ಪ್ರಚೋದನಕಾರಿ ಪೋಸ್ಟ್ ಹಾಕಿದ ಮಹಾಶಯರಿಗೆ `ಲೆಟರ್ಸ್ ರೊಗೇಟರಿ’ ಅಸ್ತ್ರ! ವಿದೇಶದಲ್ಲಿರೋ ಆರೋಪಿಗಳ ಬಂಧನ ಹೇಗೆ?

Date:

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನಡೆದ ಗೋಲಿಬಾರ್, ಹಿಂಸಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಯ ಸಂದೇಶ ರವಾನಿಸಿದ ಆರೋಪದ ಮೇಲೆ ಮಂಗಳೂರು ಸೈಬರ್ ಸೆಲ್ ಪೊಲೀಸರು ಹಲವು ಮಂದಿಗೆ ನೊಟೀಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಇನ್ನು ಕೆಲವರನ್ನು ಈಗಾಗಲೇ ಬಂಧಿಸಲಾಗಿದೆ.

ಕೋಮುಭಾವನೆಗಳನ್ನು ಪ್ರಚೋದಿಸುವ, ಪೊಲೀಸರಿಗೆ ಎಚ್ಚರಿಕೆ, ಬೆದರಿಕೆ ಹಾಕುವ ಕೃತ್ಯಗಳು ಗೋಲಿಬಾರ್ ಬಳಿಕ ನಡೆದಿತ್ತು. ಈ ಬಗ್ಗೆ ಗಂಭೀರ ಕ್ರಮ ಕೈಗೊಂಡಿರುವ ಪೊಲೀಸರು ಈಗಾಗಲೇ ೨೩ ಮಂದಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಮುಹಮ್ಮದ್ ಆಸಿಫ್ ಖಾನ್, ಅನೀಸ್ ಕುಂಬ್ರ, ಇರ್ಫಾನ್ ಬೆಳ್ತಂಗಡಿ, ಅನೀಸ್ ಬಿ ಕೆ, ಅನೀಸ್ ಅಹ್ಮದ್, ನಿಝಾಮ್ ಪಿ ಎ , ಇಸ್ಮಾಯಿಲ್ ಎ ಕೆ, ಶಬ್ಬೀರ್ ಅಹ್ಮದ್, ನಿಸಾರ್ ಅಹ್ಮದ್, ಅಲ್ತಾಫ್, ಅನ್ಸಾರ್ ಮಂಗಳೂರು, ನಿಝಾಮ್ ಫರಂಗಿಪೇಟೆ, ಸಾಹಿಲ್ ಬೆದ್ರ, ದಾವಲ್‌ಸಾಬ್ ಚಿತ್ರದುರ್ಗ, ಸಿದ್ದೀಕ್ ಉಳ್ಳಾಲ ಕೋಡಿ, ಮುಹಮ್ಮದ್ ಇರ್ಫಾನ್ ಬಂಟ್ವಾಳ, ಶರಫ್ ಮುಹಮ್ಮದ್, `ಇದು ನಮ್ಮ ಧ್ವನಿ’ ಫೇಸ್ಬುಕ್ ಗ್ರೂಪ್ ಅಡ್ಮಿನ್, `ಮುಸ್ಲಿಂ ಯುವ ಸೇನೆ’ ಫೇಸ್ಬುಕ್ ಗ್ರೂಪ್ ಅಡ್ಮಿನ್, ಎಸ್‌ಡಿಪಿಐ ಡಿ ಕೆ ಫೇಸ್ಬುಕ್ ಗ್ರೂಪ್ ಅಡ್ಮಿನ್, ಎಸ್ ಡಿ ಪಿ ಐ ಮಂಗಳೂರು ಫೇಸ್‌ಬುಕ್ ಗ್ರೂಪ್ ಅಡ್ಮಿನ್ ಸಹಿತ 23 ಮಂದಿ ವಿರುದ್ಧ ಸಮನ್ಸ್ ಕಳುಹಿಸಲಾಗಿದೆ. ಇದರಲ್ಲಿ ಹೊರ ಜಿಲ್ಲೆಯವರು ಕೂಡ ಇದ್ದಾರೆ.

ವಿದೇಶದಲ್ಲಿದ್ದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡಿದವರ ವಿರುದ್ಧ `ಲೆಟರ್ಸ್ ರೊಗೇಟರಿ’ ಅಸ್ತç ಬಳಸಲು ಕೂಡ ಪೊಲೀಸ್ ಇಲಾಖೆ ನಿರ್ಧರಿಸಿದೆ. ಪ್ರಚೋದನಾಕಾರಿ ಸಂದೇಶ ಹಾಕಿದ್ದನ್ನು ಆಧಾರವಾಗಿಟ್ಟುಕೊಂಡು ಜಿಲ್ಲಾ ನ್ಯಾಯಾಲಯದಿಂದ ಆಯಾ ರಾಷ್ಟçಗಳಲ್ಲಿರುವ ರಾಯಭಾರ ಕಚೇರಿಗೆ `ಲೆಟರ್ಸ್ ರೊಗೇಟರಿ’ ಕಳುಹಿಸಲಾಗುತ್ತದೆ. ಆ ವ್ಯಕ್ತಿಯ ಪಾಸ್ಪೋರ್ಟನ್ನು ರಾಯಭಾರ ಕಚೇರಿಯು ಮುಟ್ಟುಗೋಲು ಹಾಕಲಿದೆ. ಬಳಿಕ ಭಾರತೀಯ ಕೋರ್ಟಿನ `ಲೆಟರ್ಸ್ ರೊಗೇಟರಿ’ಯನ್ನು ವಿದೇಶಿ ಕೋರ್ಟಿಗೂ ಸಲ್ಲಿಸಲಾಗುತ್ತದೆ. ಇದರಿಂದ ಆರೋಪಿ ಬಂಧನಕ್ಕೊಳಗಾಗಲಿದ್ದಾನೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...