ಪ್ರಪಂಚ ಎಷ್ಟೊಂದು ವಿಸ್ಮಯಗಳ ಆಗರ..! ಇಲ್ಲೆಲ್ಲಾ ಒಂದ್ಸಲ ಆದ್ರೂ ಸುತ್ಬೇಕು ರೀ…!

Date:

ಪ್ರಪಂಚ ಎಷ್ಟೊಂದು ವಿಸ್ಮಯಗಳ ಆಗರ..! ಇಲ್ಲೆಲ್ಲಾ ಒಂದ್ಸಲ ಆದ್ರೂ ಸುತ್ಬೇಕು ರೀ…!

ಪ್ರಪಂಚವೇ ವಿಸ್ಮಯಗಳ ಆಗರ. ಎಷ್ಟೋ ವಿಸ್ಮಯ, ಅಚ್ಚರಿಯ ತಾಣಗಳು ನಮ್ಮ ನಡುವೆ ಇವೆ. ಅಂಥಾ ಕೆಲವು ತಾಣಗಳ ಪರಿಚಯ ಇಲ್ಲಿದೆ.

ಲಿವಿಂಗ್ ರೂಟ್ ಬ್ರಿಡ್ಜ್ : ನಮ್ಮ ಭಾರತದಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾಗಿರುವ ಮೇಘಾಲಯ ರಾಜ್ಯದ ಚಿರಾಪುಂಜಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಸೇತುವೆ .. ! ಈ ಸೇತುವೆ ನಿಸರ್ಗ ನಿರ್ಮಿತ ..! ಇದನ್ನು ಲಿವಿಂಗ್​ ರೂಟ್​ ಬ್ರಿಡ್ಜ್​​ ಅಂತಾರೆ. ಈ ಲಿವಿಂಗ್ ಬ್ರಿಡ್ಜ್​ ಜಗತ್ತಿನಲ್ಲೆ ಅದ್ಭುತವಾದ ತಾಣವಾಗಿದೆ . ಮರದ ಬೇರುಗಳಿಂದ ತೂಗು ಸೇತುವೆಯ ಹಾಗೆ ತನ್ನಷ್ಟಕ್ಕೆ ತಾನೆ ನಿರ್ಮಾಣಗೊಂಡಿರುವ ಈ ಸೇತುವೆಯು ಇಂದಿಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಂದ ನಿರ್ಭಯವಾಗಿ ಬಳಸಲ್ಪಡುತ್ತದಂತೆ ..! ನೀವು ಇದುವರೆಗೆ ಅಲ್ಲಿಗೆ ಹೋಗದೇ ಇದ್ದಲ್ಲಿ ಒಮ್ಮೆ ಆದರೆ ಭೇಟಿ ನೀಡಿ ..!


ಬ್ಯಾಲೆನ್ಸಿಂಗ್ ಬಂಡೆ  : ತಮಿಳುನಾಡಿನ ಮಹಾಬಲಿಪುರಂ ಪಟ್ಟಣದಲ್ಲಿರುವ ಹೆಚ್ಚು ಕಡಿಮೆ ಗೋಲಾಕಾರದ ಈ ಬೃಹತ್ ಬಂಡೆಯು ನಮ್ಮ ಈ ಪ್ರಕೃತಿಯ ಮತ್ತೊಂದು ಆಶ್ಚರ್ಯಗಳಲ್ಲೊಂದು. ಕೃಷ್ಣನ ಬೆಣ್ಣೆಯುಂಡೆ ಎಂದೂ ಕೂಡ ಕರೆಯಲ್ಪಡುವ ಇದು ಮಹಾಬಲಿಪುರಂನ ಸಮುದ್ರ ದಂಡೆಯ ಶಿವ ದೇವಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಮತ್ತೊಂದು ಪ್ರಮುಖ ಆಕರ್ಷಣೀಯ ಕೇಂದ್ರವೂ ಆಗಿದೆ .

ಅಮರನಾಥ ಮಂಜುಗಡ್ಡೆಯ ಶಿವಲಿಂಗ : ಹಿಂದೂಗಳಿಗೆ ಅತ್ಯಂತ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಅಮರನಾಥಿನ ಶಿವಲಿಂಗವು ಒಂದು ಪ್ರಕೃತಿಯ ವಿಸ್ಮಯ. ಗುಹೆಯೊಂದರಲ್ಲಿ ಶಿವಲಿಂಗದ ರೂಪದಲ್ಲಿ ಈ ಒಂದು ಮಂಜುಗಡ್ಡೆಯ ಸ್ಟಾಲಗ್ಮೈಟ್ (ಗವಿಗಂಬ) ಪ್ರತಿ ವರ್ಷ ಮೇ ನಿಂದ ಅಗಸ್ಟ್ ಅವಧಿಯವರೆಗೆ ರೂಪಗೊಳ್ಳುತ್ತದೆ.

