ಪ್ರಧಾನಿ ಮೋದಿ ಅಡ್ವೆಂಚರ್​ ಯುವಕರೇ ನಾಚುವಂತಿದೆ.. ಮೋದಿ IN ಮ್ಯಾನ್​ VS ವೈಲ್ಡ್

Date:

ಪ್ರಧಾನಿ ನರೇಂದ್ರ ಮೋದಿ ಅವರು ನಿಜಕ್ಕೂ ಸ್ಫೂರ್ತಿದಾಯಕ ವ್ಯಕ್ತಿತ್ವ. ಬಹುಶಃ ಪ್ರತಿಪಕ್ಷದವರು ಸಿದ್ಧಾಂತ, ಅಧಿಕಾರ. ರಾಜಕೀಯವನ್ನು ಬದಿಗಿಟ್ಟು ಒಮ್ಮೆ ಮೋದಿಯವರನ್ನು ಕಂಡ್ರೆ ಅವರ ಅಭಿಮಾನಿಗಳಾದರೂ ಆಶ್ಚರ್ಯವಿಲ್ಲ. ಮೋದಿ ಸದಾ ಆ್ಯಕ್ಟಿವ್ ಆಗಿರ್ತಾರೆ. ಒಂದಲ್ಲ ಒಂದು ರೀತಿಯಲ್ಲಿ ಮೋದಿ ಸುದ್ದಿಯಲ್ಲಿರ್ತಾರೆ.. ಮೋದಿ ಸುದ್ದಿ ಬರೀ ಸುದ್ದಿಯಾಗಿ ಉಳಿಯಲ್ಲ.. ಅದು ಸಿಕ್ಕಾಪಟ್ಟೆ ಸದ್ದು ಕೂಡ ಮಾಡುತ್ತದೆ.
ಜನಸಾಮಾನ್ಯರ ಜೊತೆ ಜನಸಾಮಾನ್ಯರಂತೆ, ಮಕ್ಕಳೊಡನೆ ಮಕ್ಕಳಂತೆ ಬೆರೆಯುವ ಮೋದಿ ಈ ಬಾರಿ ಅಡ್ವೆಂಚರ್ ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ…ಅದಕ್ಕೆ ಸಂಬಂಧಿಸಿದ ವಿಡಿಯೋದ್ದೇ ಈಗ ಸೋಷಿಯಲ್ ಮೀಡಿಯಾದಲ್ಲಿ ಹವಾ..!
ಈ ಹಿಂದೆ ಎಲ್ಲೂ ಕಾಣ ಸಿಗದ ಗೆಟಪ್​ನಲ್ಲಿ ಮೋದಿ ಕಾಣಿಸಿಕೊಂಡಿರುವುದು ಡಿಸ್ಕವರಿ ಚಾನಲ್​ನಲ್ಲಿ ಪ್ರಸಾರವಾಗುವ ಜನಪ್ರಿಯ ಮ್ಯಾನ್​ ವರ್ಸಸ್​ ವೈಲ್ಡ್​ ಎಪಿಸೋಡ್​ನಲ್ಲಿ ಮೋದಿ ಪಾಲ್ಗೊಂಡಿದ್ದಾರೆ. ಆ ಕಾರ್ಯಕ್ರಮದ ಆ್ಯಂಕರ್ ಬಿಯರ್ ಗ್ರಿಲ್ಸ್ ಜೊತೆಗೆ ಉತ್ತರಾಖಂಡ್​ನ ಅರಣ್ಯದಲ್ಲಿ ಮೋದಿ ಸುತ್ತಾಟ ನಡೆಸಿದ್ದಾರೆ. ಅವರು ಕಾಡಿನಲ್ಲಿ ನಡೆದಾಡಿದ್ದಾರೆ, ದೋಣಿಯಲ್ಲಿ ವಿಹರಿಸಿದ್ದಾರೆ. ಅಷ್ಟೇ ಅಲ್ಲದೆ ವೆಪನ್ ಕೂಡ ರೆಡಿ ಮಾಡಿದ್ದಾರೆ..! ಗ್ರಿಲ್ಸ್​ ಪ್ರೋಮೋವನ್ನು ಗ್ರಿಲ್ಸ್ ಟ್ವಿಟರ್​​​​ನಲ್ಲಿ ಶೇರ್ ಮಾಡಿದ್ದು ಇಡೀ ವಿಶ್ವದ ಜನ ಅದನ್ನು ವೀಕ್ಷಿಸಲಿದ್ದಾರೆ. ಪ್ರಾಣಿ ಸಂರಕ್ಷಣೆ ಹಾಗೂ ಪರಿಸರ ಬದಲಾವಣೆಯ ಕುರಿತು ಅರಿವು ಮೂಡಿಸಲು ಭಾರತದ ಅರಣ್ಯದಲ್ಲಿ ಮೋದಿ ಸುತ್ತಾಡಲಿದ್ದಾರೆ ಎಂದು ಗ್ರಿಲ್ಸ್ ಬರ್ಕೊಂಡಿದ್ದಾರೆ, ಆಗಸ್ಟ್ 12ರ ರಾತ್ರಿ 9 ಗಂಟೆಗೆ ಈ ಎಪಿಸೋಡ್ ಪ್ರಸಾರವಾಗಲಿದೆ..ಹೇಗಿರುತ್ತೆ ಮೋದಿ ಅಡ್ವೆಂಚರ್ ಅನ್ನೋದನ್ನು ಅಂದು ನೋಡೋಣ.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ವೇಳಾಪಟ್ಟಿ ಪ್ರಕಟ ಬೆಂಗಳೂರು:...

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ

ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ ಬೆಂಗಳೂರು:...

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ ಬಳಕೆ – ರಾಹುಲ್ ಆರೋಪ

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ : 22 ಬಾರಿ ಬ್ರೆಜಿಲ್ ಮಾಡೆಲ್ ಫೋಟೋ...