ಪ್ರಜಾಕೀಯದ ಮೂಲಮಂತ್ರ ಬಿಚ್ಚಿಟ್ಟ ಉಪೇಂದ್ರ

Date:

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಜಾಕಾರಣಿ ಉಪೇಂದ್ರ ಇಂದು ಫೇಸ್‌ಬುಕ್ ಲೈವ್‌ಗೆ ಬಂದಿದ್ದರು. ತಮ್ಮ ಉತ್ತಮ ಪ್ರಜಾಕೀಯ ಪಾರ್ಟಿ ಬಗ್ಗೆ ಉಪೇಂದ್ರ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದರು. ”ಎಲ್ಲರೂ ಕೈ ಜೋಡಿಸಿದರೆ, ಎಲ್ಲರೂ ಅವರವರ ಮೇಲೆ ನಂಬಿಕೆ ಇಟ್ಟರೆ, ವ್ಯವಸ್ಥೆಯನ್ನು ಬದಲಾಯಿಸಬಹುದು. ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬಹುದು” ಎಂದು ಫೇಸ್‌ಬುಕ್‌ ಲೈವ್‌ನಲ್ಲಿ ಉಪೇಂದ್ರ ಹೇಳಿದ್ದಾರೆ.
”ಲಗಾಮು’ ಚಿತ್ರದ ಶೂಟಿಂಗ್ ಶುರುವಾಗಿದೆ. ಈ ಚಿತ್ರಕ್ಕೆ ಕೆ.ಮಾದೇಶ್ ನಿರ್ದೇಶನ ಮಾಡುತ್ತಿದ್ದಾರೆ. 20ನೇ ತಾರೀಖಿನ ಬಳಿಕ ‘ಕಬ್ಜ’ ಶೂಟಿಂಗ್ ಶುರುವಾಗಲಿದೆ. ನಿರ್ದೇಶಕ ಆರ್.ಚಂದ್ರು ಸೆಟ್‌ಗಳನ್ನು ರೆಡಿ ಮಾಡುತ್ತಿದ್ದಾರೆ. ಆದಷ್ಟು ಬೇಗ ನಾನು ಡೈರೆಕ್ಷನ್ ಮಾಡ್ತೀನಿ. ಲಾಕ್‌ಡೌನ್ ವೇಳೆ ಕಥೆಗಳು ರೆಡಿಯಾಗಿವೆ. ಸದ್ಯದಲ್ಲಿ ಅನೌನ್ಸ್ ಮಾಡ್ತೀವಿ” ಎಂದಿದ್ದಾರೆ ಉಪೇಂದ್ರ.


