ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ನಾಳೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ಇನ್ನು ಪೈವ್ವಾನ್ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು , ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಹ ಬಿಡುಗಡೆಯಾಗುತ್ತಿದೆ. ಇನ್ನು ನಿನ್ನೆಯಷ್ಟೇ ಪೈಲ್ವಾನ್ ಚಿತ್ರದ ಪ್ರಿ ರಿಲೀಸ್ ಇವೆಂಟ್ ಅನ್ನು ಬೆಂಗಳೂರಿನಲ್ಲಿ ನಡೆಸಲಾಯಿತು. ಈ ವೇಳೆ ಕಿಚ್ಚ ಸುದೀಪ್ ಅವರು ಮಾಧ್ಯಮ ಮಿತ್ರರೊಡನೆ ಸಂವಾದವನ್ನು ನಡೆಸಿದರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಯೊಬ್ಬರು ಕಿಚ್ಚ ಸುದೀಪ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದರು. ಇತ್ತೀಚೆಗೆ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ ಪ್ಯಾನ್ ಇಂಡಿಯಾ ಚಿತ್ರ ನಿರ್ಮಿಸುವವರಿಗೆ ಮತ್ತು ನಿರ್ದೇಶಿಸುವವರಿಗೆ ನೀವು ಯಾವ ರೀತಿಯ ಸಲಹೆ ನೀಡಲು ಬಯಸುತ್ತೀರಾ ಎಂದು ಕೇಳಿದರು. ಇನ್ನು ಈ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್ ಅವರು ಪ್ಯಾನ್ ಇಂಡಿಯಾ ಎಂಬುದು ಚಿಕ್ಕ ವಿಷಯವಲ್ಲ ಅದು ಅತಿ ದೊಡ್ಡ ವಿಷಯ.. ದೊಡ್ಡ ಮೊತ್ತ ಇರಬೇಕು ಅಷ್ಟೇ ಅಲ್ಲದೆ ಬೇರೆ ಭಾಷೆಗಳಲ್ಲಿ ನಮ್ಮ ಹೆಸರಿನ ಗುರುತು ಇರಬೇಕು ಎಂದು ಹೇಳಿದರು.
ಹೌದು ಬೇರೆ ಭಾಷೆಗಳಲ್ಲಿ ನಿಮ್ಮ ಮುಖದ ಪರಿಚಯ ಇಲ್ಲದಿದ್ದರೆ ಅವರು ಹೇಗೆ ನಿಮ್ಮ ಸಿನಿಮಾವನ್ನು ನೋಡುತ್ತಾರೆ ಆದ್ದರಿಂದ ನಿಮ್ಮ ಹೆಸರು ಬೇರೆ ಚಿತ್ರರಂಗಗಳಲ್ಲಿ ಸ್ವಲ್ಪವಾದರೂ ಇದ್ದರೆ ಪ್ಯಾನ್ ಇಂಡಿಯಾ ಚಿತ್ರ ಬಿಡುಗಡೆ ಮಾಡುವ ಚಿಂತನೆ ಮಾಡಬಹುದು ಎಂದು ಅವರು ಹೇಳಿದರು .