ಸ್ಯಾಂಡಲ್ವುಡ್ ನಟರೂ ವಿದೇಶ ಪ್ರವಾಸಕ್ಕೆ ಅವರಿಗನಿಸಿದಾಗಾ ಹೋಗಿ ಬರ್ತಾರೆ. ‘ಪವರ್ ಸ್ಟಾರ್’ ಪುನೀತ್ ಫ್ಯಾಮಿಲಿಯೂ ಪ್ರವಾಸದಲ್ಲಿದೆ. ಮೊನ್ನೆ ಮೊನ್ನೆಯಷ್ಟೇ ‘ರಿಯಲ್ ಸ್ಟಾರ್’ ಉಪೇಂದ್ರ ಕುಟುಂಬವೂ ಅಮೇರಿಕಾದತ್ತ ಪ್ರಯಾಣ ಬೆಳೆಸಿತ್ತು. ಉಪ್ಪಿ ವಿದೇಶದಲ್ಲಿದ್ದರೂ, ರಾಜಕೀಯ ಮಾತ್ರ ಮರೆತ್ತಿಲ್ಲ. ಒಂದರ ಹಿಂದೆ ಒಂದರಂತೆ ಭಾರತ ಮತ್ತು ಅಮೇರಿಕಾ ಹೋಲಿಸಿ ಉಪ್ಪಿ ಟ್ವೀಟ್ ಮಾಡುತ್ತಿದ್ದಾರೆ.
ಭಾರತ ಹಾಗೂ ಅಮೇರಿಕಾ ರಸ್ತೆಗಳಿಗೆ ವ್ಯತ್ಯಾಸ ಎಷ್ಟಿದೆ ಎಂದು ಫೋಟೋ ಮೂಲಕ ಜನರಿಗೆ ತಲುಪಿಸಲು ಪ್ರಯತ್ನ ಪಟ್ಟಿದ್ದಾರೆ
ಸದ್ಯ ಉಪ್ಪಿ ಕುಟುಂಬ ಅಮೇರಿಕಾದಲ್ಲಿ ಬೇಸಿಗೆ ರಜೆ ಕಳೆಯುತ್ತಿದೆ. ಮೊನ್ನೆಯಿಂದಲೂ ಅಮೇರಿಕಾದಿಂದ ಪ್ರವಾಸದ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ.
ಅಮೇರಿಕಾದ ಪ್ರಮುಖ ಸ್ಥಳಗಳಿಗೆ ಮಕ್ಕಳೊಂದಿಗೆ ಭೇಟಿ ನೀಡುತ್ತಿದ್ದಾರೆ. ಕಾರಿನಲ್ಲಿ ಕನ್ನಡ ಹಾಡೊಂದನ್ನು ಹಾಡುತ್ತ ಕನ್ನಡಿಗರ ಮನಗೆದ್ದಿದ್ದರು. ಇದೀಗ ಭಾರತ – ಅಮೇರಿಕಾದ ರಾಜಕಾರಣದ ಕುರಿತು ಟ್ವೀಟ್ ಮಾಡಿದ್ದಾರೆ. ಭಾರತ ಮತ್ತು ಅಮೇರಿಕಾ ರಸ್ತೆಯ ಫೋಟೊಗಳನ್ನು ಹಾಕಿ ‘ನಮ್ಮ ದೇಶಕ್ಕೂ ಬೇರೆ ದೇಶಕ್ಕೂ ಇರುವ ವ್ಯತ್ಯಾಸ..
ರಾಜಕೀಯದ ಕೊಡುಗೆ’ ಅಂತಾ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪ್ರವಾಸದ ನಡುವೆಯೂ ರಾಜಕಾರಣವನ್ನು ಮರೆತಿಲ್ಲ ಅನ್ನೋದನ್ನು ಉಪೇಂದ್ರ ರವಾನಿಸಿದ್ದಾರೆ.