”ಪ್ರಜಾಕೀಯ’ದಿಂದ ಎಲೆಕ್ಷನ್‌ಗೆ ನಿಂತುಕೊಳ್ಳಬೇಕು ಅಂತ ತುಂಬಾ ಜನ ಕೇಳ್ತಿದ್ದಾರೆ. ಅದಕ್ಕಾಗಿ ವೆಬ್‌ಸೈಟ್ ಮಾಡಿ, ಫಾರ್ಮ್ಯಾಟ್ ರಿಲೀಸ್ ಮಾಡಿದ್ದೇವೆ. ನಮ್ಮ ಪ್ರಜಾಕೀಯ ಪಕ್ಷದಲ್ಲಿ ಜನರೇ ಹೈಕಮಾಂಡ್. ನಾನು ಸಂಸ್ಥಾಪಕ ಅಧ್ಯಕ್ಷನಾಗಿ ಕಾರ್ಮಿಕರ ತರಹ ಕೆಲಸ ಮಾಡುತ್ತೇನೆ. ಪ್ರಚಾರದ ಕೆಲಸದಲ್ಲೂ ನಾನಿರುತ್ತೇನೆ. ಇಲ್ಲಿ ವೋಟರ್ಸ್ ರೆಕಮಂಡೇಶನ್ ಅಂತ ಫಾರ್ಮ್ಯಾಟ್ ಲೆಟರ್ ಇದೆ. ವೆಬ್‌ಸೈಟ್‌ನಿಂದ ಫಾರ್ಮ್ಯಾಟ್ ಲೆಟರ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಎಲೆಕ್ಷನ್‌ಗಾಗಿ ಜನರ ಸಂಪರ್ಕ ಮಾಡಿ ವಿಡಿಯೋ ಮತ್ತು ಮಾಹಿತಿಯನ್ನು ತಿಳಿಸಬಹುದು”
”ನಿಮ್ಮನ್ನ ಹೇಗೆ ನಂಬೋದು, ಎಲ್ಲರೂ ಹೀಗೇ ಹೇಳುತ್ತಾರೆ. ಆಮೇಲೆ ಚುನಾವಣೆಯಲ್ಲಿ ಗೆದ್ದರೆ ನೀವು ಕೈಗೆ ಸಿಗಲ್ಲ” ಅಂತ ನನಗೆ ಕೆಲವರು ಹೇಳಿದ್ದಾರೆ. ಇದು ಪ್ರಜಾಕೀಯದಲ್ಲಿ ಬದಲಾವಣೆ ಆಗಬೇಕಿದೆ. ಇಲ್ಲಿ ನೀವ್ಯಾರನ್ನೂ ನಂಬಬೇಕಾಗಿಲ್ಲ. ನಿಮ್ಮನ್ನ ನೀವು ನಂಬಬೇಕು. ಮತದಾರರ ಪಕ್ಷ ಇದು ಅಂದುಕೊಳ್ಳಿ. ನಮ್ಮನ್ನ ನಾವು ನಂಬಿ ವೋಟ್ ಹಾಕುವುದೇ ಪ್ರಜಾಕೀಯದ ಮೂಲ ಮಂತ್ರ. ”ನಮ್ಮನ್ನ ನಂಬಿ ಹೇಗೆ ವೋಟ್ ಹಾಕೋದು? ಎಲೆಕ್ಟ್ ಆದೋರನ್ನ ನಂಬಬೇಕು ಅಲ್ವಾ?” ಅಂತ ಅಂದುಕೊಳ್ಳಬೇಡಿ. ನಿಮ್ಮನ್ನ ನೀವು ನಂಬೋದು ಅಂದ್ರೆ ವೋಟರ್ ರೆಕಮಂಡೇಶನ್ ಲೆಟರ್‌ಗೆ ನೀವು ಸಹಿ ಹಾಕುವುದಿದ್ದರೆ, ಚುನಾವಣೆಗೆ ನಿಲ್ಲುವವರಿಗೆ ಜವಾಬ್ದಾರಿ ವಹಿಸುವಂತೆ ಹೇಳಿ ಸಹಿ ಹಾಕಿ. ಒಂದ್ವೇಳೆ ಎಲೆಕ್ಷನ್‌ನಲ್ಲಿ ಗೆದ್ದವರು ಸರಿಯಾಗಿ ಕೆಲಸ ಮಾಡದೇ ಇದ್ದರೆ, ಅವರನ್ನು ಅನರ್ಹ ಗೊಳಿಸಬೇಕು. ಅಂತಹ ವ್ಯವಸ್ಥೆ ತರಬೇಕು. ಎಲೆಕ್ಷನ್‌ಗೆ ನಾನು ಬಿಫಾರ್ಮ್ ಕೊಡಲ್ಲ. ನಿಮ್ಮ ಕ್ಷೇತ್ರದ ಜನರೇ ಬಿಫಾರ್ಮ್ ಕೊಡಬೇಕು”
”ಸಿಎಂ ಕ್ಯಾಂಡಿಡೇಟ್ ಕೂಡ ನೀವೇ.. ಯಾರಿಗೆ ಅಧಿಕಾರ ಇರುತ್ತೋ, ಅವರೇ ಸಿಎಂ ಆಗಬಹುದು. ನಾನು ಆಗಬಹುದು, ಇನ್ನೊಬ್ಬರು ಆಗಬಹುದು, ಮತ್ತೊಬ್ಬರು ಆಗಬಹುದು. ವ್ಯಕ್ತಿ ಮುಖ್ಯ ಅಲ್ಲ. ವಿಚಾರ, ತಂತ್ರಜ್ಞಾನ, ಬೇಡಿಕೆ ಈಡೇರಿಸುವುದು ಮುಖ್ಯ. ಇದೆಲ್ಲ ಕಾಲ್ಪನಿಕ ಅಂದುಕೊಳ್ಳಬಹುದು. ಆದರೆ, ಇದೆಲ್ಲ ಸತ್ಯ. ಖಂಡಿತ ಆಗುತ್ತದೆ”
”ಒಂದು ದಿನದ ಪ್ರಜಾಪ್ರಭುತ್ವ ನಮಗೆ ಬೇಡ. ಐದು ವರ್ಷಗಳ ನಿರಂತರ ಪ್ರಭಾಪ್ರಭುತ್ವ ನಮಗೆ ಬೇಕು. ಇದನ್ನ ನಾನು ಸಿನಿಮಾದಲ್ಲೂ ಹೇಳಿದ್ದೇನೆ. ಪ್ರಜೆಗಳು ರಾಜರಾಗಿ ಇರಬೇಕು ಎಂಬುದೇ ನನ್ನ ಆಸೆ. ಪ್ರತಿ ಮನೆ ಮನೆಗೂ ತಲುಪಬೇಕು ಎಂಬುದು ನನ್ನ ಆಶಯ. ಹಳ್ಳಿ ಹಳ್ಳಿಗೂ ತಲುಪಲು ದೊಡ್ಡ ಯಾತ್ರೆ ರೀತಿ ಮಾಡಬೇಕು ಎಂಬ ಯೋಜನೆ ಇದೆ” ಎಂದು ಫೇಸ್‌ಬುಕ್ ಲೈವ್‌ನಲ್ಲಿ ಉಪೇಂದ್ರ ತಿಳಿಸಿದ್ದಾರೆ.

 

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...