ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ಇಂದು ತುಮಕೂರಿನಲ್ಲಿ ಮೋದಿಯವರು ಮಾತನಾಡುತ್ತಾ ಧರ್ಮಾಧರಿತವಾಗಿ ಪಾಕಿಸ್ತಾನ ವಿಭಜನೆಗೊಂಡಿದೆ. ಅಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳೂ, ಜೈನರು, ಸಿಖ್ಖರು ಧರ್ಮಾಚರಣೆ ಕಾರಣಕ್ಕಾಗಿ ಕಿರುಕುಳ ಅನುಭವಿಸುತ್ತಿದ್ದಾರೆ, ತಮ್ಮ ಮಕ್ಕಳ ಮೇಲಾಗುವ ಅತ್ಯಾಚಾರ ತಪ್ಪಿಸಲು ಭಾರತಕ್ಕೆ ಬರುತ್ತಾರೆ.
ಅವರಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ. ಇದಕ್ಕಾಗಿ ಕಾನೂನು ತಂದರೆ ಕಾಂಗ್ರೆಸಿಗರು ಮತ್ತು ಅದರ ಮಿತ್ರ ಪಕ್ಷದವರು ವಿರೋಧ ಮಾಡುತ್ತಾರೆ. ಸಂಸತ್‍ನ್ನು ಗೌರವಿಸದೆ ಪ್ರತಿಭಟನೆ ನಡೆಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಯೋತ್ಪಾದನೆ ವಿರುದ್ಧ ಭಾರತ ಸಂಕಲ್ಪಿತ ಹೋರಾಟ ಕೈಗೆತ್ತಿಕೊಂಡಿದೆ. ಸಂವಿಧಾನ 370ರ ತಿದ್ದುಪಡಿ ಮೂಲಕ ಜಮ್ಮು ಕಾಶ್ಮೀರದಲ್ಲಿನ ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಪ್ರಧಾನ ಮಂತ್ರಿ ಮೋದಿ ಅವರು ತುಮಕೂರಿನಲ್ಲಿ ಭಾಷಣ ಮಾಡುವಾಗ ಹೇಳಿದರು.