ಇಡೀ ದೇಶ ಪೌರತ್ವದ ಜ್ವಾಲೆಯಲ್ಲಿ ಕೊತ ಕೊತ ಅಂತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಡೀ ರಾಷ್ಟç ಹೊತ್ತಿ ಉರಿಯುತ್ತಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾವು – ನೋವುಗಳು ಸಂಭವಿಸುತ್ತಿವೆ. ನಮ್ಮ ಮಂಗಳೂರಲ್ಲಿ ಇಬ್ಬರು, ಉತ್ತರ ಪ್ರದೇಶದಲ್ಲಿ ಆರು ಮಂದಿ ಗೋಲಿಬಾರ್ನಲ್ಲಿ ಮೃತಪಟ್ಟಿದ್ದಾರೆ. ದೇಶದಲ್ಲಿ ಶಾಂತಿ ನೆಲೆಸುವಂತೆ ಅನೇಕರು ಮನವಿ ಮಾಡುತ್ತಿದ್ದಾರೆ. ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ನಡುವೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಕಾಯ್ದೆ ಜಾರಿಗೆ ಹಾಗೂ ಶಾಂತಿಗಾಗಿ ಚಂಡಿಕಾಯಾಗದ ಮಾಡಿಸಿದ್ದಾರೆ.
ಸಂಗಣ್ಣ ಅವರು ಪ್ರಸಿದ್ಧ ಹುಲಗಿ ದೇವಸ್ಥಾನದಲ್ಲಿ ಶುಕ್ರವಾರ ಶೃಂಗೇರಿಯ ಪ್ರವೀಣ್ ತಂತ್ರಿ ಹಾಗೂ ಉಡುಪಿಯ ಕೃಷ್ಣ ಮೂರ್ತಿ ಗಣಪಾಟಿ ಅವರ ನೇತೃತ್ವದಲ್ಲಿ ಚಂಡಿಕಾಯಾಗ ನಡೆಸಿದ್ದಾರೆ. ಸಂಗಣ್ಣ ಕುಟುಂಬ ಸಮೇತರಾಗಿ ಚಂಡಿಕಾಯಾಗ ಮಾಡಿಸಿ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮತ್ತು ಸದ್ಯ ಹಿಂಸಾಚಾರಕ್ಕೆ ತಿರುಗಿರುವ ಪ್ರತಿಭಟನೆ ಕೊನೆಗೊಂಡು ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗೆ ೮ ಗಂಟೆಯಿಂದ ಮಧ್ಯಾಹ್ನದವರೆಗೆ ಪೂಜೆ ನೆರವೇರಿಸಿದರು.
ಪೌರತ್ವ ಕಾಯ್ದೆ ಜಾರಿಗಾಗಿ ಕೊಪ್ಪಳ ಸಂಸದರು ಏನ್ ಮಾಡ್ತಿದ್ದಾರೆ ಗೊತ್ತಾ?
Date: