ್ ಶಂಕರ್, ಎ. ಶ್ರೀನಿವಾಸುಲು, ರಂಜಿತ್ ಕುಮಾರ್ ಬಾಂದ್ರು, ಕೆ. ರಾಮರಾಜನ್, ಕೆ.ವಿ. ಅಶೋಕ್, ಕನ್ನಿಕಾ ಶಿಕಾರಿವಲ್, ಶುಭನ್ವಿತಾ, ವಿಕ್ರಂ ಆಮ್ಟೆ, ವಿ.ಜೆ. ಸಜೀತ್, ಜಿತೇಂದ್ರ ಕುಮಾರ್ ಡಯಾಮಾ, ಡಾ. ಹರ್ಷ ಪ್ರಿಯವದ, ಶಾಲೋ, ಬಿಂದುಮಣಿ, ಸ್ಯಾಮ್ ವರ್ಗೀಸ್.

Share post:

Subscribe

spot_imgspot_img

Popular

More like this
Related

ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸಿಗುವ ಅದ್ಭುತ ಆರೋಗ್ಯ ಮತ್ತು ಮಾನಸಿಕ ಪ್ರಯೋಜನಗಳು

ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸಿಗುವ ಅದ್ಭುತ ಆರೋಗ್ಯ ಮತ್ತು ಮಾನಸಿಕ ಪ್ರಯೋಜನಗಳು ರಾತ್ರಿ...

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಬೆಂಗಳೂರು: ಸಿದ್ದರಾಮಯ್ಯರ...

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ ತಿರುವನಂತಪುರ: ವೈವಿಧ್ಯತೆಯ...

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ ವೈರಲ್

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ...