ನಮ್ಮ ದೇಶದ ರಾಷ್ಟ್ರೀಯ ಆಟ ಹಾಕಿ ಆದರೂ ಸಹ ಕ್ರಿಕೆಟ್ ಗೆ ಇಲ್ಲಿ ಇರುವ ಪ್ರಾಮುಖ್ಯತೆ ಮತ್ತು ಕ್ರೇಜ಼್ ನಿಮಗೆಲ್ಲರಿಗೂ ತಿಳಿದೇ ಇದೆ. ಇನ್ನು ಈ ಸಲುವಾಗಿಯೋ ಏನೋ ನರೇಂದ್ರ ಮೋದಿ ಅವರು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಭಾರತದಲ್ಲಿ ನಿರ್ಮಿಸಲು ಮುಂದಾಗಿದ್ದಾರೆ.
ಹೌದು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ಸ್ ಅಹಮದಾಬಾದ್ ನಲ್ಲಿ ಈ ದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಸಜ್ಜಾಗಿದೆ. ಸುಮಾರು 1 ಲಕ್ಷದ 10 ಸಾವಿರ ಜನ ಕುಳಿತುಕೊಳ್ಳಬಹುದಾದ ಸಾಮರ್ಥ್ಯವಿರುವ ಕ್ರಿಕೆಟ್ ಕ್ರೀಡಾಂಗಣವನ್ನು ಇಲ್ಲಿ ನಿರ್ಮಿಸಲಾಗುವುದು. ಇನ್ನು ಈ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣವಾದರೆ ಮೇಲ್ಬೋರ್ನ್ ನಲ್ಲಿರುವ ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಕ್ಕಿಂತ ಮೋದಿ ನಿರ್ಮಿಸಲಿರುವ ಕ್ರಿಕೆಟ್ ಕ್ರೀಡಾಂಗಣ ಅತಿ ದೊಡ್ಡದು ಎಂಬ ಕೀರ್ತಿಗೆ ಪಾತ್ರವಾಗಲಿದೆ.