ಪ್ರತಿದಿನ ಬೆಳಗ್ಗೆ ನೆನೆಸಿದ 3 ಬಾದಾಮಿ ತಿಂದ್ರೆ ಎಷ್ಟೇಲ್ಲಾ ಪ್ರಯೋಜನಾ ಗೊತ್ತಾ.?

tnit editors
1 Min Read

ಪ್ರತಿದಿನ ಬೆಳಗ್ಗೆ ನೆನೆಸಿದ 3 ಬಾದಾಮಿ ತಿಂದ್ರೆ ಎಷ್ಟೇಲ್ಲಾ ಪ್ರಯೋಜನಾ ಗೊತ್ತಾ.?

ಪ್ರತಿದಿನ ಬೆಳಗ್ಗೆ ಬಾದಾಮಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಪೌಷ್ಟಿಕ ತಜ್ಞರು ಸಲಹೆ ನೀಡುತ್ತಾರೆ. ವಿಶೇಷವಾಗಿ ನೀರಿನಲ್ಲಿ ನೆನೆಸಿದ ಬಾದಾಮಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ದೊರೆಯುತ್ತವೆ.

ಜೀರ್ಣಕ್ರಿಯೆ ಸುಧಾರಣೆ

ಬಾದಾಮಿ ಉತ್ತಮ ಜೀರ್ಣಕ್ರಿಯೆಗಾಗಿ ಬಹಳ ಉಪಯುಕ್ತವಾಗಿದೆ. ಇದು ಅಜೀರ್ಣ ಸಮಸ್ಯೆಗಳನ್ನು ಕಡಿಮೆ ಮಾಡಿ, ಹೊಟ್ಟೆಯ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.

ಹೃದಯ ಆರೋಗ್ಯ ಕಾಪಾಡುತ್ತದೆ

ಬಾದಾಮಿ ಹೃದಯವನ್ನು ಆರೋಗ್ಯವಾಗಿರಿಸಲು ನೆರವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್‌ (LDL) ಪ್ರಮಾಣವನ್ನು ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್‌ (HDL) ಹೆಚ್ಚಿಸುತ್ತದೆ. ಇದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ

ಬಾದಾಮಿಯಲ್ಲಿ ಇರುವ ಮೆಗ್ನೀಸಿಯಮ್‌ ಇನ್ಸುಲಿನ್‌ನ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ.

ಚರ್ಮದ ಕಾಂತಿ ಹೆಚ್ಚಳ

ಬಾದಾಮಿಯಲ್ಲಿ ವಿಟಮಿನ್‌ಗಳು ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ಚರ್ಮದ ಕಾಂತಿಯನ್ನ ಹೆಚ್ಚಿಸಿ, ತ್ವಚೆಯನ್ನು ತಾಜಾ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತವೆ.

ಮೂಳೆಗಳ ಬಲವರ್ಧನೆ

ಬಲವಾದ ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ರಂಜಕ (ಫಾಸ್ಫರಸ್) ಬಾದಾಮಿಯಲ್ಲಿ ಲಭ್ಯವಿದೆ. ನಿಯಮಿತ ಸೇವನೆಯಿಂದ ಮೂಳೆಗಳು ಬಲವಾಗುತ್ತವೆ.

ತೂಕ ನಿಯಂತ್ರಣಕ್ಕೆ ಸಹಕಾರಿ

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಪ್ರತಿದಿನ ಮಿತ ಪ್ರಮಾಣದಲ್ಲಿ ಬಾದಾಮಿ ಸೇವಿಸುವುದು ಒಳಿತು. ಇದು ಹೊಟ್ಟೆ ತುಂಬಿದ ಅನುಭವ ನೀಡುವ ಮೂಲಕ ಅತಿಯಾಗಿ ತಿನ್ನುವ ಪ್ರವೃತ್ತಿಯನ್ನು ಕಡಿಮೆ ಮಾಡುತ್ತದೆ.

ರೋಗನಿರೋಧಕ ಶಕ್ತಿ ವೃದ್ಧಿ

ಬಾದಾಮಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ನಿಯಮಿತ ಸೇವನೆಯಿಂದ ದೇಹದ ರೋಗ ಪ್ರತಿರೋಧಕ ಸಾಮರ್ಥ್ಯ ಸುಧಾರಿಸುತ್ತದೆ.

Share This Article