ಪೋಷಕರಲ್ಲಿ ಆತಂಕ ಹೆಚ್ಚಿಸಿದ ಟ್ಯಾಟೂ ಕ್ರೇಜ್..!

Date:

ಟ್ಯಾಟೂ ಹಾಕಿಸಿಕೊಳ್ಳೋದು ಇತ್ತೀಚೆಗೆ ಫ್ಯಾಶನ್ ಆಗುತ್ತಿದೆ. ಯುವಕ-ಯುವತಿಯರಲ್ಲಿ ಈ ಟ್ಯಾಟೂ ಬಗ್ಗೆ ಸಾಕಷ್ಟು ಕ್ರೇಜ್ ಇದೆ. ಮಿತಿಮೀರುತ್ತಿರುವ ಈ ಕ್ರೇಜ್ ಮತ್ತು ಫ್ಯಾಶನ್ ಪೋಷಕರನ್ನು ಚಿಂತೆಗೀಡುಮಾಡಿದೆ.

ಟ್ಯಾಟೂನಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಮಾಜ ಅವರನ್ನು ಸ್ವೀಕರಿಸುವ ರೀತಿ ಹಾಗೂ ಅವರ ವೃತ್ತಿ ಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಟ್ಯಾಟೂ ಬಗ್ಗೆ ಅಮೆರಿಕದಲ್ಲಿ ನಡೆದ ಸಮೀಕ್ಷೆ ಪ್ರಕಾರ, ಶೇ,78ರಷ್ಟು ಪೋಷಕರು ತಮ್ಮ ಹದಿಹರೆಯದ ಮಕ್ಕಳು ಟ್ಯಾಟೂ ಹಾಕಿಸಿಕೊಳ್ಳಬಾರದೆಂದು ಹೇಳಿದ್ದಾರೆ. ಇನ್ನು 10ರಲ್ಲಿ ಒಬ್ಬ ಪೋಷಕರು ಮಾತ್ರ ವಿಶೇಷ ಸಂದರ್ಭದಲ್ಲಿ ಅಥವಾ ಟ್ಯಾಟೂ ಕಾಣಿಸಿಕೊಳ್ಳದ ಹಾಗೆ ಹಾಕಿಸಿಕೊಳ್ಳಲು ತಮ್ಮ ಅಭ್ಯಂತರ ಇಲ್ಲ ಎಂದಿದ್ದಾರೆ.

ಮಿಚಿಗನ್ ವಿಶ್ವವಿದ್ಯಾನಿಲಯದ ಸಿ.ಎಸ್. ಮೊಟ್ ಚಿಲ್ಡ್ರನ್ಸ್ ಹಾಸ್ಪಿಟಲ್ ನಡೆಸಿದ ನ್ಯಾಷನಲ್ ಪೊಲ್ ಆನ್ ಚಿಲ್ಡ್ರನ್ಸ್ ಹೆಲ್ತ್ ಪ್ರಕಾರ, ಹಲವು ಪೋಷಕರು ತಮ್ಮ ಹದಿಹರೆಯದ ಮಕ್ಕಳು ಟ್ಯಾಟೂ ಹಾಕಿಸಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
13 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಸಮೀಕ್ಷೆಯ ನಡೆಸಲಾಗಿದ್ದು, ಇದರಲ್ಲಿ ಒಟ್ಟು 1,018 ಪೋಷಕರು ಭಾಗಿಯಾಗಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ಸುಮಾರು ಅರ್ಧದಷ್ಟು ಪೋಷಕರು, ಟ್ಯಾಟೂಗೆ ಬಳಸುವ ಸೂಚಿಯಿಂದ ಇನ್ ಫೆಕ್ಷನ್, ಹೆಪಟೈಟಿಸ್ ಅಥವಾ ಎಚ್ಐವಿಗಳಂತಹ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಟ್ಯಾಟೂಗಳು ಸ್ವ-ಅಭಿವ್ಯಕ್ತಿಯ ರೂಪವೆಂದು ಅನೇಕ ಪೋಷಕರು ಒಪ್ಪುತ್ತಾರೆ. ಆದರೆ ಹದಿಹರೆಯದವರು ಸಂಭವನೀಯ ಆರೋಗ್ಯದ ಅಪಾಯಗಳನ್ನು ಪರಿಗಣಿಸುವುದಿಲ್ಲ ಎಂದು ಸಮೀಕ್ಷೆಯ ಸಹ-ನಿರ್ದೇಶಕ ಗ್ಯಾರಿ ಫ್ರೀಡ್ ಅವರು ಹೇಳುತ್ತಾರೆ.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....