ಚುಂಬಕ ಗುಡ್ಡ: ಲಡಾಖ್ ಲೇಹ್-ಕಾರ್ಗಿಲ್-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಲಡಾಖ್ ನ ಲೇಹ್ ಬಳಿಯಲ್ಲಿ ಸುಮಾರು 50 ಕಿ.ಮೀ ದೂರದಲ್ಲಿ ಈ ವಿಸ್ಮಯಕಾರಿ ಚುಂಬಕ ಗುಡ್ಡವು ನೆಲೆಸಿದೆ. ಸುತ್ತಮುತ್ತಲಿನ ಭೂದೃಶ್ಯಾವಳಿಗಳಿಂದ ದೃಷ್ಟಿ ಭ್ರಮೆಯನ್ನು ಉಂಟು ಮಾಡುವ ಈ ಗುಡ್ಡ..ವಾಹನಗಳು ಮೇಲ್ಮುಖವಾಗಿ ತನ್ನಷ್ಟಕ್ಕೆ ತಾನೆ ಚಲಿಸುವಂತೆ ಗೋಚರಿಸುತ್ತವೆ.


ಉಲ್ಕಾಗುಂಡಿ: ಮಹಾರಾಷ್ಟ್ರ ರಾಜ್ಯದ ಬುಲ್ಡಾನಾ ಜಿಲ್ಲೆಯ ಲೋನಾರ್ ಎನ್ನುವಲ್ಲಿ ಈ ಉಲ್ಕಾಗುಂಡಿ ನಿರ್ಮಾಣಗೊಂಡಿದೆ. ಪ್ಲೀಯ್‍ಸ್ಟೊಸಿನ್ ಎಪೋಕ್ ಕಾಲಮಾನದಲ್ಲಿ ನಿರ್ಮಿತವಾದ ಈ ಕೆರೆಯು ಸಲೈನ್ ನೀರನ್ನು ಹೊಂದಿದೆ. ಕೆರೆಯ ಬಳಿಯಲ್ಲಿ ವಿಷ್ಣು ದೇವರ ದೈತ್ಯ ಸೂದನ ಮತ್ತು ಕಮಾಲಾ ಜಿ ದೇವಸ್ಥಾನಗಳನ್ನು ಕಾಣಬಹುದು.


ಬೊರ್‍ರಾ ಗುಹೆಗಳು: ಆಂಧ್ರಪ್ರದೇಶದ ಅನಂತಗಿರಿ ಪರ್ವತ ಶ್ರೇಣಿಯ ಅರಕು ಕಣಿವೆಯಲ್ಲಿ ಈ ಅಚ್ಚರಿ ಆಗರ ಪ್ರಾಕೃತಿಕ ಗುಹೆಗಳು ಇಲ್ಲಿವೆ. ಭಾರತದಲ್ಲಿ ಕಂಡುಬರುವ ಅತಿ ಆಳವಾದ ಗುಹೆ ಇದಾಗಿದ್ದು ಸುಮಾರು 80 ಮೀ. ಆಳವನ್ನು ತಲುಪುತ್ತದೆ.


ಬಿಸಿ ನೀರಿನ ಬುಗ್ಗೆಗಳು: ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಪಾರ್ವತಿ ಕಣಿವೆಯಲ್ಲಿರುವ ಮಣೀಕರಣವು ಒಂದು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವುದೂ ಅಲ್ಲದೆ ಪ್ರಾಕೃತಿಕವಾಗಿ ನಿರ್ಮಾಣಗೊಂಡ ಬಿಸಿ ನೀರಿನ ಬುಗ್ಗೆಗಳಿಗೆ ಮನೆಯೂ ಇದಾಗಿದ್ದು, ವಿಸ್ಮಯ ತಾಣಗಳಲ್ಲೊಂದು  .

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ!

ಬೆಂಗಳೂರಿನಲ್ಲಿ ಘೋರ ಘಟನೆ: ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ! ಬೆಂಗಳೂರು: ಬಾಗಲಗುಂಟೆ...

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ  ಬೆಂಗಳೂರು: ರಾಜ್ಯದ...

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...